ಸಿನಿಮಾ ಸುದ್ದಿ

ಟಾಲಿವುಡ್ ಡ್ರಗ್ಸ್‌ ಪ್ರಕರಣ: ಇಡಿ ಅಧಿಕಾರಿಗಳಿಂದ ನಟಿ ಚಾರ್ಮಿ ಕೌರ್‌ ವಿಚಾರಣೆ ಅಂತ್ಯ

ಟಾಲಿವುಡ್ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಇದ್ದಕ್ಕಿದ್ದಂತೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

ಟಾಲಿವುಡ್ ಡ್ರಗ್ಸ್‌ ಪ್ರಕರಣ: ಇಡಿ ಅಧಿಕಾರಿಗಳಿಂದ ನಟಿ ಚಾರ್ಮಿ ಕೌರ್‌ ವಿಚಾರಣೆ ಅಂತ್ಯ
ಚಾರ್ಮಿ ಕೌರ್
Published On :

ಹೈದರಾಬಾದ್‌: ಟಾಲಿವುಡ್ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಇದ್ದಕ್ಕಿದ್ದಂತೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. 

Story image

ಈಗಾಗಲೇ ಸುಪ್ರಸಿದ್ದ ತೆಲುಗು ಚಿತ್ರ ನಿರ್ದೇಶಕ  ಪೂರಿ ಜಗನ್ನಾಥ್‌(ಕನ್ನಡದಲ್ಲಿ ಅಪ್ಪು ಚಿತ್ರವನ್ನು ನಿರ್ದೇಶಿಸಿದ್ದರು) ಅವರನ್ನು ಈಗಾಗಲೇ ವಿಚಾರಣೆ ನಡೆಸಿದ್ದು, ನಟಿ ಚಾರ್ಮಿ ಕೌರ್‌ ಅವರನ್ನು ಗುರುವಾರ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ 2015ರಿಂದ 2017ರವರೆಗಿನ ಬ್ಯಾಂಕಿನ ವಹಿವಾಟುಗಳ ವಿವರಗಳನ್ನು ಆಕೆ ಇಡಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. 

Story image

ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಾರ್ಮಿ, ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾಗಿ ಹೇಳಿದ್ದು ಅಲ್ಲದೆ ಅವರು ಕೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇಡಿಗೆ ಸಂಪೂರ್ಣ ಸಹಕರಿಸುತ್ತೇನೆ. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.