ಸಿನಿಮಾ ಸುದ್ದಿ

ನಿರ್ದೇಶಕ ಬಾಹುಬಲಿಯ 'ಎಂಆರ್ ಪಿ' ಚಿತ್ರ ನಾಳೆ ತೆರೆಗೆ!

ನಿರ್ದೇಶಕ ಎಂ.ಡಿ ಶ್ರೀಧರ್ ಬಳಿ ಸಹ ನಿರ್ದೇಶಕರಾಗಿದ್ದ ಬಾಹುಬಲಿ ಅವರು ಈ ಹಿಂದೆ ನಾನ್ ಮಗ್ಳೆ ಹೀರೋಯಿನ್ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ತಮ್ಮ ಎರಡನೇ ಚಿತ್ರಕ್ಕೆ ಸಿದ್ಧರಾಗಿದ್ದಾರೆ.

ನಿರ್ದೇಶಕ ಬಾಹುಬಲಿಯ 'ಎಂಆರ್ ಪಿ' ಚಿತ್ರ ನಾಳೆ ತೆರೆಗೆ!
ಚಿತ್ರದ ಸ್ಟಿಲ್
Published On :

ನಿರ್ದೇಶಕ ಎಂ.ಡಿ ಶ್ರೀಧರ್ ಬಳಿ ಸಹ ನಿರ್ದೇಶಕರಾಗಿದ್ದ ಬಾಹುಬಲಿ ಅವರು ಈ ಹಿಂದೆ ನಾನ್ ಮಗ್ಳೆ ಹೀರೋಯಿನ್ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ತಮ್ಮ ಎರಡನೇ ಚಿತ್ರಕ್ಕೆ ಸಿದ್ಧರಾಗಿದ್ದಾರೆ. 

ಎಂಆರ್‌ಪಿ ಚಿತ್ರದ ಮೂಲಕ ಮತ್ತೆ ಜನರನ್ನು ರಂಜಿಸಲು ಬಾಹುಬಲಿ ಮುಂದಾಗಿದ್ದಾರೆ. ಎಂಆರ್ ಪಿ ಚಿತ್ರವು ಫ್ಯಾಟ್‌ಫೋಬಿಯಾ ಮತ್ತು ಬೊಜ್ಜು ಹೊಂದಿರುವ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಹಾಸ್ಯಮಯ ಕಥನವಾಗಿದೆ.

ಐಟಿ ಉದ್ಯೋಗಿಯಾಗಿರುವ ಹರೀಶ್ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದು ಬೊಜ್ಜು ದೇಹದಿಂದಾಗಿ ಅವರು ಎದುರಿಸುವ ಕಷ್ಟಗಳು ಮತ್ತು ತನಗೆ ಬೇಕಾದುದನ್ನು ಸಾಧಿಸಲು ಹೊರಟಾಗ ಎದುರಾಗುವ ಅಡೆತಡೆಗಳು ಚಿತ್ರದ ತಿರುಳಾಗಿದೆ. ನಾಯಕನ ಪಯಣವನ್ನು ನವರಸ ನಾಯಕ ಜಗ್ಗೇಶ್ ನಿರೂಪಿಸಲಿದ್ದಾರೆ.

MRP ಚಿತ್ರವನ್ನು ನಿರ್ದೇಶಕ MD ಶ್ರೀಧರ್, AV ಕೃಷ್ಣ ಕುಮಾರ್ ಜೊತೆಗೂಡಿ ನಿರ್ಮಿಸಿದ್ದಾರೆ. ಗುಂಡ್ಲುಪೇಟೆ ಸುರೇಶ್ ಮತ್ತು ವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣವಿದೆ. 

ಎಂಆರ್‌ಪಿಗೆ ಹರ್ಷವರ್ಧನರಾಜ್ ಸಂಗೀತ ನೀಡಿದ್ದು, ಚೈತ್ರಾ ರೆಡ್ಡಿ, ಬಾಲ ರಾಜವಾಡಿ, ವಿಜಯ್ ಚೆಂಡೂರ್ ಮತ್ತು ಸುಧಾ ಬೆಳವಾಡಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.