ಯೋಗಿ 'ಒಂಭತ್ತನೇ ದಿಕ್ಕು' ಸಿನಿಮಾಗೆ ಸೆನ್ಸಾರ್ ನಿಂದ U/A ಸರ್ಟಿಫಿಕೆಟ್
ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ 'ಒಂಭತ್ತನೇ ದಿಕ್ಕು' ಸಿನಿಮಾದಲ್ಲಿ ಯೋಗಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ಅವರು ನಟಿಸಿದ್ದಾರೆ.

ಬೆಂಗಳೂರು: ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ನಿರ್ದೇಶಿಸಿರುವ, ಯೋಗಿ ನಾಯಕ ನಟನಾಗಿ ಅಭಿನಯಿಸಿರುವ 'ಒಂಭತ್ತನೇ ದಿಕ್ಕು' ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೆಟ್ ದೊರೆತಿದೆ. ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ 'ಒಂಭತ್ತನೇ ದಿಕ್ಕು' ಸಿನಿಮಾದಲ್ಲಿ ಯೋಗಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅವರು ನಟಿಸಿದ್ದಾರೆ.

ಸಿನಿಮಾದಲ್ಲಿ ಎರಡು ಕಥಾಹಂದರ ಜೊತೆಯಾಗಿ ಸಾಗುತ್ತವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ದಯಾಳ್, ವೆಂಕಟ್ ದೇವ್ ಮತ್ತು ಅಭಿಷೇಕ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಸಿನಿಮಾವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ತಾರಾಗಣದಲ್ಲಿ ಸಾಯಿಕುಮಾರ್, ರಮೇಶ್ ಭಟ್, ಪ್ರಶಾಂತ್ ಸಿದ್ದಿ, ಸಂಪತ್ ಕುಮಾರ್ ಮತ್ತಿತರರು ನಟಿಸಿದ್ದಾರೆ. 2021ರಲ್ಲಿ ಬಿಡುಗಡೆಯಾಗುತ್ತಿರುವ ಯೋಗಿಯವರ ಎರಡನೇ ಸಿನಿಮಾ ಇದಾಗಿದೆ. ಇತ್ತೀಚಿಗಷ್ಟೆ ಅವರ ಲಂಕೆ ಸಿನಿಮಾ ತೆರೆಕಂಡಿತ್ತು.
Related Article
ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾ ತಂಡಕ್ಕೆ 'ಸಿದ್ಲಿಂಗು' ಖ್ಯಾತಿಯ ಯೋಗಿ ಸೇರ್ಪಡೆ!
'ಲಂಕೆ': ರಾಮನ ಪಾತ್ರದಲ್ಲಿ ಯೋಗಿ, ರಾವಣನ ಪಾತ್ರದಲ್ಲಿ ಕಾವ್ಯಾ ಶೆಟ್ಟಿ!
ನಟ ಪುನೀತ್ ರಾಜ್ ಕುಮಾರ್ ಸಮಾಧಿ ನೋಡಲು ಅಭಿಮಾನಿಗಳಿಗೆ ಅವಕಾಶ
ಖ್ಯಾತ ತೆಲುಗು ನಟ ನಂದಮೂರಿ ಬಾಲಕೃಷ್ಣ ಆಸ್ಪತ್ಪೆಗೆ ದಾಖಲು, ಭುಜದ ಶಸ್ತ್ರಚಿಕಿತ್ಸೆ
ಪುನೀತ್ ನಿವಾಸಕ್ಕೆ ತೆಲುಗು ನಟ ನಾಗಾರ್ಜುನ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


