ಸಿನಿಮಾ ವಿತರಣೆಗೂ 'ಡಿ ಬೀಟ್ಸ್' ಆಡಿಯೋ ಸಂಸ್ಥೆ ಮುಂದು!
ವಿ ಹರಿಕೃಷ್ಣ ಮತ್ತು ಶೈಲಜಾ ನಾಗ್ ಒಡೆತನದ ಆಡಿಯೋ ಕಂಪನಿ ಡಿ ಬೀಟ್ಸ್ ಚಲನಚಿತ್ರ ವಿತರಣೆಗೂ ಮುಂದಾಗಿದೆ.

ವಿ ಹರಿಕೃಷ್ಣ ಮತ್ತು ಶೈಲಜಾ ನಾಗ್ ಒಡೆತನದ ಆಡಿಯೋ ಕಂಪನಿ ಡಿ ಬೀಟ್ಸ್ ಚಲನಚಿತ್ರ ವಿತರಣೆಗೂ ಮುಂದಾಗಿದೆ.
ಪ್ಯಾನ್ ಇಂಡಿಯಾದತ್ತ ಸಿನಿಮಾಗಳು ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ಎಲ್ಲಾ ರೀತಿಯ ಆಯಾಮಗಳಲ್ಲಿಯೂ ಕೆಲಸ ಮಾಡುವುದು ಮುಖ್ಯವಾಗಿದೆ. ಹೀಗಾಗಿ ಸಿನಿಮಾ ವಿತರಣೆ ನಮ್ಮ ಮುಂದಿನ ಹಾದಿಯಾಗಿದೆ ಎಂದು ಸಂಗೀತ ಸಂಯೋಜಕ-ನಿರ್ದೇಶಕ ವಿ.ಹರಿಕೃಷ್ಣ ಅವರು ಹೇಳಿದ್ದಾರೆ.
ಈ ಕುರಿತು ಹಲವು ದಿನಗಳ ಹಿಂದಿನಿಂದಲೂ ಚಿಂತನೆಗಳನ್ನು ನಡೆಸಲಾಗುತ್ತಿತ್ತು. ಸಾಂಕ್ರಾಮಿಕ ರೋಗಕ್ಕೆ ಮುನ್ನವೇ ಆರಂಭಿಸಲು ಮುಂದಾಗಿದ್ದೆವು. ಇದೀಗ ಅಧಿಕೃತವಾಗಿ ನವೆಂಬರ್ 14 ರಂದು ಸಿನಿಮಾ ವಿತರಣೆ ಮಾಡಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಿನಿಮಾ ಕುರಿತು ಎಲ್ಲಾ ಪ್ರಕ್ರಿಯೆಯನ್ನೂ ಒಂದು ಚೌಕಟ್ಟಿನಲ್ಲಿ ತರುವುದು ನಮ್ಮ ಗುರಿಯಾಗಿದೆ. ಶೀಘ್ರದಲ್ಲೇ ಸ್ಟುಡಿಯೋವೊಂದನ್ನೂ ಆರಂಭಿಸಲಾಗುತ್ತದೆ ಎಂದಿದ್ದಾರೆ.
ಶೈಲಜಾ ನಾಗ್ ಅವರು ಮಾತನಾಡಿ, ಸಿನಿಮಾ ಕುರಿತ ಪ್ರತೀ ಆಯಾಮದಲ್ಲಿಯೂ ತೊಡಗಿಸಿಕೊಳ್ಳುವ ಕುರಿತು ನಾವು ಮಾಡಿದ್ದೇವೆ. ವಿತರಣೆಯು ನಮ್ಮ ಮುಂದಿನ ಹಂತವಾಗಿದೆ. ವಿಚಾರಗಳು ಹಾಗೂ ವ್ಯವಹಾರಗಳು ಪರಸ್ಪರ ಅವಲಂಬಿತವಾಗಿವೆ. ಯಜಮಾನ ಬೆಳ್ಳಿತೆರೆಗೆ ನಮ್ಮ ಮೊದಲ ಸಂಯೋಜಿತ ಚಿತ್ರವಾಗಿತ್ತು. ಅಲ್ಲಿ ಸಿನಿಮಾ ವಿತರಣೆಯ ಮೊದಲ ಅನುಭವವನ್ನು ಪಡೆದಿದ್ದೆವು. ಬ್ಯಾಲೆನ್ಸ್ ಶೀಟ್ ಉತ್ತಮರೀತಿಯಲ್ಲಿ ಕಂಡು ಬಂದಿದ್ದೇ ಆದರೆ, ಕಂಪನಿ ಉತ್ತಮ ರೀತಿಯಲ್ಲಿ ಮುನ್ನಡೆಯಲಿದೆ. ನಾವು ಒಂದೆರಡು ಚಿತ್ರಗಳನ್ನು ಜೋಡಿಸಿದ್ದೇವೆ ಮತ್ತು ನಟ ದರ್ಶನ್ ಅವರ ಕ್ರಾಂತಿ ಚಿತ್ರದೊಂದಿಗೆ ಈ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


