ನಟಿ, ಸಂಸದೆ ಸುಮಲತಾ ಅಂಬರೀಷ್ ಹುಟ್ಟುಹಬ್ಬ: ಪುತ್ರ ಅಭಿಷೇಕ್ ನ ಮುಂದಿನ ಚಿತ್ರದ ಪೋಸ್ಟರ್ ಬಿಡುಗಡೆ
ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಶ್ ಇಂದು ಶನಿವಾರ ತಮ್ಮ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಅಭಿಷೇಕ್ ನ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು ಡಬಲ್ ಸಂಭ್ರಮ ನೀಡಿದೆ.

ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಶ್ ಇಂದು ಶನಿವಾರ ತಮ್ಮ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಅಭಿಷೇಕ್ ನ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು ಡಬಲ್ ಸಂಭ್ರಮ ನೀಡಿದೆ.
ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ನಾಯಕ ನಟನಾಗಿ ನಟಿಸಲಿದ್ದು, ಚಿತ್ರದ ಹೊಸ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ಖಡಕ್ ಲುಕ್ ನಲ್ಲಿ ಅಭಿಷೇಕ್ ಕಾಣಿಸಿಕೊಂಡಿದ್ದಾರೆ.
ಅಂಬರೀಶ್ ಅವರ ಹುಟ್ಟು ಹಬ್ಬದಂದು ಘೋಷಣೆಯಾಗಿದ್ದ ಅಭಿಷೇಕ್ ಅಂಬರೀಶ್ ಅವರ ಈ ಸಿನಿಮಾದ ಮುಹೂರ್ತ ಇಂದು ಅಂಬರೀಶ್ ಅವರ ಸಮಾಧಿ ಹತ್ತಿರ ನೆರವೇರಿತು. ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬವಾಗಿದ್ದರಿಂದ ಈ ಸಂದರ್ಭವನ್ನು ಸಿನಿಮಾ ತಂಡ ಬಳಸಿಕೊಂಡು, ಮೋಷನ್ ಪೋಸ್ಟರ್ ಬಿಡುಗಡೆ ಮತ್ತು ನಿರ್ಮಾಪಕರ ಹೆಸರು ಘೋಷಣೆ ಮಾಡಲಾಯಿತು.
ರಾಕ್ ಲೈನ್ ವೆಂಕಟೇಶ್ ಅವರ ರಾಕ್ ಲೈನ್ ಪ್ರೊಡಕ್ಷನ್ ಈ ಚಿತ್ರವನ್ನು ತಯಾರು ಮಾಡಲಿದೆ. ಈ ವರ್ಷ ಈಗಾಗಲೇ ಎರಡು ಸಿನಿಮಾಗಳನ್ನು ಘೋಷಣೆ ಮಾಡಿರುವ ರಾಕ್ ಲೈನ್ ಸಂಸ್ಥೆ, ಸುಮಲತಾ ಅವರ ಹುಟ್ಟು ಹಬ್ಬಕ್ಕಾಗಿ ಅವರ ಪುತ್ರ ಅಭಿಷೇಕ್ ಅವರ ಹೊಸ ಸಿನಿಮಾವನ್ನೂ ತಯಾರು ಮಾಡುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: ಪಕ್ಷಗಳಿಂದ ಆಫರ್ ಇರುವುದು ನಿಜ, ಅಭಿಷೇಕ್ ಗೆ ಟಿಕೆಟ್ ಕೊಡಿ ಎಂದು ನಾವಾಗಿ ಕೇಳಿಲ್ಲ, ಕೇಳುವುದೂ ಇಲ್ಲ: ಸುಮಲತಾ ಅಂಬರೀಷ್
ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ನಂತರ ಅಭಿಷೇಕ್ ಅವರ ಮುಂದಿನ ಚಿತ್ರ ಇದಾಗಿದ್ದು, ಸದ್ಯಕ್ಕೆ ‘AA04’ ಎಂದು ಪೋಸ್ಟರ್ ನಲ್ಲಿ ಪ್ರಿಂಟ್ ಹಾಕಿಸಲಾಗಿದ್ದು ಮುಂದಿನ ದಿನಗಳಲ್ಲಿ ಚಿತ್ರತಂಡ ಶೀರ್ಷಿಕೆಯನ್ನು ಘೋಷಣೆ ಮಾಡಲಿದೆ. ಒಬ್ಬ ಹೋರಾಟಗಾರನ ಕಥೆಯನ್ನು ಹೇಳುವ ಚಿತ್ರ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


