ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ; ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2
ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ದಾಖಲೆಗಳ ಸರಣಿ ಇನ್ನೂ ನಿಂತಂತೆ ಕಾಣುತ್ತಿಲ್ಲ.. ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ರಾಕಿ ಭಾಯ್ ದಾಖಲೆ ಸರಣಿ ಮಾತ್ರ ಮುಂದುವರೆಯುತ್ತಲೇ ಇದೆ.

ಹೈದರಾಬಾದ್: ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್–2 ದಾಖಲೆಗಳ ಸರಣಿ ಇನ್ನೂ ನಿಂತಂತೆ ಕಾಣುತ್ತಿಲ್ಲ.. ಸಾಲು ಸಾಲು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ರಾಕಿ ಭಾಯ್ ದಾಖಲೆ ಸರಣಿ ಮಾತ್ರ ಮುಂದುವರೆಯುತ್ತಲೇ ಇದೆ.
ಈ ಬಾರಿಯೂ ಕೆಜಿಎಫ್ ಚಾಪ್ಟರ್ 2 ಚಿತ್ರ ತನ್ನ ಗಳಿಕೆ ಮೂಲಕವೇ ಮತ್ತೆ ದಾಖಲೆ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಕೆಜಿಎಫ್ 2 ಚಿತ್ರ ಗಳಿಕೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದೆ. ಸಿಂಗಲ್ ಸ್ಕ್ರೀನ್ ಮಾತ್ರವಲ್ಲದೇ ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲೂ ದಾಖಲೆ ಮಾಡಿದ್ದು, ಮಲ್ಟಿಪ್ಲೆಕ್ಸ್‌ಗಳ ಇತಿಹಾಸದಲ್ಲೇ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ 2 ಪಾತ್ರವಾಗಿದೆ.
ಈ ಕುರಿತಂತೆ ಆಂಧ್ರ ಬಾಕ್ಸಾಫೀಸ್ ಡಾಟ್ ಕಾಮ್ (@AndhraBoxOffice) ಟ್ವಿಟರ್ ಖಾತೆ ವರದಿ ಮಾಡಿದ್ದು, ಮಲ್ಟಿಪ್ಲೆಕ್ಸ್‌ನ ಪಿ.ವಿ.ಆರ್. ಸಿನಿಮಾಸ್‌ಗಳಲ್ಲಿ ಈ ಚಿತ್ರ ದಾಖಲೆಯ 121.4 ಕೋಟಿ ರೂ ಗಳ ಕಲೆಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದೆ. ಇದು ಮಲ್ಟಿಪ್ಲೆಕ್ಸ್ ಇತಿಹಾಸದಲ್ಲೇ ದಾಖಲೆಯ ಗಳಿಕೆಯಾಗಿದೆ ಎನ್ನಲಾಗಿದೆ.
ದೇಶದಾದ್ಯಂತ 173 ಪಿವಿಆರ್ ಸಿನಿಮಾ ಮಂದಿರಗಳಲ್ಲಿ ಈ ಚಿತ್ರ ದಾಖಲೆ ಮಾಡಿದ್ದು,. 2022ರಲ್ಲಿ ಪಿವಿಆರ್ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್ ಸಿನಿಮಾ 93.7 ಕೋಟಿ ರೂ, ಭೂಲ್‌ಭೂಲ್ಲಯಾ 47.4 ಕೋಟಿ ರೂ, ಡಾಕ್ಟರ್ ಸ್ಟ್ರೇಂಜ್–2 45.8 ಕೋಟಿ ರೂ ಹಾಗೂ ವಿಕ್ರಮ್ ಸಿನಿಮಾ 26.6 ಕೋಟಿ ರೂ ಗಳಿಕೆ ಕಂಡಿತ್ತು.
ಚಿತ್ರ ಬಿಡುಗಡೆಯಾಗಿ 20 ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೊಸ ದಾಖಲೆ ಕೂಡ ಕೆಜಿಎಫ್ 2 ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


