ಬಾಹುಬಲಿ ನಿರ್ದೇಶಕ ರಾಜಮೌಳಿ 'ಆರ್ ಆರ್ ಆರ್' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್
20ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಮತ್ತು ಕುಮ್ರಂ ಭೀಮ್ ಅವರ ಪಾತ್ರಗಳಲ್ಲಿ ಕ್ರಮವಾಗಿ ರಾಮಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ನಟಿಸಿದ್ದಾರೆ.

ಹೈದರಾಬಾದ್: ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' (ರೈಸ್ ರೋರ್ ರಿವೋಲ್ಟ್) ಸಿನಿಮಾ ಬಿಡುಗಡೆ ದಿನಾಂಕ ಹೊರಬಿದ್ದಿದೆ. 2022 ಜನವರಿ 7 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ ಎಂದು ಚಿತ್ರತಂಡ ಘೋಷಿಸಿದೆ.
ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ, ಪ್ರೇಕ್ಷಕರಲ್ಲಿ ತುಂಬಾ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ೨೦ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಮತ್ತು ಕುಮ್ರಂ ಭೀಮ್ ಅವರ ಪಾತ್ರಗಳಲ್ಲಿ ಕ್ರಮವಾಗಿ ರಾಮಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ನಟಿಸಿದ್ದಾರೆ. ಬಾಹುಬಲಿ ಕಥೆ ಬರೆದಿದ್ದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಈ ಚಿತ್ರಕ್ಕೂ ಕಥೆ ರಚಿಸಿದ್ದಾರೆ.
ರಾಜಮೌಳಿ ಸಿನಿಮಾದಲ್ಲಿ ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ 'ಆರ್ ಆರ್ ಆರ್' ಸಿನಿಮಾ ಬಿಡುಗಡೆ ಮಾಡುವ ಯೋಚನೆಯನ್ನು ಸಿನಿಮಾ ತಂಡ ಹೊಂದಿತ್ತು. ಅದರೆ ಕೊರೊನಾ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತ್ತು.
Related Article
ಕೊನೆಗೂ ವದಂತಿಗೆ ಫುಲ್ ಸ್ಟಾಪ್: 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ಸಮಂತಾ-ನಾಗಚೈತನ್ಯ
ಪಿ.ಟಿ ಟೀಚರ್ ಶರಣ್ 'ಗುರು ಶಿಷ್ಯರು' ಸಿನಿಮಾದಲ್ಲಿ ಗಾಂಧಿ ತತ್ವ ಸಾರಲಿರುವ ಸುರೇಶ್ ಹೆಬ್ಳೀಕರ್
ವಿಜಯಲಕ್ಷ್ಮಿಗೆ ಕನ್ನಡಿಗರಿಂದ ಲಕ್ಷಾಂತರ ರೂ. ಸಹಾಯ; ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ ಎಂದ 'ನಾಗಮಂಡಲ' ನಟಿ
ತಮಿಳು ಹಿರಿಯ ನಟ ದಿವಂಗತ ಶಿವಾಜಿ ಗಣೇಶನ್ ಗೆ ಗೂಗಲ್ ಡೂಡಲ್ ಗೌರವ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


