ಅಪ್ಪು ಕನಸಿನ ಕೂಸು, ಕೊನೆ ಚಿತ್ರ 'ಗಂಧದ ಗುಡಿ' ಬಿಡುಗಡೆ ದಿನಾಂಕ ಘೋಷಣೆ, ಮೊದಲ ಪುಣ್ಯತಿಥಿಗೆ ಅಭಿಮಾನಿಗಳಿಗೆ ಸ್ಮರಣೆ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneet Rajkumar) ನಿಧನರಾಗಿ ಬರುವ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ.

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneet Rajkumar) ನಿಧನರಾಗಿ ಬರುವ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ. ಅವರು ನಿಧನರಾಗುವುದಕ್ಕೆ ಮುನ್ನ ನೈಜವಾಗಿ, ಸಹಜವಾಗಿ ಪ್ರೀತಿಯಿಂದ ಅಭಿನಯಿಸಿದ ಕೊನೆಯ ಚಿತ್ರ ಗಂಧದ ಗುಡಿ (Gandhada Gudi). ಕರ್ನಾಟಕದ ವಿಶೇಷತೆ, ಇಲ್ಲಿನ ಅದ್ಭುತಗಳನ್ನು ರಾಜ್ಯದ ಜನತೆಗೆ ತೋರಿಸಬೇಕೆಂದು ಬಹಳ ಪ್ರೀತಿ, ಶ್ರದ್ಧೆಯಿಂದ ಅವರು ಮಾಡಿದ್ದ ಚಿತ್ರದ ಮೇಲೆ ಅಪಾರ ವಿಶ್ವಾಸವನ್ನು ಅಪ್ಪು ಇರಿಸಿಕೊಂಡಿದ್ದರು.

ಕಳೆದ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ಗಂಧದ ಗುಡಿ ಚಿತ್ರದ ಟೀಸರ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೈಯಲ್ಲಿ ಬಿಡುಗಡೆ ಮಾಡಿಸಬೇಕೆಂದು ಬಯಸಿದ್ದ ಅಪ್ಪು ನಿಧನ ಹೊಂದುವುದಕ್ಕೆ ಕೆಲವೇ ದಿನಗಳ ಮೊದಲು ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಿದ್ದರಂತೆ.
ಪುನೀತ್ ಅವರು ನಿರ್ದೇಶಕ ಅಮೋಘವರ್ಷ ಜೊತೆ ಇದಕ್ಕಾಗಿ ಗಂಧದ ನಾಡಿನ ಕಾಡುಮೇಡು, ಗುಡ್ಡಬೆಟ್ಟಗಳಲ್ಲಿ ಅಲೆದಾಡಿದ್ದರು, ಸುತ್ತಾಡಿದ್ದರು. ಇದೀಗ ಅವರ ಕನಸಿನ ಕೂಸು ಯಾವಾಗ ತೆರೆಗೆ ಬರಲಿದೆ ಎಂದು ಘೋಷಣೆಯಾಗಿದೆ. ಈ ಮೂಲಕ ಅಪ್ಪು ಅಭಿಮಾನಿಗಳಿಗೆ ಖುಷಿಯ ಸುದ್ದಿ ಸಿಕ್ಕಿದೆ. ಗಂಧದ ಗುಡಿ ಚಿತ್ರ ಅಕ್ಟೋಬರ್ 28ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


