ಸಿನಿಮಾ ಸುದ್ದಿ

ಕನ್ನಡದ ಹಾಸ್ಯ ನಟ ಗಂಡಸಿ ನಾಗರಾಜ್ ವಿಧಿವಶ

ಸ್ಯಾಂಡಲ್‌ವುಡ್‌ನ ಜನಪ್ರಿಯ ಕಾಸ್ಟ್ಯೂಮ್ ಡಿಸೈನರ್ ಮತ್ತು ಹಾಸ್ಯ ನಟ ಗಂಡಸಿ ನಾಗರಾಜ್ ಇಂದು ನಿಧನರಾಗಿದ್ದಾರೆ. ಅನಾರೊಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್ ಅವರು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಕನ್ನಡದ ಹಾಸ್ಯ ನಟ ಗಂಡಸಿ ನಾಗರಾಜ್ ವಿಧಿವಶ
ಗಂಡಸಿ ನಾಗರಾಜ್
Published On :

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಕಾಸ್ಟ್ಯೂಮ್ ಡಿಸೈನರ್ ಮತ್ತು ಹಾಸ್ಯ ನಟ ಗಂಡಸಿ ನಾಗರಾಜ್ ಇಂದು ನಿಧನರಾಗಿದ್ದಾರೆ. ಅನಾರೊಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್ ಅವರು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಅವರಿಗೆ 65 ವರ್ಷ ವಯಸ್ಸಾಗಿತ್ತು. ಗಂಡಸಿ ನಾಗರಾಜ್ ಕನ್ನಡದ 1,000 ಕ್ಕೂ ಹೆಚ್ಚು ಚಲನಚಿತ್ರಗಳ ನಟಿಸಿದ್ದಾರೆ.  ಗಂಡಸಿ ನಾಗರಾಜ್ ಅವರು ಗುಂಡನ ಮದುವೆ, ರಾಯರ ಮಗ, ಹಬ್ಬ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಚಿತ್ರಗಳಲ್ಲಿ ನಟಿಸಿದ್ದರು.

ಹಾಗೆಯೇ, ನವರಸ ನಾಯಕ ಜಗ್ಗೇಶ್ ಅವರ ಆಪ್ರಾಗಿದ್ದು ವಸ್ತ್ರಾಲಂಕಾರ ಮಾಡುತ್ತಿದ್ದರು. ಅವರು ನಟಿಸಿದ ಪ್ರಮುಖ ಚಿತ್ರಗಳೆಂದರೆ ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಹಬ್ಬ, ಶ್ರೀ ಮಂಜುನಾಥ ಮತ್ತು ರಾಜ ಹುಲಿಯಲ್ಲಿ ಅವರು ಅಭಿನಯಿಸಿದ್ದಾರೆ. ಜೊತೆಗೆ ಕೆ3 ಚಿತ್ರದಲ್ಲಿ ಕೊನೆ ಬಾರಿಗೆ ಅವರು ನಟಿಸಿದ್ದರು.

2020ರಲ್ಲಿಯೇ ತಮ್ಮ ಎರಡೂ ಕಿಡ್ನಿಯನ್ನು ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗಿದ್ದ ಗಂಡಸಿ ನಾಗರಾಜ್‌, ಇತ್ತೀಚಿನ ದಿನಗಳಲ್ಲಿ ಹಾಸಿಗೆ ಹಿಡಿದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.