'ಕ್ರಾಂತಿ' ಡಬ್ಬಿಂಗ್ ಪ್ರಾರಂಭಿಸಿದ ದರ್ಶನ್
'ಕ್ರಾಂತಿ' ಚಿತ್ರ ತಂಡ, ಇತ್ತೀಚೆಗೆ ಪೋಲ್ಯಾಂಡ್ ನಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿದ್ದು, ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.

'ಕ್ರಾಂತಿ' ಚಿತ್ರ ತಂಡ, ಇತ್ತೀಚೆಗೆ ಪೋಲ್ಯಾಂಡ್ ನಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿದ್ದು, ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.
ದರ್ಶನ್ ಡಬ್ಬಿಂಗ್ ಸ್ಟೂಡಿಯೋದಲ್ಲಿರುವ ಫೋಟೊವನ್ನು ಚಿತ್ರ ತಂಡ ಟ್ವೀಟ್ ಮಾಡಿದ್ದು, ವಾಯ್ಸ್ ಆಫ್ ಕ್ರಾಂತಿ ಎಂಬ ಶೀರ್ಷಿಕೆ ನೀಡಿದೆ. ವಿ ಹರಿಕೃಷ್ಣ ನಿರ್ದೇಶನದ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ.
ಯಜಮಾನ, ರಾಬರ್ಟ್ ನಂತಹ ಚಿತ್ರಗಳ ಯಶಸ್ಸು ಗಳಿಸಿರುವ ದರ್ಶನ್ ನಟನೆಯ ಹೊಸ ಸಿನಿಮಾ ಕ್ರಾಂತಿಯ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನಿರ್ದೇಶಕ ಹರಿಕೃಷ್ಣ ಚಿತ್ರಕ್ಕೆ ಸಂಗೀತ ನಿರ್ದೆಶಕರಾಗಿಯೂ ಇದ್ದು, ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ ಮೀಡಿಯಾ ಹೌಸ್ ಸ್ಟೂಡಿಯೋ ಬ್ಯಾನರ್ ನ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.
ಕ್ರಾಂತಿ ಸಿನಿಮಾಗೆ ಕರುಣಾಕರ್. ಎ ಅವರ ಛಾಯಾಗ್ರಹಣ ಇದ್ದು, ಈ ಚಿತ್ರದ ಮೂಲಕ ಮೂರನೇ ಬಾರಿಗೆ ರಚಿತಾ ರಾಮ್ ದರ್ಶನ್ ಜೊತೆ ನಟಿಸಿದ್ದಾರೆ. ಸುಮಲತಾ ಅಂಬರೀಷ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಯಜಮಾನದ ಬಳಿಕ ಹರಿಕೃಷ್ಣ, ಮೀಡಿಯಾ ಹೌಸ್ ಸ್ಟೂಡಿಯೋ ತಂಡದೊಂದಿಗೆ ದರ್ಶನ್ ಕೆಲಸ ಮಾಡಿರುವ 2ನೇ ಸಿನಿಮಾ ಇದಾಗಿದೆ.
5 ಭಾಷೆಯಲ್ಲಿ ತೆರೆಗೆ ಬರಲಿರುವ ಈ ಸಿನಿಮಾ ಮಾಸ್ ಮನೋರಂಜಕ ಚಿತ್ರವಾಗಿದೆ. ಇನ್ನು ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ದರ್ಶನ್ ಅವರ 56 ನೇ ಸಿನಿಮಾ ತರುಣ್ ಕಿಶೋರ್ ಸುಧೀರ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ಘೋಷಣೆಯಾಗಲಿದೆ ಎಂಬ ಸುದ್ದಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


