ಸಿನಿಮಾ ಸುದ್ದಿ

ತಮಿಳು ಚಿತ್ರನಿರ್ದೇಶಕ ತ್ಯಾಗರಾಜನ್ ರಸ್ತೆ ಬದಿ ಶವವಾಗಿ ಪತ್ತೆ: ಕಾಡಿದ್ದ ಕಡುಬಡತನ ಮತ್ತು ಖಿನ್ನತೆ

ತ್ಯಾಗರಾಜನ್ ಅವರು ಕಡು ಬಡತನ ಎದುರಿಸುತ್ತಿದ್ದರು. ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರಿಂದ ಅವರು ಖಿನ್ನರಾಗಿದ್ದರು ಎನ್ನಲಾಗಿದೆ.

ತಮಿಳು ಚಿತ್ರನಿರ್ದೇಶಕ ತ್ಯಾಗರಾಜನ್ ರಸ್ತೆ ಬದಿ ಶವವಾಗಿ ಪತ್ತೆ: ಕಾಡಿದ್ದ ಕಡುಬಡತನ ಮತ್ತು ಖಿನ್ನತೆ
ನಿರ್ದೇಶಕ ಎಂ.ತ್ಯಾಗರಾಜನ್
Published On :

ಚೆನ್ನೈ: ಜನಪ್ರಿಯ ತಮಿಳು ಚಿತ್ರ ನಿರ್ದೇಶಕ ಎಂ.ತ್ಯಾಗರಾಜನ್ ಮೃತದೇಹ ಚೆನ್ನೈನ ರಸ್ತೆ ಬದಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ. ಪ್ರಖ್ಯಾತ ಸಿನಿಮಾ ಸ್ಟುಡಿಯೊ ಎ.ವಿ.ಎಂ ಬಳಿ ಪತ್ತೆಯಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರೆಂದು ತಿಳಿದುಬಂದಿದೆ. ಮಾನಗರ ಕಾವಲ್, ವೆಟ್ರಿವೆಲ್ ವೆಟ್ರಿ ಮುಂತಾದ ಹಿಟ್ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು.

ತ್ಯಾಗರಾಜನ್ ಅವರು ಕಡು ಬಡತನ ಎದುರಿಸುತ್ತಿದ್ದರು ಎನ್ನಲಾಗಿದೆ. ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರಿಂದ ಅವರು ಖಿನ್ನರಾಗಿದ್ದರು. ತಮಿಳುನಾಡು ನಿರ್ದೇಶಕರ ಸಂಘ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.