'ನಮೋ ಭೂತಾತ್ಮ 2' ಮತ್ತೆ ಜೊತೆಯಾದ ಕೋಮಲ್-ಮುರಳಿ
ಕೋಮಲ್ ಅಭಿನಯದ ನಮೋ ಭೂತಾತ್ಮ (2014) ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡಿದ್ದ ನೃತ್ಯ ಸಂಯೋಜಕ ಮುರಳಿ ಅವರು ಇದೀಗ ಮತ್ತೆ ನಮೋ ಭೂತಾತ್ಮ 2 ಮೂಲಕ ಕೋಮಲ್ ಜೊತೆಗೆ ಕೈಜೋಡಿಸಿದ್ದಾರೆ.

ಕೋಮಲ್ ಅಭಿನಯದ ನಮೋ ಭೂತಾತ್ಮ (2014) ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡಿದ್ದ ನೃತ್ಯ ಸಂಯೋಜಕ ಮುರಳಿ ಅವರು ಇದೀಗ ಮತ್ತೆ ನಮೋ ಭೂತಾತ್ಮ 2 ಮೂಲಕ ಕೋಮಲ್ ಜೊತೆಗೆ ಕೈಜೋಡಿಸಿದ್ದಾರೆ.
ಚಿತ್ರವು ಹಾರರ್ ಕಾಮಿಡಿ ಚಿತ್ರವಾಗಿದ್ದು, ನಮೋ ಭೂತಾತ್ಮ ಚಿತ್ರದ ಮುಂದುವರೆದ ಭಾಗ ಇದಾಗಿದೆ ಎಂದು ತಿಳಿದುಬಂದಿದೆ.
650 ಕ್ಕೂ ಹೆಚ್ಚು ಹಾಡುಗಳಿಗೆ ಕೆಲಸ ಮಾಡಿರುವ ಮುರಳಿ ಇದು ಮೂರನೇ ನಿರ್ದೇಶನದ ಚಿತ್ರವಾಗಿದೆ. ಚಿತ್ರದಲ್ಲಿ ಗೋವಿಂದಾಯ ನಮಃ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಹಾಸ್ಯನಟ, ನಟ ಕೋಮಲ್ ಅವರೊಂದಿಗೆ ಲೇಖಾ ಚಂದ್ರ ಅವರು ಜೋಡಿಯಾಗಲಿದ್ದಾರೆ. ಮುಂಬರುವ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರದಲ್ಲಿ ಲೇಖಾ ಕಾಣಿಸಿಕೊಳ್ಳಲಿದ್ದಾರೆ.
ಲೇಖಾ ಮತ್ತು ಕೋಮಲ್ ಅವರಲ್ಲದೆ, ನಮೋ ಭೂತಾತ್ಮ 2 ರ ಪಾತ್ರವರ್ಗದಲ್ಲಿ ಮಿಮಿಕ್ರಿ ಗೋಪಿ, ಮಹಂತೇಶ್, ಗೋವಿಂದೇಗೌಡ, ರುದ್ರೇಶ್ (ಗೌಳಿ) ಮತ್ತು ಮೋನಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನೃತ್ಯ ನಿರ್ದೇಶಕ ವರುಣ್ ರಾಜ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಅರುಣ್ ಆಂಡ್ರ್ಯೂಸ್ ಸಂಗೀತ ಸಂಯೋಜಿಸಿದ್ದರೆ, ಹಾಲೇಶ್ ಎಸ್ (ಓ ಮೈ ಲವ್) ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಡಿಸೆಂಬರ್ 2 ರಂದು ನಮೋ ಭೂತಾತ್ಮ 2 ಚಿತ್ರೀಕರಣವನ್ನು ಆರಂಭಿಸಲು ನಿರ್ದೇಶಕ ಮುರಳಿ ಚಿಂತನೆ ನಡೆಸಿದ್ದಾರೆ. ಅದಕ್ಕೂ ಮೊದಲು ನವೆಂಬರ್ 27 ರಂದು ಚಿತ್ರದ ಫೋಟೋಶೂಟ್ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


