ಮುಂಬಯಿ: 'ಲವ್ ರಂಜನ್' ಚಿತ್ರದ ಸೆಟ್‌ನಲ್ಲಿ ಬೆಂಕಿ, ಓರ್ವ ವ್ಯಕ್ತಿ ಸಾವು; ರಾಜಶ್ರೀ ನಿರ್ಮಾಣ ಸಂಸ್ಥೆಯ ಸೆಟ್ ಭಸ್ಮ
ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಫಿಲ್ಮ್ ಸ್ಟುಡಿಯೊದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಓರ್ವ ಸಾವನ್ನಪ್ಪಿರುವುದು ವರದಿಯಾಗಿದೆ.

ಮುಂಬಯಿ: ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಫಿಲ್ಮ್ ಸ್ಟುಡಿಯೊದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಓರ್ವ ಸಾವನ್ನಪ್ಪಿರುವುದು ವರದಿಯಾಗಿದೆ. ಮುಂಬೈ ಅಗ್ನಿಶಾಮಕ ದಳವು ಲಿಂಕ್ ರೋಡ್‌ನ ಸ್ಟಾರ್ ಬಜಾರ್ ಬಳಿಯ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ 2 ನೇ ಹಂತದಲ್ಲಿ ಸಂಜೆ 4:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.
ಬೆಂಕಿಯ ತೀವ್ರಗೆ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದಾವಿಸಿ ಸುಮಾರು 5 ಗಂಟೆಗಳ ಕಾಲ ಬೆಂಕಿಯನ್ನು ಹತೋಟಿಗೆ ತಂದವು. ಮಾಧ್ಯಮ ವರದಿಗಳ ಪ್ರಕಾರ, ಈ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್, ರಣಬೀರ್ ಕಪೂರ್ ಅಭಿನಯದ ಲವ್ ರಂಜನ್ ನಿರ್ದೇಶನದ ಸಿನಿಮಾ ಸೆಟ್‌ಗೆ ಬೆಂಕಿ ಬಿದ್ದಿತ್ತು.
ರಣಬೀರ್ ಕಪೂರ್, ಶ್ರದ್ಧಾ ಕಪೂರ್ ಅವರು ಮುಂಬೈನಲ್ಲಿ ಈ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಬೇಕಾಗಿತ್ತು. ಬೆಂಕಿ ಹೊತ್ತಿಕೊಂಡಾಗ ಸೆಟ್‌ನಲ್ಲಿ ದೀಪಾಲಂಕಾರ ನಡೆಯುತ್ತಿತ್ತು. ಮುಂದಿನ ವಾರದಿಂದ, ರಣಬೀರ್ ಮತ್ತು ಶ್ರದ್ಧಾ ಸೆಟ್‌ನಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಇದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ.
ಬೋನಿ ಕಪೂರ್, ಡಿಂಪಲ್ ಕಪಾಡಿಯಾ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2023 ಮಾರ್ಚ್ 8ರಂದು ಈ ಚಿತ್ರ ರಿಲೀಸ್ ಆಗಲು ಸಿದ್ಧತೆ ನಡೆಸುತ್ತಿದೆ. ಇದರ ಪಕ್ಕದಲ್ಲಿ ರಾಜಶ್ರೀ ಚಿತ್ರದ ಇನ್ನೂ ಎರಡು ಸೆಟ್‌ಗಳನ್ನು ಹಾಕಲಾಗಿತ್ತು. ಅದರಲ್ಲಿ ಒಂದಕ್ಕೆ ಬೆಂಕಿ ಹತ್ತಿಕೊಂಡಿದೆ. ಆದರೆ ಎರಡನೇ ಸೆಟ್ ಸುರಕ್ಷಿತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


