ಅವಳಿ ಮಕ್ಕಳ ಪೂರ್ಣ ಹೆಸರು ಬಹಿರಂಗಪಡಿಸಿದ ನಟಿ ನಯನತಾರಾ!
ಕುಟುಂಬ ಮತ್ತು ಸಿನಿಮಾ ಎರಡರ ಕಡೆಗೂ ನಟಿ ನಯನತಾರಾ ಅವರು ಗಮನ ಹರಿಸುತ್ತಿದ್ದಾರೆ. ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ

ಕುಟುಂಬ ಮತ್ತು ಸಿನಿಮಾ ಎರಡರ ಕಡೆಗೂ ನಟಿ ನಯನತಾರಾ ಅವರು ಗಮನ ಹರಿಸುತ್ತಿದ್ದಾರೆ. ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವಳಿ ಗಂಡು ಮಕ್ಕಳನ್ನು ಪಡೆದರು.
ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಮದುವೆ ಆದಾಗಿನಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಮುದ್ದು ಮಕ್ಕಳ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳ ಶೂಟಿಂಗ್ನಲ್ಲಿಯೂ ನಯನತಾರಾ ಬ್ಯುಸಿ ಆಗಿದ್ದಾರೆ.
ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಲಾದ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ನಟಿ ನಯನತಾರಾ ವೇದಿಕೆಯಲ್ಲಿ ತನ್ನ ಇಬ್ಬರು ಪುತ್ರರ ಪೂರ್ಣ ಹೆಸರನ್ನು ಹಂಚಿಕೊಂಡಿದ್ದಾರೆ. ಮೊದಲ ಮಗುವಿನ ಹೆಸರು "ಉಯಿರ್ ರುದ್ರೋನಿಲ್ ಎನ್ ಶಿವನ್" ಮತ್ತು ಎರಡನೇ ಮಗುವಿನ ಹೆಸರು "ಉಲಗ್ ಧೈವೇಗ್ ಎನ್ ಶಿವನ್" ಎಂದು ಬಹಿರಂಗಪಡಿಸಿದ್ದಾರೆ.
ಜೂನ್ 9, 2022 ರಂದು ಮಹಾಬಲಿಪುರಂನ ರೆಸಾರ್ಟ್ನಲ್ಲಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ವಿವಾಹವಾದ ದಂಪತಿಗಳು ಅಕ್ಟೋಬರ್ 9 ರಂದು ಅವಳಿ ಗಂಡು ಮಕ್ಕಳನ್ನು ದತ್ತು ಪಡೆದಿದ್ದರು. ಇದರ ಕುರಿತು ಅನೇಕ ವಿರೋಧ ಪ್ರತಿಕ್ರಿಯೆಗಳು ಬಂದಿದ್ದು, ಅದರಿಂದಾಗಿ ನಟಿ ನಯನತಾರಾ ದಂಪತಿಗಳು ನ್ಯಾಯಾಲಯದ ಟೀಕೆಗೆ ಒಳಗಾಗಿದ್ದರು, ನಂತರ ಸರಿಯಾದ ದಾಖಲೆಗಳಿಂದ ಎಲ್ಲವನ್ನು ಬಗೆಹರಿಸಿಕಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


