ಇನ್ ಸ್ಟಾಗ್ರಾಂ ಅಕೌಂಟ್ ತೆರೆದ ಲೇಖಕ ಪೂರ್ಣಚಂದ್ರ ತೇಜಸ್ವಿ ಕಥೆಯ ಪಾತ್ರಗಳು: ಡೇರ್ ಡೆವಿಲ್ ಮುಸ್ತಾಫಾ ವಿನೂತನ ಸಿನಿಮಾ ಟೀಸರ್
'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರತಂಡ ಅಪ್ಪಟ ಕನ್ನಡಿಗರು ನೋಡಬೇಕಾದ ಅದ್ಭುತವಾದ ಟೀಸರ್ ಬಿಡುಗಡೆಗೊಳಿಸಿದೆ. ರೆಟ್ರೊಗ್ರಾಂ ಎನ್ನುವ ಪರಿಕಲ್ಪನೆಯಾಧರಿಸಿ ಈ ಟೀಸರ್ ಅನ್ನು ನಿರ್ಮಿಸಲಾಗಿದೆ.

ಬೆಂಗಳೂರು: ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ 'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರತಂಡ ಅಪ್ಪಟ ಕನ್ನಡಿಗರು ನೋಡಬೇಕಾದ ಅದ್ಭುತವಾದ ಟೀಸರ್ ಬಿಡುಗಡೆಗೊಳಿಸಿದೆ. ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ಬಿಡುಗಡೆಯಾಗಿದೆ.
ತೇಜಸ್ವಿಯವರು ರಚಿಸಿದ ಅಬಚೂರಿನ ಪೋಸ್ಟಾಫೀಸು ಪುಸ್ತಕದಲ್ಲಿ ಬರುವ 'ಡೇರ್ ಡೆವಿಲ್ ಮುಸ್ತಾಫಾ' ಎನ್ನುವ ಕಥೆಯನ್ನಾಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ರೆಟ್ರೊಗ್ರಾಂ ಎನ್ನುವ ಪರಿಕಲ್ಪನೆಯಾಧರಿಸಿ ಈ ಟೀಸರ್ ಅನ್ನು ನಿರ್ಮಿಸಲಾಗಿದೆ. ಈ ಟೀಸರ್ ನೋಡುಗರನ್ನು ರೆಟ್ರೊ ಕಾಲಕ್ಕೆ ಕರೆದೊಯ್ಯದಿದ್ದರೆ ಕೇಳಿ.
‘ಜಯಮಾಲಾ ದಮಯಂತಿ ಯಾರಪ್ಪ?'ಎನ್ನುವ ವಿಶಿಷ್ಟ ಹಾಡಿನ ಮೂಲಕ ಶುರುವಾಗುವ ಟೀಸರ್ ಸಿನಿಮಾದ ಪಾತ್ರಗಳನ್ನು ಅವರುಗಳ ಇನ್ ಸ್ಟಾಗ್ರಾಂ ಖಾತೆಗಳನ್ನು ತೋರಿಸುವ ಮೂಲಕ ಪರಿಚಯಿಸಲಾಗಿದೆ. ಮಾಲ್ಗುಡಿ ಡೇಸ್ ಅನುಭವವನ್ನು ಈ ಟೀಸರ್ ನೆನಪಿಸಿದರೆ ಅಚ್ಚರಿಯೇನಿಲ್ಲ. ಕನ್ನಡ ಚಿತ್ರರಂಗಕ್ಕೊಂದು ಉತ್ತಮ ಚಿತ್ರ ದೊರೆಯುವ ಸೂಚನೆಯನ್ನು ಈ ವಿನೂತನ ಟೀಸರ್ ನೀಡಿದೆ.
'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾವನ್ನು ಉದಯೋನ್ಮುಖ ಶಶಾಂಕ್ ಸೋಗಾಲ್ ನಿರ್ದೇಶಿಸುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಓದುಗರೇ ನಿರ್ಮಿಸುತ್ತಿರುವ ಚಿತ್ರ ಎನ್ನುವ ಅಡಿಬರಹ ಈ ಚಿತ್ರದ್ದು.
Related Article
'ಅಶ್ವತ್ಥಾಮ' ನಿಗಾಗಿ ಮತ್ತೆ ಒಂದಾದ ಸುದೀಪ್- ಅನೂಪ್ ಭಂಡಾರಿ
ಸೆಪ್ಟೆಂಬರ್ 10ಕ್ಕೆ 'ಶಿವಾಜಿ ಸುರತ್ಕಲ್' ಸೀಕ್ವೆಲ್ ಮುಹೂರ್ತ
ನಟ ಮಮ್ಮೂಟಿ 70ನೇ ಹುಟ್ಟುಹಬ್ಬಕ್ಕೆ 600 ಮೊಬೈಲ್ ಬಳಸಿ ದೈತ್ಯ ಭಾವಚಿತ್ರ ರಚಿಸಿದ ಕೇರಳ ಕಲಾವಿದ
ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾಗೆ ಜಸ್ಸಿ ಗಿಫ್ಟ್ ಹಿನ್ನೆಲೆ ಗಾಯನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


