ಸಿನಿಮಾ ಸುದ್ದಿ

ನಟಿ ಸಮಂತಾ ರುತ್ ಪ್ರಭು ಅಭಿನಯದ ‘ಶಾಕುಂತಲಂ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ನಟಿ ಸಮಂತಾ ರುತ್ ಪ್ರಭು ಅಭಿನಯದ ಪೌರಾಣಿಕ ಕಥೆಯುಳ್ಳ ಸಿನಿಮಾ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಸಿದ್ದವಾಗಿದೆ. ಸಮಂತಾ ಮತ್ತು ದೇವ್ ಮೋಹನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ಕ್ಕೆ ತೆರೆ ಕಾಣಲಿದೆ.

ನಟಿ ಸಮಂತಾ ರುತ್ ಪ್ರಭು ಅಭಿನಯದ ‘ಶಾಕುಂತಲಂ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
ಶಾಕುಂತಲಂ ಸಿನಿಮಾ ಫೋಸ್ಟರ್
Published On :

ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಅಭಿನಯದ ಪೌರಾಣಿಕ ಕಥೆಯುಳ್ಳ ಸಿನಿಮಾ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಸಿದ್ದವಾಗಿದೆ. ಸಮಂತಾ ಮತ್ತು ದೇವ್ ಮೋಹನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ಕ್ಕೆ ತೆರೆ ಕಾಣಲಿದೆ. ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಬಾಲನಟಿಯಾಗಿ ಸಿನಿಮಾದಲ್ಲಿ ಕಮಾಲ್ ಮಾಡಲು ಸಿದ್ದರಾಗಿದ್ದಾರೆ.

ದಿಲ್ ರಾಜ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. ಗುಣ ಶೇಖರ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿದೆ.

ಈ ಸಿನಿಮಾದ ಫಸ್ಟ್ ಲುಕ್ ಕಂಡು ಜನರು ಬೆರಗಾಗಿದ್ದರು. ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಈ ಸಿನಿಮಾವು ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟಗಳು, ಗಾಂಧಿಪೇಟ್ ಲೇಕ್ ಈ ಸ್ಥಳಗಳಲ್ಲಿ ಚಿತ್ರಿಕರಣಗೊಂಡಿದೆ.

ಇನ್ನು ಇದರಲ್ಲಿ ಕಬೀರ್ ದುಹನ್ ಸಿಂಗ್, ಅದಿತಿ ಬಾಲನ್, ಮಧು, ಪ್ರಕಾಶ್ ರಾಜ್, ಗೌತಮಿ, ಮೋಹನ್ ಬಾಬು ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.