ಸಿನಿಮಾ ಸುದ್ದಿ

ರಣಬೀರ್ ಕಪೂರ್ ಅಭಿನಯದ ಶಂಶೇರಾವನ್ನು ಹಿಂದಿಕ್ಕಿದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ಕಲೆಕ್ಷನ್!

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಚಿತ್ರ ಬಿಡುಗಡೆಯಾದ 3 ದಿನಗಳಲ್ಲಿ ರಣಬೀರ್ ಕಪೂರ್ ಅಭಿನಯದ ಶಂಶೇರಾ ಚಿತ್ರದ ಮೊದಲ ವಾರಾಂತ್ಯದ ಕಲೆಕ್ಷನ್‌ ನ್ನು ಹಿಂದಿಕ್ಕಿದೆ.

ರಣಬೀರ್ ಕಪೂರ್ ಅಭಿನಯದ ಶಂಶೇರಾವನ್ನು ಹಿಂದಿಕ್ಕಿದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ಕಲೆಕ್ಷನ್!
ವಿಕ್ರಾಂತ್ ರೋಣ ಮತ್ತು ಶಂಶೇರಾ ಚಿತ್ರದ ಪೋಸ್ಟರ್
Published On :

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಚಿತ್ರ ಬಿಡುಗಡೆಯಾದ 3 ದಿನಗಳಲ್ಲಿ ರಣಬೀರ್ ಕಪೂರ್ ಅಭಿನಯದ ಶಂಶೇರಾ ಚಿತ್ರದ ಮೊದಲ ವಾರಾಂತ್ಯದ ಕಲೆಕ್ಷನ್‌ ನ್ನು ಹಿಂದಿಕ್ಕಿದೆ. 

ವಿಕ್ರಾಂತ್ ರೋಣಾಗೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು 3 ನೇ ದಿನಕ್ಕೆ ಸುಮಾರು 10 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ.

ವಿಕ್ರಾಂತ್ ರೋಣಾ ಸಿನಿಮಾವನ್ನು ರಣಬೀರ್ ಕಪೂರ್ ಅವರ ಬಾಲಿವುಡ್ ಸಿನಿಮಾ ಶಂಶೇರಾಗೆ ಹೋಲಿಸಿದರೆ, ಕಳೆದ 3 ದಿನಗಳಿಂದ ಶಂಶೇರಾ ಕೇವಲ 31 ಕೋಟಿ ರೂಪಾಯಿ ಗಳಿಸಿದೆ. ಜುಲೈ 22ರಂದು ತೆರೆಕಂಡ ಶಂಶೇರಾ ಸಿನಿಮಾದ ಕಲೆಕ್ಷನ್, ವಿಕ್ರಾಂತ್ ರೋಣ ಬಿಡುಗಡೆಯಾದ ಬಳಿಕ ಮತ್ತಷ್ಟು ಕಡಿಮೆಯಾಗಿದೆ.

ಇನ್ನು ವಿಕ್ರಾಂತ್ ರೋಣಾ ಚಿತ್ರ 2500 ಪರದೆಗಳಲ್ಲಿ ರಿಲೀಸ್ ಆಗಿದ್ದರೆ, ಶಂಶೇರಾ 5,250 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಹೀಗಿದ್ದರೂ ಕಲೆಕ್ಷನ್ ವಿಚಾರದಲ್ಲಿ ಅದು ಸೋತಿದೆ.

ವಿಕ್ರಾಂತ್ ರೋಣ ಒಂದು ಫ್ಯಾಂಟಸಿ ಆ್ಯಕ್ಷನ್ ಚಿತ್ರವಾಗಿದ್ದು, ಅನೂಪ್ ಭಂಡಾರಿ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ರಕ್ಕಮ್ಮ ಹಾಡು ಎಲ್ಲೆಡೆ ಫೇಮಸ್ ಆಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.