ಕಾರ್ತಿಕ್ ಅದ್ವೈತ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ಶಿವರಾಜಕುಮಾರ್
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್‌ಕುಮಾರ್ ಅವರು ಇದೀಗ ಮತ್ತೊಂದು ಆಸಕ್ತಿದಾಯದ ಯೋಜನೆಗೆ ಸಹಿಹಾಕಿದ್ದಾರೆ. ಆಕ್ಷನ್ ಥ್ರಿಲ್ಲರ್‌ಗಾಗಿ ಸೆಂಚುರಿ ಸ್ಟಾರ್ ಅವರು ಕಾರ್ತಿಕ್ ಅದ್ವೈತ್ ಅವರ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್‌ಕುಮಾರ್ ಅವರು ಇದೀಗ ಮತ್ತೊಂದು ಆಸಕ್ತಿದಾಯದ ಯೋಜನೆಗೆ ಸಹಿಹಾಕಿದ್ದಾರೆ. ಆಕ್ಷನ್ ಥ್ರಿಲ್ಲರ್‌ಗಾಗಿ ಸೆಂಚುರಿ ಸ್ಟಾರ್ ಅವರು ಕಾರ್ತಿಕ್ ಅದ್ವೈತ್ ಅವರ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.
ವಿಕ್ರಮ್ ಪ್ರಭು ಮತ್ತು ಧನಂಜಯ್ ಅಭಿನಯದ ತನ್ನ ಮೊದಲ ತಮಿಳು ನಿರ್ದೇಶನದ 'ಪಾಯುಮ್ ಒಲಿ ನೀ ಯೇನಕ್ಕು' ಬಿಡುಗಡೆಗೆ ಕಾಯುತ್ತಿರುವ ಅವರು ಈ ಸಿನಿಮಾದೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಕಾರ್ತಿಕ್ ಬೆಂಗಳೂರಿನಲ್ಲಿ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದಾರೆ. ಶಿವರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಳ್ಳುವ ಕಾರ್ತಿಕ್, 'ಕೆಲಸ ಪ್ರಾರಂಭವಾಗಿದೆ ಮತ್ತು 2023 ರಲ್ಲಿ ಸಿನಿಮಾವನ್ನು ಪ್ರಾರಂಭಿಸಲು ನಾವು ಆಶಿಸುತ್ತಿದ್ದೇವೆ. ಈ ಚಿತ್ರವು ಆಕ್ಷನ್ ಥ್ರಿಲ್ಲರ್ ಆಗಿರುತ್ತದೆ ಮತ್ತು ಅವರ ಹಿಂದಿನ ಯಾವುದೇ ಚಿತ್ರಗಳಿಗಿಂತ ಭಿನ್ನವಾಗಿರುತ್ತದೆ. ಕಥೆಯ ನಿರೂಪಣೆಗೆ ಅವರು ಆಶ್ಚರ್ಯಚಕಿತರಾದರು ಮತ್ತು ಸಂತೋಷದಿಂದ ಈ ಸಿನಿಮಾವನ್ನು ಒಪ್ಪಿಕೊಂಡರು' ಎಂದು ಹೇಳಿದರು.
'ನಾನು ಸಿಂಹದ ಮರಿ ತೆಲುಗು ಆವೃತ್ತಿಯನ್ನು ನೋಡಿದೆ ಮತ್ತು ಶಿವಣ್ಣನ ಪಾತ್ರವನ್ನು ಆನಂದಿಸಿದೆ. ವಿಶೇಷವಾಗಿ Ak47, ಜೋಗಿ ಮತ್ತು ಓಂನಲ್ಲಿ ಶಿವಣ್ಣ ಪಾತ್ರಗಳನ್ನು ಜೀವಿಸುವ ರೀತಿ ನನಗೆ ಇಷ್ಟವಾಗಿದೆ. ಅಂತಹ ಪಾತ್ರಗಳನ್ನು ನಿಭಾಯಿಸಬಲ್ಲ ಕೆಲವೇ ಕೆಲವು ಕಮರ್ಷಿಯಲ್ ಹೀರೋಗಳಲ್ಲಿ ಅವರು ಒಬ್ಬರು. ಅವರು ನಮ್ಮ ಚಿತ್ರದಲ್ಲಿಯೂ ಅಂತಹ ಅದ್ಭುತ ಛಾಯೆಯನ್ನು ತರಲಿದ್ದಾರೆ. ಅದು ಅಭಿನಯಕ್ಕೆ ಸಾಕಷ್ಟು ಸ್ಕೋಪ್ ಇರುತ್ತದೆ' ಎಂದರು.
ಕಾರ್ತಿಕ್ ಅವರು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದರು ಮತ್ತು ಜಾಕಿ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಲು ಅವರು ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದೆ. ಚಲನಚಿತ್ರ ನಿರ್ದೇಶಕನಾಗಿ, ನಾನು ಬಹಳಷ್ಟು ಕನ್ನಡ ಚಲನಚಿತ್ರಗಳನ್ನು ಅನುಸರಿಸುತ್ತಿದ್ದೇನೆ ಮತ್ತು ಇದೀಗ ನಾನು ನನ್ನ ಭಾಷಾ ಕೌಶಲ್ಯದ ಮೇಲೆ ಕೆಲಸ ಮಾಡುತ್ತಿದ್ದೇನೆ' ಎನ್ನುತ್ತಾರೆ.
ಈ ಸಿನಿಮಾದ ಮೂಲಕ ಸುಧೀರ್ ಚಂದ್ರ ಪಾಡಿರಿ ಅವರು ನಿರ್ಮಾಪಕರಾಗುತ್ತಿದ್ದಾರೆ. SCFC ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಹರ್ಷ ನಿರ್ದೇಶನದ ವೇದ ಚಿತ್ರದ ಶೂಟಿಂಗ್ ಮುಗಿಸಿರುವ ಶಿವಣ್ಣ, ಸದ್ಯ ಶ್ರೀನಿ ಅವರ ಘೋಸ್ಟ್ ಮತ್ತು ಯೋಗರಾಜ್ ಭಟ್ ಅವರ ಕರಟಕ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ.
ಈಮಧ್ಯೆ, ಸಂಗೀತ ಸಂಯೋಜ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ 45 ಮತ್ತು ಸಚಿನ್ ರವಿಯೊಂದಿಗೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಹೊರತಾಗಿ, ಅವರು ರಜನಿಕಾಂತ್ ಅವರ ಜೈಲರ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್‌ನ ಭಾಗವಾಗಿಯೂ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


