ಸಿನಿಮಾ ಸುದ್ದಿ

ಪುನೀತ್ ಸಾವು ಕೆಟ್ಟ ಕನಸಂತಾಗಲಿ: ದೇವರು ಇರುವುದೇ ಹೌದಾದರೆ ಅವನೇ ಉತ್ತರಿಸಲಿ'

ನಟ ಪುನೀತ್ ರಾಜಕುಮಾರ್ ನಿಧನಕ್ಕೆ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಟ್ವೀಟ್ ಮಾಡಿದ್ದಾರೆ. ಅಪ್ಪು ಅಗಲಿಕೆಯ ಬಗ್ಗೆ ಸರಣಿ ಟ್ವೀಟ್​ ಮಾಡಿದ್ದಾರೆ.

ಪುನೀತ್ ಸಾವು ಕೆಟ್ಟ ಕನಸಂತಾಗಲಿ: ದೇವರು ಇರುವುದೇ ಹೌದಾದರೆ ಅವನೇ ಉತ್ತರಿಸಲಿ'
ಪುನೀತ್ ರಾಜಕುಮಾರ್
Published On :

ನಟ ಪುನೀತ್ ರಾಜಕುಮಾರ್ ನಿಧನಕ್ಕೆ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಟ್ವೀಟ್ ಮಾಡಿದ್ದಾರೆ.  ಅಪ್ಪು ಅಗಲಿಕೆಯ ಬಗ್ಗೆ ಸರಣಿ ಟ್ವೀಟ್​ ಮಾಡಿದ್ದಾರೆ.

ಹೃದಯಾಘಾತದಿಂದ ಸಂಭವಿಸಿರುವ ಈ ಸಾವಿನ ಕುರಿತು ಅವರು ಆತಂಕದಲ್ಲೇ ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಫಿಟ್ನೆಸ್​ ಕಾಪಾಡಿಕೊಂಡಿರುವವರಿಗೆ ಈ ರೀತಿ ಸಾವು ಸಂಭವಿಸುವುದಿಲ್ಲ ಎಂದು ಅನೇಕರು ಹೇಳುತ್ತಾರೆ. ಆದರೆ ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಆ ಮಾತನ್ನು ನಂಬಲಾಗುತ್ತಿಲ್ಲ.

ರೆಗ್ಯೂಲರ್​ ವರ್ಕೌಟ್​ ಜೊತೆಗೆ ಆರೋಗ್ಯಕರ ಅಭ್ಯಾಸ ಇಟ್ಟುಕೊಳ್ಳುವುದು ಹಾಗೂ ಸಡನ್​ ಸಾವು ಸಂಭವಿಸುವುದರ ನಡುವೆ ಯಾವುದೇ ಸಂಬಂಧ ಇಲ್ಲ ಎಂಬ ಕಟು ಸತ್ಯವು ಪುನೀತ್​ ಅವರ ದುರಂತ ನಿಧನನಿಂದ ಬಯಲಾಗಿದೆ. ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್​ ಮಾಡುವುದಿಲ್ಲ? ದೇವರು ಇರುವುದೇ ಹೌದಾದರೆ ಅವನೇ ಉತ್ತರಿಸಬೇಕು’ ಎಂದು ಆರ್​ಜಿವಿ ಬರೆದುಕೊಂಡಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರ ಸಾವು ಈಗಲೂ ಒಂದು ಕೆಟ್ಟ ಕನಸಿನಂತೆ ಅನಿಸುತ್ತಿದೆ. ಅವರ ಆಪ್ತರ ಪರಿಸ್ಥಿತಿ ಏನಾಗಿರಬಹುದು ಎಂದು ಊಹಿಸಲೂ ಸಾಧ್ಯವಾಗುತ್ತಿಲ್ಲ. ಸಾವಿಗೆ ತಾರತಮ್ಯ ಇಲ್ಲ. ಅದು ಯಾರನ್ನು ಬೇಕಾದರೂ ಕೊಲ್ಲುತ್ತದೆ. ನಮ್ಮಲ್ಲಿ ಯಾರಾದರೂ ಯಾವಾಗ ಬೇಕಿದ್ದರೂ ಸಾಯಬಹುದು ಎಂಬುದು ಭಯಾನಕ ಸತ್ಯ. ಬದುಕಿರುವಾಗಲೇ ಫಾಸ್ಟ್​​ ಫಾರ್ವರ್ಡ್​​ ಮೋಡ್​ನಲ್ಲಿ ಜೀವಿಸಬೇಕು’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.