ವಾರಕ್ಕೆ ಮುರಿದು ಬಿತ್ತಾ ನಿಶ್ಚಿತಾರ್ಥ?: ಮೊದಲಿಗೆ ಗೊತ್ತಾಗಿದ್ದು ಒಳ್ಳೆದಾಯ್ತು, ಇದನ್ನು ಇಲ್ಲಿಗೆ ಬಿಟ್ಟು ಬಿಡಿ; ನಟಿ ವೈಷ್ಣವಿಗೌಡ!
ವೈಷ್ಣವಿ ಗೌಡ ನಿಶ್ಚಿತಾರ್ಥ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎರಡು ವಾರಗಳ ಹಿಂದೆಯಷ್ಟೇ ನಟ ವಿದ್ಯಾಭರಣ್ ಮತ್ತು ವೈಷ್ಣವಿ ಗೌಡ ಎಂಗೇಜ್ ಆಗಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿತ್ತು.

ಬೆಂಗಳೂರು: ವೈಷ್ಣವಿ ಗೌಡ ನಿಶ್ಚಿತಾರ್ಥ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎರಡು ವಾರಗಳ ಹಿಂದೆಯಷ್ಟೇ ನಟ ವಿದ್ಯಾಭರಣ್ ಮತ್ತು ವೈಷ್ಣವಿ ಗೌಡ ಎಂಗೇಜ್ ಆಗಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿತ್ತು.
ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮತ್ತು ಸಿಹಿ ತಿನಿಸುತ್ತಿರುವ ವಿಡಿಯೋ ವೈರಲ್ ಕೂಡ ಆಗಿದ್ದವು. ಹಾಗಾಗಿ ಇಬ್ಬರೂ ಒಪ್ಪಿಕೊಂಡೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ‘ಅದು ನಿಶ್ಚಿತಾರ್ಥವಲ್ಲ. ಹಣ್ಣು ಕಾಯಿ ಇಡುವ ಶಾಸ್ತ್ರ ಮಾತ್ರವಾಗಿದೆ ಎಂದು ನಟಿ ವೈಷ್ಣವಿಗೌಡ ಸ್ಪಷ್ಟನೆ ನೀಡಿದ್ದರು.
ಇನ್ನೂ ನಿಶ್ಚಿತಾರ್ಥದ ಬಗ್ಗೆ ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡಿರುವ ನಟಿ ವೈಷ್ಣವಿಗೌಡ, ‘ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ ನಡೆದಿಲ್ಲ ಅಂತ ನಾನು ಮುಂಚಿನಿಂದಲೂ ಹೇಳ್ತಾ ಬಂದಿದೀನಿ. ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಾನು ಈ ಕುರಿತು ಮತ್ತೆ ಮಾತನಾಡಿದ್ರೆ ಬೆಳೆಯುತ್ತಲೇ ಹೋಗುತ್ತದೆ. ಹುಡುಗನ ಕಡೆಯಿಂದ ಇನ್ನೇನೋ ಮಾತು ಬರಬಹುದು. ಅವರು ಹೆಣ್ಣು ನೋಡೋ ಶಾಸ್ತ್ರಕ್ಕೆಂದು ಬಂದು ತಾಂಬೂಲ ಬದಲಾಯಿಸಿಕೊಂಡ್ರು ಅಷ್ಟೇ. ಅದು ನಿಶ್ಚಿತಾರ್ಥ ಅಲ್ಲ’ ಎಂದು ಹೇಳಿದ್ದಾರೆ.
ಇದೆಲ್ಲಾ ಒಂದು ವಾರದ ಹಿಂದೆ ಆಗಿದ್ದು. ಬೆಳೆಸಿದಷ್ಟೂ ಎಳೆದುಕೊಳ್ಳುತ್ತೆ. ಬಿಟ್ಟು ಬಿಡೋಣ. ಮಾತಿಗೆ ಮಾತು ಬೇಡ. ನಾನು ಹಾಗೂ ನನ್ನ ಕುಟುಂಬ ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ. ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು ಅಲ್ವೇ?’ ಎಂದಿದ್ದಾರೆ.
ನಟಿ ವೈಷ್ಣವಿ ಗೌಡ ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಸದ್ದು ಮಾಡುತ್ತಿದ್ದು, ವಿದ್ಯಾಭರಣ್ ಮೇಲೆ ಅನೇಕ ಆರೋಪಗಳನ್ನ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


