ಬಹುಭಾಷಾ ಚಿತ್ರ 'ತತ್ವಮಸಿ'ಗೆ ನಟ ಇಶಾನ್ ಸಹಿ
ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ರೋಗ್ ಖ್ಯಾತಿಯ ನಟ ಇಶಾನ್ ಅವರು ಮೊದಲ ಬಹುಭಾಷಾವೊಂದಕ್ಕೆ ಸಹಿ ಹಾಕಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ರೋಗ್ ಖ್ಯಾತಿಯ ನಟ ಇಶಾನ್ ಅವರು ಮೊದಲ ಬಹುಭಾಷಾವೊಂದಕ್ಕೆ ಸಹಿ ಹಾಕಿದ್ದಾರೆ.
'ತತ್ವಮಸಿ' ಎಂಬ ವೈಜ್ಞಾನಿಕ ಆಕ್ಷನ್ ಥ್ರಿಲ್ಲರ್‌ನ ಚಿತ್ರದಲ್ಲಿ ಇಶಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ರಮಣ ಗೋಪಿಶೆಟ್ಟಿಯವರು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ರಾಧಾಕೃಷ್ಣ ಅವರು ಬಂಡವಾಳ ಹೂಡುತ್ತಿದ್ದಾರೆ.
ಚಿತ್ರದ ಕುರಿತು ಇಶಾನ್ ಅವರು ಮಾಹಿತಿ ನತೀಡಿದ್ದು, ತತ್ವಮಸಿ ಚಿತ್ರವು ಬಹುಭಾಷೆಯಲ್ಲಿ ನಿರ್ಮಿಸಲಾಗುತ್ತಿದ್ದು, ಕನ್ನಡದಲ್ಲಿಯೂ ಬರಲಿದೆ ಎಂದು ಹೇಳಿದ್ದಾರೆ.
ತತ್ವಮಸಿ ಚಿತ್ರದಲ್ಲಿ ದೊಡ್ಡ ತಾರಾಗಣವೇ ಕಾಣಿಸಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಇಶಾನ್ ಅವರು ವರಲಕ್ಷ್ಮೀ ಶರತ್ ಕುಮಾರ್, ಪ್ರಕಾಶ್ ರಾಜ್ ಹಾಗೂ ಹರೀಶ್ ಉತ್ತಮನ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸ್ಯಾಮ್ ಸಿಎಸ್ ಅವರು ಸಂಗೀತ ನೀಡುತ್ತಿದ್ದಾರೆ. ಶ್ಯಾಮ್ ಕೆ ನಾಯ್ಡು ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬರುತ್ತಿದೆ.
ವಿಶಿಷ್ಟವಾದ ಚಿತ್ರ ಕಥೆ ಹಾಗೂ ಪಾತ್ರ ಇದಾಗಿದೆ. ಚಿತ್ರದ ಚಿತ್ರೀಕರಣ ಅಕ್ಟೋಬರ್'ಗೆ ಆರಂಭವಾಗಲಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಬಹಳ ಉತ್ಸುಕನಾಗಿದ್ದೇನೆಂದು ಇಶಾನ್ ಹೇಳಿದ್ದಾರೆ.
ರೆಮೋ ಚಿತ್ರದ ಕುರಿತು ಮಾತನಾಡಿ, ಚಿತ್ರವು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ಸೇರಲು ಸರ್ಕಾರ ಅನುಮತಿ ನೀಡುವುದಕ್ಕಾಗಿ ನಿರ್ಮಾಪಕರು ಕಾದು ಕುಳಿತಿದ್ದಾರೆಂದು ತಿಳಿಸಿದ್ದಾರೆ.
ರೆಮೋ ಚಿತ್ರವನ್ನು ಸಿಆರ್ ಮನೋಹರ್ ಅವರು ನಿರ್ಮಿಸಿದ್ದು, ಇಶಾನ್ ಜೋಡಿಯಾಗಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಂಡಿದ್ದಾರೆ.
ಇಶಾನ್ ಅವರು ತೆಲುಗು ವೆಬ್ ಸೀರಿಸ್'ವೊಂದರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಈ ವೆಬ್ ಸೀರಿಸ್'ನ್ನು 'ಬಾಹುಬಲಿ' ನಿರ್ಮಾಣ ಸಂಸ್ಥೆ ಅರ್ಕ ಮೀಡಿಯಾ ವರ್ಕ್ಸ್ ನಿಂದ ನಿರ್ಮಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


