ಸಿನಿಮಾ ಸುದ್ದಿ

ನಾನು ಮತ್ತು ಸುದೀಪ್ ಒಳ್ಳೆ ಫ್ರೆಂಡ್ಸ್: ಥಿಯೇಟರ್ ಮುಂದೆ ಸುದೀಪ್ ಫ್ಯಾನ್ಸ್ ಕಂಡು ಅಫ್ತಾಬ್ ಥ್ರಿಲ್

ಸುದೀಪ್ ಕೋಟಿಗೊಬ್ಬ3 ಸಿನಿಮಾದಲ್ಲಿ ನಟಿಸಲು ಕೋರಿಕೊಂಡಾಗ ಅಫ್ತಾಬ್ ದೂಸ್ರಾ ಯೋಚನೆಯನ್ನೇ ಮಾಡಲಿಲ್ಲ.

ನಾನು ಮತ್ತು ಸುದೀಪ್ ಒಳ್ಳೆ ಫ್ರೆಂಡ್ಸ್: ಥಿಯೇಟರ್ ಮುಂದೆ ಸುದೀಪ್ ಫ್ಯಾನ್ಸ್ ಕಂಡು ಅಫ್ತಾಬ್ ಥ್ರಿಲ್
ಸುದೀಪ್, ಅಫ್ತಾಬ್ ಶಿವದಾಸಾನಿ
Published On :

ಬೆಂಗಳೂರು: ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಬೆಳ್ಳಿ ಪರದೆಯಿಂದ ದೂರವಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ದಕ್ಷಿಣ ಭಾರತೀಯ ಚಿತ್ರರಂಗ ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಮೂಲಕ ಹಲವರ ಹುಬ್ಬೇರಿಸಿದ್ದರು. 

<strong>ಅಫ್ತಾಬ್ ಶಿವದಾಸಾನಿ</strong>
ಅಫ್ತಾಬ್ ಶಿವದಾಸಾನಿ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾದಲ್ಲಿ ಅಫ್ತಾಬ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಕೋಟಿಗೊಬ್ಬ3 ಬಿಡುಗಡೆಯ ಸಂದರ್ಭದ ಗೊಂದಲದ ಹೊರತಾಗಿಯೂ ಥಿಯೇಟರ್ ಮುಂದೆ ನೆರೆದಿದ್ದ ಸುದೀಪ್ ಅಭಿಮಾನಿಗಳನ್ನು ಕಂಡು ಅಫ್ತಾಬ್ ಥ್ರಿಲ್ಲಾಗಿದ್ದಾರೆ. 

ಬಾಲಿವುಡ್ ನಲ್ಲಿ ಮಸ್ತಿ, ಕ್ಯಾ ಕೂಲ್ ಹೈ ಹಮ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಅಫ್ತಾಬ್ ಕನ್ನಡ ಚಿತ್ರರಂಗದಲ್ಲಿಯೂ ಅಂಥದ್ದೇ ಹವಾ ಸೃಷ್ಟಿಸುವ ಇರಾದೆಯನ್ನು ಹೊಂದಿದ್ದಾರೆ.

ಏಕಾಏಕಿ ಕನ್ನಡ ಸಿನಿಮಾದಲ್ಲಿ ನಟಿಸಲು ಕಾರಣವೇನೆಂದು ಕೇಳಿದಾಗ ಅಫ್ತಾಬ್ ಹೇಳಿದ್ದಿಷ್ಟು. ಸುದೀಪ್ ಮತ್ತು ನಾನು ತುಂಬಾ ಒಳ್ಳೆಯ ಮಿತ್ರರು. ಕೋಟಿಗೊಬ್ಬ3 ಸಿನಿಮಾದಲ್ಲಿ ನಟಿಸಲು ಮುಖ್ಯ ಕಾರಣ ಸುದೀಪ್. 

ಪರಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನುವ ಅಳುಕು ಒಮ್ಮೆಯೂ ಸುಳಿಯಲಿಲ್ಲ. ಸಿನಿಮಾ ಭಾಷೆಗಳ ಗಡಿಯನ್ನು ಮೀರಿದ್ದು ಎನ್ನುವುದು ತಮ್ಮ ಭಾವನೆ ಎಂದು ಶಿವದಾಸಾನಿ ಹೇಳಿದ್ದಾರೆ. ಹೀಗಾಗಿಯೇ ಸುದೀಪ್ ಈ ಪಾತ್ರದಲ್ಲಿ ನಟಿಸಲು ಕೋರಿಕೊಂಡಾಗ ಅಫ್ತಾಬ್ ದೂಸ್ರಾ ಯೋಚನೆಯನ್ನೇ ಮಾಡಲಿಲ್ಲ. 

Related Article

'ಕ್ರಾಂತಿ' ಯಲ್ಲಿ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ: ನನ್ನ ಸಿನಿ ಪಯಣ ಮರಳಿ ಆರಂಭ- ರಚಿತಾ ರಾಮ್

ಅಮೆಜಾನ್ ಪ್ರೈಮ್ ನಲ್ಲಿ ಡಾಲಿ ಧನಂಜಯ್ ರತ್ನನ್ ಪ್ರಪಂಚ ಸಿನಿಮಾ ಟ್ರೇಲರ್ ಬಿಡುಗಡೆ

'ಸೂರಪ್ಪ ಬಾಬು ಯಾರಿಂದ ಈ ತೊಂದರೆಗೆ ಸಿಕ್ಕಿಕೊಂಡರು ಎಂದು ಚೆನ್ನಾಗಿ ಗೊತ್ತಿದೆ, ಅದಕ್ಕೆ ಕಾಲ ಉತ್ತರ ಕೊಡುತ್ತೆ': ಕಿಚ್ಚ ಸುದೀಪ್

ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಗೆ ಬಾಲಿವುಡ್ ನಲ್ಲಿ ಡಿಮ್ಯಾಂಡ್: ಸಲ್ಮಾನ್ ಖಾನ್ ಸಿನಿಮಾಗೆ ಸಂಗೀತ ನಿರ್ದೇಶನ

ಪೈರಸಿ ಹಾವಳಿಗೆ ಚಿತ್ರರಂಗ ತತ್ತರ; ತೆರೆಕಂಡ ಮೂರೇ ದಿನಕ್ಕೆ ಸಂಪೂರ್ಣ ಚಿತ್ರ ಲೀಕ್, ದೂರು ದಾಖಲು

'ವಿಚ್ಛೇದನ, ಸಿಂಗಲ್ ಪೇರೆಂಟ್ ಸುತ್ತ ಶ್ರೀಕೃಷ್ಣ@ಜಿಮೇಲ್.ಕಾಮ್: ಸಂಬಂಧಗಳಿಗೆ ನಿರ್ದೇಶಕ ನಾಗಶೇಖರ್ ಹೊಸ ಆಯಾಮ'

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.