ಸಿನಿಮಾ ಸುದ್ದಿ

2 ವರ್ಷಗಳಿಂದ ಕಾಯ್ದಿದ್ದ ಯಶ್ ಅಭಿಮಾನಿಗಳಿಗೆ ಗುಡ್ ​ನ್ಯೂಸ್: ಡಿಸೆಂಬರ್ 8ರಂದು ಹೊಸ ಸಿನಿಮಾ ಶೀರ್ಷಿಕೆ ಅನೌನ್ಸ್!

ನಟ, ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹೊ ಸಿನಿಮಾ ಕುರಿತು ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 2022ರ ಏಪ್ರಿಲ್‌ನಲ್ಲಿ ‘ಕೆಜಿಎಫ್ –2’ ಸಿನಿಮಾ ಬಿಡುಗಡೆಯಾಗಿತ್ತು.

2 ವರ್ಷಗಳಿಂದ ಕಾಯ್ದಿದ್ದ ಯಶ್ ಅಭಿಮಾನಿಗಳಿಗೆ ಗುಡ್ ​ನ್ಯೂಸ್: ಡಿಸೆಂಬರ್ 8ರಂದು ಹೊಸ ಸಿನಿಮಾ ಶೀರ್ಷಿಕೆ ಅನೌನ್ಸ್!
ಯಶ್
Published On :

ರಾಕಿಂಗ್​ ಸ್ಟಾರ್​ ಯಶ್​ ಕೆಜಿಎಫ್​ ಬಳಿಕ ಹೊಸದೊಂದು ಸಿನಿಮಾದಲ್ಲಿ ಮಗ್ನರಾಗಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿತ್ತು. ಆದರೆ ಅದು ಯಾವಾಗ ಬರುತ್ತೆ? ಯಶ್​ ಮತ್ತೆ ಸ್ಕ್ರೀನ್​ ಮೇಲೆ ಅಬ್ಬರಿಸೋದು ಯಾವಾಗ? ಎಂಬುದು ಅಭಿಮಾನಿಗಳ ಕುತೂಹಲತೆಗೆ ಕಾರಣವಾಗಿತ್ತು. ಆದರೀಗ ಅದಕ್ಕೆ ದಿನ ನಿಗದಿಯಾಗಿದೆ. ಇದೇ ವಾರ ಅಭಿಮಾನಿಗಳಿಗೆ ರಾಕಿಭಾಯ್​ ಸಿಹಿ ಸುದ್ದಿ ನೀಡಲು ಮುಂದಾಗಿದ್ದಾರೆ.

ನಟ, ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹೊ ಸಿನಿಮಾ ಕುರಿತು ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.  2022ರ ಏಪ್ರಿಲ್‌ನಲ್ಲಿ ‘ಕೆಜಿಎಫ್ –2’ ಸಿನಿಮಾ ಬಿಡುಗಡೆಯಾಗಿತ್ತು. ಇದಾದ ಬಳಿಕ ಯಶ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಪ್ರಶ್ನೆ ಮೂಡಿತ್ತು. ಆದರೆ, ಹೊಸ ಸಿನಿಮಾ ಕುರಿತು ಇತ್ತೀಚೆಗೆ ಮಾತನಾಡಿದ್ದ ಅವರು, ಶೀಘ್ರವೇ ಮಾಹಿತಿ ನೀಡುವುದಾಗಿ ಹೇಳಿದ್ದರು. ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

‘ಈಗ ಸಮಯ ಬಂದಿದೆ. ಡಿಸೆಂಬರ್ 8ರಂದು ಮುಂಜಾನೆ 9:55ಕ್ಕೆ ಟೈಟಲ್ ಅನೌನ್ಸ್ ಆಗಲಿದೆ’ ಎಂದು ‘ಟ್ವಿಟ್ಟರ್ ’ನಲ್ಲಿ ಯಶ್ ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ಪೋಸ್ಟರ್​ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಯಶ್ 19’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಹಾಲಿವುಡ್ ತಂತ್ರಜ್ಞರು ಕೂಡ ಈ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಎಲ್ಲಾ ಪ್ರಶ್ನೆಗೆ ಡಿ.8ರಂದು ಉತ್ತರ ಸಿಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.