ರವಿಚಂದ್ರನ್ ಸರ್ ಜೊತೆ ಕೆಲಸ ಮಾಡಿದ್ದು ನನ್ನ ಪಾಲಿಗೆ ಅದ್ಭುತ: ಕಿರೀಟಿ ರೆಡ್ಡಿ
ರಾಧಾಕೃಷ್ಣ ನಿರ್ದೇಶನದ, ಕಿರೀಟಿ ರೆಡ್ಡಿಯನ್ನು ನಾಯಕನಾಗಿ ಪರಿಚಯಿಸುತ್ತಿರುವ ಸಿನಿಮಾದ ಡಬ್ಬಿಂಗ್ ಭಾಗ ಶೇ.50 ರಷ್ಟು ಪೂರ್ಣಗೊಂಡಿದೆ.

ರಾಧಾಕೃಷ್ಣ ನಿರ್ದೇಶನದ, ಕಿರೀಟಿ ರೆಡ್ಡಿಯನ್ನು ನಾಯಕನಾಗಿ ಪರಿಚಯಿಸುತ್ತಿರುವ ಸಿನಿಮಾದ ಡಬ್ಬಿಂಗ್ ಭಾಗ ಶೇ.50 ರಷ್ಟು ಪೂರ್ಣಗೊಂಡಿದೆ.
ಚಿತ್ರದಲ್ಲಿ ನಟಿಸಿರುವುದರ ಬಗ್ಗೆ ಪ್ರಮುಖವಾಗಿ ರವಿಚಂದ್ರನ್ ಅವರೊಂದಿಗೆ ಕೆಲಸ ಮಾಡಿರುವುದರ ಬಗ್ಗೆ ಮಾತನಾಡಿರುವ ಕಿರೀಟಿ ರೆಡ್ಡಿ, ರವಿಚಂದ್ರನ್ ಸರ್ ಜೊತೆಗೆ ಕೆಲಸ ಮಾಡಿದ್ದು, ನನ್ನ ಪಾಲಿಗೆ ಅದ್ಭುತವಾಗಿತ್ತು, ನಾನು ಅವರೊಂದಿಕೆ ಕೆಲಸ ಮಾಡಿದ್ದೇನೆ ಎಂಬುದು ನಂಬಿಕೆಗೂ ನಿಲುಕದ್ದಾಗಿತ್ತು, ನನ್ನ ಕನಸು ನನಸಾಗಿದೆ ಹಾಗೂ ಅವರೊಂದಿಗೆ ಕೆಲಸ ಮಾಡಿದ್ದನ್ನು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿನಿಮಾ ಬಗ್ಗೆ ವಿಶ್ವಾಸ ಹೊಂದಿರುವ ಕಿರೀಟಿ ರೆಡ್ಡಿ, ಸಿನಿಮಾದಲ್ಲಿ ಎಲ್ಲವೂ ಸರಿಯಾಗಿ ನಡೆದುಕೊಂಡುಹೋಗುತ್ತಿದೆ. ಇಡೀ ತಂಡ ವಿಶ್ವಾಸ ಹೊಂದಿದೆ ಎಂದು ಹೇಳಿದ್ದಾರೆ. ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದು, ಜೆನಿಲಿಯಾ ರಿತೇಶ್ ದೇಶ್ ಮುಖ್ ಈ ಸಿನಿಮಾ ಮೂಲಕ ಮತ್ತೊಮ್ಮೆ ದಕ್ಷಿಣ ಭಾರತೀಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರ ತಂಡ ಅವರೊಂದಿಗೆ ಬೆಂಗಳೂರಿನಲ್ಲಿ ಚಿತ್ರೀಕರಣವನ್ನೂ ಮಾಡಿತ್ತು.
ಮೊದಲ ಬಾರಿ ನಾಯಕ ನಟನಾಗಿ ನಟಿಸುತ್ತಿರುವ ಕಿರೀಟಿಗೆ ಇಷ್ಟು ದೊಡ್ಡ ತಾರಾಗಣದೊಂದಿಗೆ ನಟಿಸುವುದಕ್ಕೆ ಆತಂಕವಿತ್ತೇ? ಎಂಬುದಕ್ಕೂ ಕಿರೀಟಿ ಅವರೇ ಉತ್ತರ ನೀಡಿದ್ದು, ಆ ರೀತಿಯ ಯಾವುದೇ ಆತಂಕ ಇರಲಿಲ್ಲ ಎಂದು ಹೇಳಿದ್ದಾರೆ.
"ನಾನು ಅದಾಗಲೇ ಸಿದ್ಧನಾಗಿದ್ದೆ ಹಾಗೂ ಕ್ಯಾಮರಾ ಎದುರಿಸುವ ವಿಶ್ವಾಸ ಹೊಂದಿದ್ದೆ. ಅಗಾಧ ಅನುಭವ ಹೊಂದಿದ್ದ ತಂಡದೊಂದಿಗೆ ಕಾರ್ಯನಿರ್ವಹಿಸಿರುವುದು ಅದೃಷ್ಟಕರ ಎನ್ನುತ್ತಾರೆ ಕಿರೀಟಿ.
ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರನಾಗಿರುವ ಕಿರೀಟಿ, ಸೆಟ್ ನಲ್ಲಿ ತಮ್ಮ ತಂದೆಯ ಇರುವಿಕೆ ಉತ್ಸಾಹ ತುಂಬುತ್ತಿತ್ತು. ನಿರ್ದೇಶಕನಾಗಬೇಕೆಂಬುದು ಅವರ ಕನಸಾಗಿತ್ತು. ಭಾಗಶಃ ಆ ಕನಸನ್ನು ನನ್ನ ಮೂಲಕ ಅವರು ನನಸಾಗಿಸಿಕೊಳ್ಳುತ್ತಿದ್ದಾರೆ, ನನ್ನ ಬಗ್ಗೆ ಅವರು ಹೆಮ್ಮೆಪಡುವಂತಾಗಬೇಕು ಎಂಬುದೇ ನನ್ನ ಕನಸು ಎಂದು ಕಿರೀಟಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


