ಸಿನಿಮಾ ಸುದ್ದಿ

ನಂದಮೂರಿ ಬಾಲಕೃಷ್ಣ ಜೊತೆ ತೆಲುಗು ಸಿನಿಮಾ: ಟಾಲಿವುಡ್ ಗೆ ದುನಿಯಾ ವಿಜಯ್ ಪಾದಾರ್ಪಣೆ

ಕ್ರ್ಯಾಕ್ ತೆಲುಗು ಸಿನಿಮಾ ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿರುವ ನಂದಮೂರಿ ಬಾಲಕೃಷ್ಣ ಅಭಿನಯದ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬಂದಿದೆ.

ನಂದಮೂರಿ ಬಾಲಕೃಷ್ಣ ಜೊತೆ ತೆಲುಗು ಸಿನಿಮಾ: ಟಾಲಿವುಡ್ ಗೆ ದುನಿಯಾ ವಿಜಯ್ ಪಾದಾರ್ಪಣೆ
ದುನಿಯಾ ವಿಜಯ್
Published On :

ಬೆಂಗಳೂರು: ಸಲಗ ಸಿನಿಮಾದ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ನಟ ದುನಿಯಾ ವಿಜಯ್ ಟಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ. 

ಕ್ರ್ಯಾಕ್ ತೆಲುಗು ಸಿನಿಮಾ ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿರುವ ನಂದಮೂರಿ ಬಾಲಕೃಷ್ಣ ಅಭಿನಯದ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬಂದಿದೆ. ಈ ಸಿನಿಮಾಗೆ NB107 ಎಂದು ಹೆಸರಿಡಲಾಗಿದ್ದು, ಪಾತ್ರವರ್ಗದಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. 

ದುನಿಯಾ ವಿಜಯ್ ಈ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. 

ರಾಯಲಸೀಮೆ ಪ್ರಾಂತ್ಯದಲ್ಲಿ ಚಿತ್ರೀಕರಣ ನಡೆಯಲಿದ್ದು, ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ ಎಂದು ತಿಳಿದುಬಂದಿದೆ. ಇತ್ತೀಚಿಗೆ ಬಿಡುಗಡೆಯಾದ ಸಲಗ ಸಿನಿಮಾದಲ್ಲಿ ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. ಸಲಗ ಸಿನಿಮಾವನ್ನು ಟಗರು ನಿರ್ಮಾಪಕ ಕೆ.ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದರು.

Related Article

ಸಮಾಜ ಸೇವೆ ಮಾಡುವ ಉದಾತ್ತ ಕೆಲಸವನ್ನು ಬಿಟ್ಟು ಹೋಗಿದ್ದೀಯಾ, ಅದನ್ನು ಮುಂದುವರಿಸುವ ಶಕ್ತಿಯನ್ನು ನೀಡು: 'ಅಪ್ಪು'ನೆನೆದು ರಾಘಣ್ಣ ಭಾವುಕ ನುಡಿ

ಕಲಾವಿದನಾಗಿ ನಾನು ನೀರಿನಂತೆ ಇರಬೇಕು, ಪಾತ್ರ ಯಾವುದದರೂ ಅದಕ್ಕೆ ಒಗ್ಗಿಕೊಳ್ಳಬೇಕು: ಟಾಮ್ ಅಂಡ್ ಜೆರ್ರಿ ನಾಯಕ ನಿಶ್ಚಿತ್ ಕೊರೊಡಿ

ಸಮಾಧಿ ಬಳಿ ಪುನೀತ್ ಪುಣ್ಯ ಸ್ಮರಣೆ: ನಟ ವಿನೋದ್ ರಾಜ್ ರಿಂದ ಅಪ್ಪುಗೆ ಪಿಂಡ ಪ್ರದಾನ

ಅಪ್ಪು ಪುಣ್ಯ ಸ್ಮರಣೆ: ನಾಳೆ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

ಜೈ ಭೀಮ್ ಚಿತ್ರದಲ್ಲಿ ಸೂರ್ಯ ಲಾಯರ್ ಲುಕ್ ಹಿಂದೆ ಬೆಂಗಳೂರು ಮೂಲದ ವಿನ್ಯಾಸಕ ಬಸ್ಸಮ್ ಒಸ್ಮಾನ್!

ದೇಶ ವಿದೇಶದ ಅಂತಾರಾಷ್ತ್ರೀಯ ಚಿತ್ರೋತ್ಸವಗಳಲ್ಲಿ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಸದ್ದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.