ಪುಷ್ಪ 2: ರಶ್ಮಿಕಾ ಮಂದಣ್ಣ ಜಾಗಕ್ಕೆ ಸಾಯಿ ಪಲ್ಲವಿ?
ಅಲ್ಲು ಅರ್ಜುನ್ ಅಭಿನಯದ ತೆಲುಗಿನ ಪುಷ್ಪ-2 ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರೊಂದಿಗೆ ಚಿತ್ರತಂಡ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣಗೆ ಗೇಟ್ ಪಾಸ್ ನೀಡಿ, ಅವರ ಜಾಗಕ್ಕೆ ಸಾಯಿ ಪಲ್ಲವಿ ಬರಲಿದ್ದಾರೆಯೇ ? ಎಂಬುದರ ಬಗ್ಗೆ ಚಿತ್ರ ತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ.

ಅಲ್ಲು ಅರ್ಜುನ್ ಅಭಿನಯದ ತೆಲುಗಿನ ಪುಷ್ಪ-2 ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರೊಂದಿಗೆ ಚಿತ್ರತಂಡ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣಗೆ ಗೇಟ್ ಪಾಸ್ ನೀಡಿ, ಅವರ ಜಾಗಕ್ಕೆ ಸಾಯಿ ಪಲ್ಲವಿ ಬರಲಿದ್ದಾರೆಯೇ ? ಎಂಬುದರ ಬಗ್ಗೆ ಚಿತ್ರ ತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈ ಕುರಿತ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಬಹುದು ಎನ್ನಲಾಗುತ್ತಿದೆ .ಪುಷ್ಪ ದಿ ರೈಸ್ ಯಶಸ್ವಿ ನಂತರ ರಶ್ಮಿಕಾ ಮಂದಣ್ಣ ಮನೆ ಮಾತಾಗಿದ್ದಾರೆ.
ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದರು. ಪುಷ್ಪ -2 ರಲ್ಲಿ ಅಲ್ಲು ಅರ್ಜುನ್ ತಂಗಿ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಚಿತ್ರ ತಂಡ ಕೇಳಿರುವುದಾಗಿ ತಿಳಿದುಬಂದಿದೆ. ಒಂದು ವೇಳೆ ಸಾಯಿ ಪಲ್ಲವಿ ಅನುಮತಿ ನೀಡಿದರೆ, ಅವರೊಂದಿಗೆ ಚಿತ್ರೀಕರಣ ಮಾಡಲು ನಿರ್ದೇಶಕ ಸುಕುಮಾರ್ ಸಿದ್ಧರಾಗಿದ್ದಾರೆ.
ಬುಡಕಟ್ಟು ಹುಡುಗಿಯ ಪಾತ್ರವನ್ನು ಸಾಯಿ ಪಲ್ಲವಿ ಮಾಡಲಿದ್ದು, ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಒಂದು ವೇಳೆ ಸಾಯಿ ಪಲ್ಲವಿ ಆಫರ್ ತಿರಸ್ಕರಿಸಿದರೆ ಐಶ್ವರ್ಯ ರಾಜೇಶ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ಅಲ್ಲು ಅರ್ಜುನ್ ಹಾಗೂ ದೇವಿ ಶ್ರೀ ಪ್ರಸಾದ್ ಅವರೊಂದಿಗೆ ಖಾಸಗಿ ಜೆಟ್ ನಲ್ಲಿ ಪ್ರಯಾಣಿಸುತ್ತಿರುವ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣ, ಥ್ಯಾಂಕ್ ಯು ಫಾರ್ ಸಾಮಿ, ಸಾಮಿ, ಡಿಎಸ್ ಪಿ ಸರ್ ಜಿ ಎಂದು ಬರೆದುಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


