ಸಿನಿಮಾ ಸುದ್ದಿ

ಸಂಕ್ರಾಂತಿಗೆ ಆದಿಪುರುಷ್ ಜೊತೆ ವಾರಿಸು ಬಾಕ್ಸ್ ಆಫೀಸ್ ಪೈಪೋಟಿ!

ದೀಪಾವಳಿ ಸಂದರ್ಭದಲ್ಲಿ ವಿಜಯ್ ದಳಪತಿ ಅಭಿನಯದ ಬಹು ನಿರೀಕ್ಷಿತ ವಾರಿಸು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರ ಘೋಷಿಸಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ವಾರಿಸು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಸಂಕ್ರಾಂತಿಗೆ ಆದಿಪುರುಷ್ ಜೊತೆ ವಾರಿಸು ಬಾಕ್ಸ್ ಆಫೀಸ್ ಪೈಪೋಟಿ!
ಪ್ರಭಾಸ್, ವಿಜಯ್
Published On :

ಚೆನ್ನೈ: ದೀಪಾವಳಿ ಸಂದರ್ಭದಲ್ಲಿ ವಿಜಯ್ ದಳಪತಿ ಅಭಿನಯದ ಬಹು ನಿರೀಕ್ಷಿತ ವಾರಿಸು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರ ಘೋಷಿಸಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ವಾರಿಸು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.

ದೀಪಾವಳಿ ದಿನದಂದು ವಿಜಯ್ ಅವರ ಹೊಸ ಫೋಸ್ಟರ್ ಒಂದು ಬಿಡುಗಡೆಯಾಗಿದೆ. ನೆಲದ ಮೇಲೆ ನೋವಿನಲ್ಲಿ ಮಲಗಿರುವ ಜನರ ಮಧ್ಯೆ ವಿಜಯ್ ಸುತ್ತಿಗೆ ಹಿಡಿದು ನಡೆಯುತ್ತಿರುವ ಆಕರ್ಷಕ ಫೋಸ್ಟರ್ ಇದಾಗಿದೆ. ತಮಿಳಿನ ಜೊತೆಗೆ ತೆಲುಗಿನಲ್ಲಿಯೂ ಅದೇ ದಿನ ವಾರಸು ಬಿಡುಗಡೆಯಾಗಲಿದೆ. ವಾರಿಸು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಪ್ರಭು, ಶರತ್ ಕುಮಾರ್, ಶ್ರೀಕಾಂತ್ ಮತ್ತಿತರರು ನಟಿಸಿದ್ದಾರೆ.

ಸಂಕ್ರಾಂತಿ ಸಂದರ್ಭದಲ್ಲಿ ಪ್ರಭಾಸ್ ನಟನೆಯ ಆದಿಪುರುಷ್ ಜೊತೆಗೆ ವಾರಿಸು ಬಾಕ್ಸ್ ಆಫೀಸ್ ಪೈಪೋಟಿ ನಡೆಸಲಿದೆ. ರಾಮಾಯಣ ಮಹಾಕಾವ್ಯ ಆಧಾರಿತ ಆದಿಪುರುಷ್ ಚಿತ್ರಕ್ಕೆ ಓಂ ರಾವತ್ ಕಥೆ ಬರೆದು, ಅವರೇ ನಿರ್ದೇಶಿಸಿದ್ದು, ಸೈಫ್ ಅಲಿಖೈನ್, ಕೃತಿ ಸಾನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕ್ರಾಂತಿಗೂ ಎರಡು ದಿನ ಮುನ್ನ ಜನವರಿ 12 ರಂದು ಈ ಎರಡು ಚಿತ್ರಗಳು ಬಿಡುಗಡೆಯಾಗಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.