ಸಿನಿಮಾ ಸುದ್ದಿ

ವಿಚ್ಚೇದನದ ನಂತರ ಅಪ್ಪ-ಅಮ್ಮ ಹ್ಯಾಪಿಯಾಗಿದ್ದಾರೆ: ಶೃತಿ ಹಾಸನ್

ಕಮಲ್ ಹಾಸನ್ ಪುತ್ರಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ನಾಯಕಿ ಶೃತಿ ಹಾಸನ್, ತಮ್ಮದೇ ಆದ ನಟನೆ, ಸಿನಿಮಾಗಳ ಆಯ್ಕೆ ಮೂಲಕ ಅತ್ಯಲ್ಪ ಸಮಯದಲ್ಲಿ ಸ್ಟಾರ್ ನಾಯಕಿ ಆಗಿ ಬೆಳೆದರು.

ವಿಚ್ಚೇದನದ ನಂತರ ಅಪ್ಪ-ಅಮ್ಮ ಹ್ಯಾಪಿಯಾಗಿದ್ದಾರೆ: ಶೃತಿ ಹಾಸನ್
ಶೃತಿ ಹಾಸನ್
Published On :

ಚೆನ್ನೈ: ಕಮಲ್ ಹಾಸನ್ ಪುತ್ರಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ನಾಯಕಿ ಶೃತಿ ಹಾಸನ್, ತಮ್ಮದೇ ಆದ ನಟನೆ, ಸಿನಿಮಾಗಳ ಆಯ್ಕೆ ಮೂಲಕ ಅತ್ಯಲ್ಪ ಸಮಯದಲ್ಲಿ ಸ್ಟಾರ್ ನಾಯಕಿ ಆಗಿ ಬೆಳೆದರು.

ಗಾಯಕಿ , ನಟಿ, ಡ್ಯಾನ್ಸರ್, ಸಂಗೀತ ನಿರ್ದೇಶಕಿ.. ಹೀಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿರುವ, ತಮಗನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುವ ಪ್ರವೃತ್ತಿಯ ಶೃತಿ ಹಾಸನ್ ಹೊಸದಾಗಿ... ತನ್ನ ತಂದೆ ತಾಯಿ ವಿಚ್ಚೇದನ ಕುರಿತು ಮಾತನಾಡಿದ್ದಾರೆ.

ಶ್ರುತಿ ಹಾಸನ್ ಬಾಲ್ಯದಲ್ಲಿದ್ದಾಗಲೇ ಅವರ ತಂದೆ ತಾಯಿ ಕಮಲ್ ಹಾಸನ್ ಹಾಗೂ ಸಾರಿಕಾ ಬೇರ್ಪಟ್ಟಿದ್ದರು. ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಶೃತಿ ಹಾಶನ್ ಈ ಬಗ್ಗೆ ಮಾತನಾಡಿ .. 'ಅವರು ಬೇರ್ಪಟ್ಟಿದ್ದಕ್ಕೆ ನನಗೆ ಸಂತೋಷವಾಗಿದೆ. ಯಾಕೆಂದರೆ ಅವರಿಗೆ ಇಷ್ಟವಿಲ್ಲದೆ, ಯಾವುದೋ ಕಾರಣ ಹೇಳಿ ಅವರನ್ನು ಬಲವಂತದಿಂದ ಒಂದು ಗೂಡಿಸುವುದು ಸರಿಯಲ್ಲ.

ಅವರಿಬ್ಬರೂ ಅದ್ಭುತ ವ್ಯಕ್ತಿಗಳು. ನಾನು ಚಿಕ್ಕವಳಿದ್ದಾಗಲೇ ಅವರು ಪರಸ್ಪರ ಬೇರ್ಪಟ್ಟಿದ್ದರು. ಅದು ತುಂಬಾ ಸುಲಭವಾಗಿ ನಡೆಯಿತು. ಅವರು ಒಟ್ಟಾಗಿ ಇದ್ದದ್ದಕ್ಕಿಂತಲೂ ಬೇರ್ಪಟ್ಟ ನಂತರ ಅವರು ಸಂತೋಷವಾಗಿದ್ದಾರೆ. ಇನ್ನೂ ತಂದೆ ಕಮಲ್ ಹಾಸನ್ ಜೊತೆ ನಾನು ಹೆಚ್ಚು ನಿಕಟವಾಗಿದ್ದೇನೆ ಎಂದು ಶೃತಿ ಹಾಸನ್ ಹೇಳಿದ್ದಾರೆ.

ಕಮಲ್ ಹಾಸನ್ ಮೊದಲು ಡ್ಯಾನ್ಸರ್ ವಾಣಿ ಗಣಪತಿ ಅವರನ್ನು ವಿವಾಹವಾಗಿದ್ದರು. ಹತ್ತು ವರ್ಷಗಳ ಅವರ ವೈವಾಹಿಕ ಜೀವನ ಚೆನ್ನಾಗಿದ್ದರೂ, 1988 ರಲ್ಲಿ ಅವರು ಪರಸ್ಪರ ವಿಚ್ಚೇದನ ಪಡೆದಿದ್ದರು. ನಂತರ ಕಮಲ್ ಸಾರಿಕಾರನ್ನು ಪ್ರೀತಿಸಿದರು. 1980ರಲ್ಲಿ ವಿವಾಹವಾದರು. ಅವರ ದಾಂಪತ್ಯದ ಗುರುತಾಗಿ 1986 ರಲ್ಲಿ ಶ್ರುತಿ ಹಾಸನ್, 1991ರಲ್ಲಿ ಅಕ್ಷರಾ ಹಾಸನ್‌ ಜನಿಸಿದ್ದರು.

ಈ ನಡುವೆ, ಕಮಲ್ ಮತ್ತು ಸಾರಿಕಾ ನಡುವೆ ಮನಸ್ತಾಪ ಆರಂಭಗೊಂಡು, ಅದು ದೊಡ್ಡದಾದ ಕಾರಣ ಅವರು 2004 ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. 2015ರಲ್ಲಿ 'ಶಮಿತಾಬ್' ಚಿತ್ರದಲ್ಲಿ ಅಕ್ಷರಾ ಹಾಸನ್ ಹೆಸರು ಗಳಿಸಿದರೆ, ಶ್ರುತಿ ಹಾಸನ್ ತಮಿಳು, ತೆಲುಗು ಹಿಂದಿ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ್ನಣೆ ಪಡೆದುಕೊಂಡಿದ್ದಾರೆ ಪ್ರಸ್ತುತ ಅವರು 'ಸಲಾರ್' ನಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.