ಸಿನಿಮಾ ಸುದ್ದಿ

ಹಾನಗಲ್ ಕುಮಾರಸ್ವಾಮಿ ಜೀವನ ಚರಿತ್ರೆ ಆಧಾರಿತ 'ವಿರಾಟಪುರ ವಿರಾಗಿ' ಟ್ರೈಲರ್: ಸಿಎಂ ಬೊಮ್ಮಾಯಿರಿಂದ ಬಿಡುಗಡೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಹಾನಗಲ್ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧಾರಿತ 'ವಿರಾಟಪುರ ವಿರಾಗಿ' ಚಿತ್ರದ ಧ್ವನಿ ಸುರುಳಿ, ಟ್ರೈಲರ್ ನ್ನು ಇಂದು ಬಿಡುಗಡೆ ಮಾಡಿದರು.

ಹಾನಗಲ್ ಕುಮಾರಸ್ವಾಮಿ ಜೀವನ ಚರಿತ್ರೆ ಆಧಾರಿತ 'ವಿರಾಟಪುರ ವಿರಾಗಿ' ಟ್ರೈಲರ್: ಸಿಎಂ ಬೊಮ್ಮಾಯಿರಿಂದ ಬಿಡುಗಡೆ
ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಮತ್ತಿತರರು
Published On :

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಹಾನಗಲ್ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧಾರಿತ 'ವಿರಾಟಪುರ ವಿರಾಗಿ' ಚಿತ್ರದ ಧ್ವನಿ ಸುರುಳಿ, ಟ್ರೈಲರ್ ನ್ನು ಇಂದು ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡಿ,  ಕುಮಾರಸ್ವಾಮಿ ಅವರ ಜೀವನಾದರ್ಶಗಳನ್ನು ಸಾರುವ ಚಲನಚಿತ್ರ ಈಗಿನ ಸಮಾಜ ಹಾಗೂ ಯುವಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಹಾನಗಲ್ ಕುಮಾರಸ್ವಾಮಿ,  12 ನೇ ಶತಮಾನದ ಸಾಮಾಜಿಕ ಕ್ರಾಂತಿ ತೆರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಹೊಸ ರೂಪ ಕೊಟ್ಟರು. ವೀರಶೈವ ಲಿಂಗಾಯತ ಸಮಾಜವನ್ನು ಎತ್ತಿಹಿಡಿದ ಮಹಾನ್ ಯೋಗಿ.  ಅವರು ಸ್ಥಾಪನೆ ಮಾಡಿರುವ ಶಿವಯೋಗಿ ಮಂದಿರ ಇಂದಿಗೂ ಕೂಡ ಎಲ್ಲ ಅಧ್ಯಾತ್ಮಿಕ ಚಿಂತನೆಯನ್ನು ಮಾಡುವ ಸಂಸ್ಥೆಯಾಗಿದೆ. ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರ ಗಳನ್ನು ಶಿವಯೋಗಿ ಮಂದಿರದ ಮೂಲಕ ಕಾಪಾಡಿಕೊಂಡು ಬರಲಾಗಿದೆ ಎಂದರು. 

ಶಿವಯೋಗಿ ಮಂದಿರ ಜೀರ್ಣೊದ್ದಾರಕ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ  ಹಣ ನೀಡಿ ಜೀರ್ಣೊದ್ದಾರ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮಾಜ ಪ್ರಗತಿಪರವಾಗಿದ್ದು, ಈ ಸಮಾಜ ಕಾಲಕ್ಕೆ ತಕ್ಕಂತೆ ಎಲ್ಲವನ್ನು ಒಪ್ಪಿಕೊಳ್ಳುವ ಚಲನಶೀಲ ಸಮಾಜವಾಗಿದೆ. ಈ ಸಮಾಜ ಚಲನಶೀಲವಾಗಿರುವುದರಿಂದ ಈ ಸಮಾಜಕ್ಕೆ ಯಾವುದೇ ಧಕ್ಕೆ ಇಲ್ಲ. ಅವರು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದ  ಹಾನಗಲ್ ಕುಮಾರಸ್ವಾಮಿಯವರು, ಪ್ರಥಮ ಅಧ್ಯಕ್ಷರಾಗಿದ್ದರು‌ ಅವರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಅದ್ಯತೆ ನೀಡಿದ್ದರು ಎಂದು ತಿಳಿಸಿದರು. 

ಕರ್ನಾಟಕದಲ್ಲಿ  ಶಿಕ್ಷಣ ಉತ್ತಮಗೊಳ್ಳುವಲ್ಲಿ ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ  ನೀಡುತ್ತಿರುವ ಕೊಡುಗೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಮಾಡಿದರು. ಬೆಳಗಾವಿಯ ನಿಪ್ಪಾಣಿ ಹಿಂದ ಕೊಳ್ಳೆಗಾಲದವರೆಗೆ ಬೀದರ್ ನಿಂದ ಕೊಳ್ಳೆಗಾಲದವರೆಗು ಎಲ್ಲ ಗ್ರಾಮಗಳಲ್ಲಿ ವೀರಶೈವ ಲಿಂಗಾಯತ ಮಠಗಳು ಅಧ್ಯಾತ್ಮದ ಜೊತೆಗೆ ತ್ರಿವಿಧ ದಾಸೋಹದಲ್ಲಿ ತೊಡಗಿಕೊಂಡಿವೆ ವಿಜಯ ಸಂಕೇಶ್ವರ್ ಅವರ ಜೀವನ ಚರಿತ್ರೆ ಚಿತ್ರ ಬಿಡುಗಡೆಯಾಗಿದೆ.  ಯಶಸ್ಸು ನಮಗಾಗಿ ಅಲ್ಲ ಸಮಾಜಕ್ಕಾಗಿ ಪ್ರೇರಣೆಯಾಗಬೇಕೆಂದು  ವಿಜಯ ಸಂಕೇಶ್ವರರು ತಿಳಿಸಿದ್ದನ್ನು  ಸ್ಮರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.