ಜನರಿಗೆ ಕಿವಿಯಲ್ಲಿ ಕೂದಲು ಬೆಳೆಯೋದ್ಯಾಕೆ?; ಸಮಂತಾ ಮುಖ ಮುದುಕಿಯಂತಿದೆ ಎಂದ ನಿರ್ಮಾಪಕನಿಗೆ ನಟಿ ತಿರುಗೇಟು
ಸಮಂತಾಗೆ ನಾಯಕಿಯಾಗಿ ವೃತ್ತಿಜೀವನ ಮುಗಿದಿದೆ ಮತ್ತು ಅವರು ಮತ್ತೆ ಸ್ಟಾರ್ಡಮ್ಗೆ ಮರಳಲು ಸಾಧ್ಯವಿಲ್ಲ. ತನಗೆ ಯಾವುದೇ ಪಾತ್ರಗಳು ಬಂದರೂ ಅವುಗಳನ್ನು ಸ್ವೀಕರಿಸಬೇಕು ಮತ್ತು ಪಾತ್ರಗಳು ಆಯ್ಕೆಯಾಗಬಾರದು ಎಂದಿದ್ದ ತೆಲುಗು ನಿರ್ಮಾಪಕ ಚಿಟ್ಟಿ ಬಾಬುಗೆ ನಟಿ ಸಮಂತಾ ರುತ್ ಪ್ರಭು ಖಡಕ್ ತಿರುಗೇಟು ನೀಡಿದ್ದಾರೆ.

ಮುಂಬೈ: ಸಮಂತಾಗೆ ನಾಯಕಿಯಾಗಿ ವೃತ್ತಿಜೀವನ ಮುಗಿದಿದೆ ಮತ್ತು ಅವರು ಮತ್ತೆ ಸ್ಟಾರ್ಡಮ್ಗೆ ಮರಳಲು ಸಾಧ್ಯವಿಲ್ಲ. ತನಗೆ ಯಾವುದೇ ಪಾತ್ರಗಳು ಬಂದರೂ ಅವುಗಳನ್ನು ಸ್ವೀಕರಿಸಬೇಕು ಮತ್ತು ಪಾತ್ರಗಳು ಆಯ್ಕೆಯಾಗಬಾರದು ಎಂದಿದ್ದ ತೆಲುಗು ನಿರ್ಮಾಪಕ ಚಿಟ್ಟಿ ಬಾಬುಗೆ ನಟಿ ಸಮಂತಾ ರುತ್ ಪ್ರಭು ಖಡಕ್ ತಿರುಗೇಟು ನೀಡಿದ್ದಾರೆ.
ನಟಿ ತನ್ನ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದು ಚಿಟ್ಟಿ ಬಾಬು ಅವರನ್ನು ಗೇಲಿ ಮಾಡುತ್ತಿರುವುದು ಎಂದು ಅವರ ಅಭಿಮಾನಿಗಳು ಊಹಿಸಿದ್ದಾರೆ.
ಈಗ ಅಳಿಸಲಾಗಿರುವ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಸಮಂತಾ ಅವರು ಗೂಗಲ್ನಲ್ಲಿ 'ಜನರ ಕಿವಿಯಿಂದ ಕೂದಲು ಹೇಗೆ ಬೆಳೆಯುತ್ತಾವೆ'?' ಎಂದು ಹುಡುಕಿದ್ದಾರೆ. ಅದಕ್ಕೆ ಸಿಕ್ಕಿರುವ ಉತ್ತರವೇನೆಂದರೆ, ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿರುವ ಕಾರಣ ಕೂದಲು ಬೆಳೆಯುತ್ತವೆ ಎಂದಿದೆ. ಈ ಸ್ಕ್ರೀನ್ ಶಾಟ್ ಅನ್ನು #IYKYK ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಚಿಟ್ಟಿ ಬಾಬುಗೆ ಗೇಲಿ ಮಾಡಿರುವ ಪೋಸ್ಟ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
'ನಾಯಕಿಯಾಗಿ ಸಮಂತಾರ ವೃತ್ತಿಜೀವನ ಮುಗಿದಿದೆ ಮತ್ತು ಅವರು ಮತ್ತೆ ಸ್ಟಾರ್ ನಟಿಯಾಗಲು ಸಾಧ್ಯವಿಲ್ಲ. ಅವರು ತಮಗೆ ಬರುವ ಯಾವುದೇ ಆಫರ್ಗಳನ್ನು ಒಪ್ಪಿಕೊಳ್ಳುತ್ತಾ ತಮ್ಮ ಪ್ರಯಾಣವನ್ನು ಮುಂದುವರಿಸಬೇಕು' ಎಂದು ಚಿಟ್ಟಿ ಬಾಬು ಹೇಳಿಕೊಂಡಿದ್ದರು.
ಮುಂದುವರಿದು, ಸಮಂತಾ ಸಹಾನುಭೂತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಬಾರಿಯೂ ಸೆಂಟಿಮೆಂಟ್ ಕೆಲಸ ಮಾಡುವುದಿಲ್ಲ. ಪಾತ್ರ, ಸಿನಿಮಾ ಚೆನ್ನಾಗಿದ್ದರೆ ಜನ ನೋಡ್ತಾರೆ. ಇದೆಲ್ಲ ಹುಚ್ಚುತನದ ಕೆಲಸಗಳು. ಹೀರೋಯಿನ್ ಪಟ್ಟ ಕಳೆದುಕೊಂಡಿರುವ ಸಮಂತಾ ಅವರು, ಶಕುಂತಲಾ ಪಾತ್ರಕ್ಕೆ ಹೇಗೆ ಸೂಟ್ ಆಗ್ತಾರೆ ಅಂತ ಆಶ್ಚರ್ಯವಾಗಿದೆ ನನಗೆ. ಹೀಗಾಗಿ, ಶಾಕುಂತಲಂ ಸಿನಿಮಾದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ' ಎಂದು ತೆಲುಗು ನಿರ್ಮಾಪಕರು ಹೇಳಿದ್ದರು.
ಇದನ್ನೂ ಓದಿ: ಕೈಗೆ ಗಾಯ: ಶೂಟಿಂಗ್ ವೇಳೆ ನಟಿ ಸಮಂತಾಗೆ ಏನಾಯ್ತು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


