ಅದ್ಭುತ ಕ್ಷಣ: ಮಗಳು ಸೌಂದರ್ಯ ಮತ್ತು ಮೊಮ್ಮಗ ವೀರ್ ಜೊತೆ ರಜನಿಕಾಂತ್!
ನಿನ್ನೆ ತನ್ನ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸೌಂದರ್ಯ ರಜನಿಕಾಂತ್ , ಬರ್ತ್ ಡೇ ಸೆಲಬ್ರೇಷನ್ ನ ಒಂದು ದಿನದ ನಂತರ ತಮ್ಮ ಮಗನೊಂದಿಗೆ ಕುಟುಂಬದ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.

ಚೆನ್ನೈ: ನಿನ್ನೆ ತನ್ನ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸೌಂದರ್ಯ ರಜನಿಕಾಂತ್, ಬರ್ತ್ ಡೇ ಸೆಲಬ್ರೇಷನ್ ನ ಒಂದು ದಿನದ ನಂತರ ತಮ್ಮ ಮಗನೊಂದಿಗೆ ಕುಟುಂಬದ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಅವರು ತಮ್ಮ ಮಗ ವೀರ್ ಮತ್ತು ತಮ್ಮ ತಂದೆ ನಟ ರಜನಿಕಾಂತ್ ಅವರೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
'ನಿನ್ನೆ ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಲು ಸಮಯ ತೆಗೆದುಕೊಂಡ ಪ್ರತಿಯೊಬ್ಬ ವ್ಯಕ್ತಿಗೆ ತುಂಬಾ ಧನ್ಯವಾದಗಳು. ದೇವರುಗಳು ನನಗೆ ಈ ವರ್ಷ ಅತ್ಯುತ್ತಮ ಉಡುಗೊರೆಯನ್ನು ನೀಡಿ ಆಶೀರ್ವದಿಸಿದ್ದಾರೆ. ನನ್ನ ಮಗ ವೀರ್.. ಈ ಅದ್ಭುತ ದೇವರ ಮಗುವನ್ನು ಯಾವಾಗಲೂ ನನ್ನ ಹಿಂದೆ ಹೊಂದಿರುವುದು ಜೀವನದ ನಿಜವಾದ ಆಶೀರ್ವಾದವಾಗಿದೆ' ಎಂದು ಪೋಸ್ಟ್ ಹಾಕಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸೌಂದರ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಾವು ಮತ್ತು ಅವರ ಪತಿ ವಿಶಗನ್ ವನಂಗಮುಡಿ ಒಟ್ಟಿಗೆ ಮಗನನ್ನು ಸ್ವಾಗತಿಸಿದ್ದಾರೆ ಎಂದು ಘೋಷಿಸಿದರು.
ಸೌಂದರ್ಯ ರಜನಿಕಾಂತ್ ಅವರು ಫೆಬ್ರವರಿ, 2019 ರಲ್ಲಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾದರು. 1999 ರಿಂದ ಚಿತ್ರರಂಗದಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದ ಸೌಂದರ್ಯ ಅವರು ಕೊಚ್ಚಡೈಯಾನ್ ಮತ್ತು ವೆಲೈಯಿಲ್ಲ ಪಟ್ಟಧಾರಿ 2 ಚಿತ್ರಗಳನ್ನು ಸಹ ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ ಆರ್ ಅಶ್ವಿನ್ ಅವರನ್ನು ಮದುವೆಯಾಗಿದ್ದರು. ಅವರೊಂದಿಗೆ ವೇದ್ ಎಂಬ 7 ವರ್ಷದ ಮಗನನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


