ಆನಂದ್ ಮಿಶ್ರಾ ಚೊಚ್ಚಲ ನಿರ್ದೇಶನ ಥ್ರಿಲ್ಲರ್ ಸಿನಿಮಾದಲ್ಲಿ ದಿಗಂತ್- ತರುಣ್ ಚಂದ್ರ!
ಗಾಳಿಪಟ ನಟ ದಿಗಂತ್ ಮತ್ತು ಲವ್ ಗುರು ನಾಯಕ ತರುಣ್ ಚಂದ್ರ ಆನಂದ್ ಮಿಶ್ರಾ ಚೊಚ್ಚಲ ನಿರ್ದೇಶನದ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಗಾಳಿಪಟ ನಟ ದಿಗಂತ್ ಮತ್ತು ಲವ್ ಗುರು ನಾಯಕ ತರುಣ್ ಚಂದ್ರ ಆನಂದ್ ಮಿಶ್ರಾ ಚೊಚ್ಚಲ ನಿರ್ದೇಶನದ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಸದ್ಯಕ್ಕೆ ಸಿನಿಮಾಗೆ ಟ್ರಿನ್ ಟ್ರಿನ್ ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಕೊರಿಯನ್ ಮತ್ತು ಹಾಲಿವುಡ್ ಚಲನಚಿತ್ರಗಳಿಂದ ಪ್ರಬಾವಿತರಾಗಿ ಸಿನಿಮಾ ಕಥೆ ಬರೆದಿರುವುದಾಗಿ ನಿರ್ದೇಶಕ ಆನಂದ್ ಮಿಶ್ರಾ ತಿಳಿಸಿದ್ದಾರೆ.
ಮುಂಬಯಿ ಮೂಲದ ಆನಂದ್ ಹಲವು ರಿಯಾಲಿಟಿ ಶೋ ಗಳನ್ನುನಿರ್ಮಿಸಿದ್ದಾರೆ. ವಿವಿಧ ಚಾನೆಲ್ ಗಳಿಗೆ ಕಾರ್ಯಕ್ರಮ ನಿರ್ಮಿಸಿ ಕೊಟ್ಟಿದ್ದಾರೆ. ಬಾಲಿವುಡ್ ಗೆ ಕೆಲವು ಮ್ಯೂಸಿಕ್ ವಿಡಿಯೋಗಳು, ವಾಣಿಜ್ಯ ಜಾಹೀರಾತು, ಮತ್ತು ಸಣ್ಣಕತೆಗಳನ್ನು ನಿರ್ದೇಶಿಸಿದ್ದಾರೆ.
ನಿರ್ಮಾಪಕ ಕಮರ್ ಅವರು ತಮ್ಮ ಹೋಮ್ ಬ್ಯಾನರ್ ಕಮರ್ ಫ್ಯಾಕ್ಟರಿ ಅಡಿಯಲ್ಲಿ ಪ್ರಾಜೆಕ್ಟ್ ನಿರ್ಮಿಸುತ್ತಿದ್ದಾರೆ. "ಇದು ಕಮರ್ ಅವರೊಂದಿಗಿನ ನನ್ನ ಮೊದಲ ಚಿತ್ರವಾಗಿದೆ, ಆದರೆ, ನಾನು ಈ ಹಿಂದೆ ಒಂದೆರಡು ಶೋಗಳಿಂದಾಗಿ ನಿರ್ಮಾಪಕರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಆನಂದ್ ತಿಳಿಸಿದ್ದಾರೆ.
ಬಾಕ್ಸ್ ಕ್ರಿಕೆಟ್ ಲೀಗ್ ಮತ್ತು ಇಂಡಿಯನ್ ಬೌಲಿಂಗ್ ಲೀಗ್, ಇದರಲ್ಲಿ ಕನ್ನಡದ ವಿವಿಧ ಕಲಾವಿದರು ಮತ್ತು ಸ್ಟಾರ್ ಗಳು ಭಾಗವಹಿಸಿದ್ದರು. ಸ್ಯಾಂಡಲ್‌ವುಡ್ ನನಗೆ ಹೊಸದಲ್ಲ ಎಂದು ತಿಳಿಸಿದ್ದಾರೆ.
ಜನವರಿ ಮದ್ಯದಲ್ಲಿ ಸಿನಿಮಾ ಆರಂಭಿಸಲು ನಿರ್ದೇಶಕರು ಪಲಾನ್ ಮಾಡಿದ್ದಾರೆ. ಸದ್ಯ ಸಿನಿಮಾಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಎಚ್ .ಸಿ ವೇಣು ಛಾಯಾಗ್ರಹಣವಿದ್ದು, ಆನಂದ್ ರಾಜಾ ವಿಕ್ರಮ್ ಸಂಗೀತ ನೀಡಲಿದ್ದಾರೆ.
ಮಾರಿಗೋಲ್ಡ್, ಗಾಳಿಪಟ 2, ಹುಟ್ಟುಹಬ್ಬದ ಶುಭಾಷಯಗಳು, ಮತ್ತು ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರಗಳ ಚಿತ್ರೀಕರಣ ಮುಗಿಸಿರುವ ದಿಗಂತ್ ಈಗ ಬಿಡುಗಡೆಗೆ ಕಾಯುತ್ತಿದ್ದಾರೆ.
ತೆಲುಗು ಚಿತ್ರದ ಕನ್ನಡ ರಿಮೇಕ್ ಎವಾರುಗಾಗಿ ದಿಗಂತ್ ಸದ್ಯ ಬ್ಯುಸಿಯಾಗಿದ್ದಾರೆ. ಗೋವಾ ಚಿತ್ರದಲ್ಲಿ (2015) ಕೊನೆಯದಾಗಿ ಕಾಣಿಸಿಕೊಂಡಿದ್ದ ತರುಣ್ ಚಂದ್ರ, ಕೆಲವು ವರ್ಷಗಳಿಂದ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಆನಂದ್ ಮಿಶ್ರಾ ಅವರ ಟ್ರಿನ್ ಟ್ರಿನ್ ಮೂಲಕ ಪುನರಾಗಮಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


