ಸಿನಿಮಾ ಸುದ್ದಿ

ದಿನಕರ್ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿ!

ದಿನಕರ್ ತೂಗುದೀಪ ಅವರ ಮುಂದಿನ ನಿರ್ದೇಶನದ ಚಿತ್ರವನ್ನು ಜಯಣ್ಣ ಫಿಲಂಸ್ ನಿರ್ಮಿಸಲಿದ್ದು ಈ ಚಿತ್ರದಲ್ಲಿ ನಟ ವಿರಾಟ್ ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಲಿದ್ದಾರೆ.

ದಿನಕರ್ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿ!
ನಟಿ ಸಂಜನಾ ಆನಂದ್
Published On :

ದಿನಕರ್ ತೂಗುದೀಪ ಅವರ ಮುಂದಿನ ನಿರ್ದೇಶನದ ಚಿತ್ರವನ್ನು ಜಯಣ್ಣ ಫಿಲಂಸ್ ನಿರ್ಮಿಸಲಿದ್ದು ಈ ಚಿತ್ರದಲ್ಲಿ ನಟ ವಿರಾಟ್ ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಲಿದ್ದಾರೆ.

ಭಾನುವಾರ ಚಿತ್ರದ ಕುರಿತು ಅಧಿಕೃತ ಘೋಷಣೆಯಾಗಿದ್ದು ಸರಳ ಮುಹೂರ್ತದೊಂದಿಗೆ ಪ್ರಾಜೆಕ್ಟ್ ಪ್ರಾರಂಭವಾಯಿತು. ಮೀನಾ ತೂಗುದೀಪ ಅವರು ಚಿತ್ರಕ್ಕೆ ಕ್ಲಾಪ್‌ ಮಾಡಿದ್ದು ನಿರ್ಮಾಪಕರಾದ ಜಯಣ್ಣ, ಬೋಗೇಂದ್ರ, ನಿರ್ದೇಶಕ ದಿನಕರ್, ನಟ ವಿರಾಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Story image

ಜಯಣ್ಣ ಫಿಲಂಸ್‌ನ ಜಯಣ್ಣ ಮತ್ತು ಭೋಗೇಂದ್ರ ಅವರ ನಿರ್ಮಾಣದಲ್ಲಿ ನಾನು ನಿರ್ದೇಶಿಸಲಿರುವ ನಮ್ಮ ಮುಂದಿನ ಪಾಜೆಕ್ಟ್ ಪ್ರೊಡಕ್ಷನ್ 23 ಅನ್ನು ಪ್ರಸ್ತುತಪಡಿಸಲು ಉತ್ಸುಕನಾಗಿದ್ದೇನೆ ಎಂದು ದಿನಕರ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದಾರೆ. 

ಥ್ರಿಲ್ಲರ್ ಅಂಶಗಳೊಂದಿಗೆ ಯೂತ್‌ಫುಲ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳೊಂದಿಗೆ ಚಿತ್ರಕಥೆ ಬರೆದಿರುವ ನಿರ್ದೇಶಕರು, ನಾಯಕಿಯಾಗಿ ಸಲಗ ಖ್ಯಾತಿಯ ನಟಿ ಸಂಜನಾ ಆನಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

<strong>ಸಂಜನಾ ಆನಂದ್ - ವಿರಾಟ್</strong>
ಸಂಜನಾ ಆನಂದ್ - ವಿರಾಟ್

ವಿರಾಟ್ ಮತ್ತು ಸಂಜನಾ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಆಗಸ್ಟ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಚಿತ್ರದಲ್ಲೂ ವಿರಾಟ್ ನಟಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.