ಸಿನಿಮಾ ಸುದ್ದಿ

ಭಾರತದಾದ್ಯಂತ 1 ಸಾವಿರ ಥಿಯೇಟರ್ ಗಳಲ್ಲಿ ಭಜರಂಗಿ-2 ಸಿನಿಮಾ ರಿಲೀಸ್!

ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಅಕ್ಟೋಬರ್ 29 ರಂದು ತೆರೆ ಕಾಣಲಿದೆ.

ಭಾರತದಾದ್ಯಂತ 1 ಸಾವಿರ ಥಿಯೇಟರ್ ಗಳಲ್ಲಿ ಭಜರಂಗಿ-2 ಸಿನಿಮಾ ರಿಲೀಸ್!
ಭಜರಂಗಿ2 ಪೋಸ್ಟರ್
Published On :

ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ -2 ಸಿನಿಮಾ ಅಕ್ಟೋಬರ್ 29 ರಂದು ತೆರೆ ಕಾಣಲಿದೆ.

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಭಾಗವಹಿಸಲಿದ್ದಾರೆ. ಜಯಣ್ಣ ಬೋಗೇಂದ್ರ ಸಿನಿಮಾ ನಿರ್ಮಾಣ ಮಾಡಿದ್ದು, ಅವರೇ ವಿತರಕರಾಗಿದ್ದಾರೆ. ಕರ್ನಾಟಕದಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಭಜರಂಗಿ 2 ರ ತೆಲುಗು ಆವೃತ್ತಿಯೂ ಸುಮಾರು 350-400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಹೊರತಾಗಿ ಕನ್ನಡ ಮತ್ತು ತೆಲುಗು ಆವೃತ್ತಿಗಳು ಭಾರತದಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಸರಿಸುಮಾರು 1000 ಸ್ಕ್ರೀನ್‌ಗಳಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ನೋಡುತ್ತಿದ್ದೇವೆ ಎಂದು ಜಯಣ್ಣ ಹೇಳುತ್ತಾರೆ.

ಈ ಮಧ್ಯೆ, ನಿರ್ಮಾಪಕರಿಂದ ಶಿವಣ್ಣ ಅಭಿಮಾನಿಗಳಿಗೆ ಅಚ್ಚರಿಯೊಂದು ಕಾದಿದ್ದು,  ವಿವಿಧ ವೇದಿಕೆಗಳಲ್ಲಿಬುಕಿಂಗ್  ತೆರೆಯಲು ಯೋಜಿಸಿರುವ ಅವರು ಬುಧವಾರ ಬೆಳಿಗ್ಗೆ ಅದನ್ನು ಘೋಷಿಸಲಿದ್ದಾರೆ. ಭಜರಂಗಿ 2 ಚಿತ್ರಕ್ಕೆ ಸಾಕಷ್ಟು ಬೇಡಿಕೆಯಿದೆ. ಭಜರಂಗಿ 2 2021 ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ, ಇದು ನಟ-ನಿರ್ದೇಶಕರ ಮೂರನೇ ಸಹಯೋಗವಾಗಿದೆ. ಇದು ಜಯಣ್ಣ ಫಿಲ್ಮ್ಸ್ ಜೊತೆಗಿನ ಶಿವರಾಜಕುಮಾರ್ ಅವರ ನಾಲ್ಕನೇ ಪ್ರಾಜೆಕ್ಟ್ ಆಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಜೆ ಸ್ವಾಮಿ ಅವರ ಛಾಯಾಗ್ರಹಣವಿದೆ. ಭಜರಂಗಿ 2 ಸಿನಿಮಾದಲ್ಲಿ ಭಾವನಾ, ಶ್ರುತಿ ಮತ್ತು ಲೋಕಿ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.