ಲಾಕ್ ಡೌನ್ ಸಮಯವನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುತ್ತಿದ್ದಾರೆ 'ಕವಲುದಾರಿ' ನಟಿ!
ಹೇಮಂತ್ ಎಂ ರಾವ್ ಅವರ ಕವಲು ದಾರಿಯಲ್ಲಿ ನಟಿಸಿದ್ದ ರೋಶಿನಿ ಪ್ರಕಾಶ್ ಕನ್ನಡದ ಹಲವು ಸಿನಿಮಾಗಳಲ್ಲಿ ಆಫರ್ ಪಡೆದುಕೊಂಡಿದ್ದಾರೆ.

ಹೇಮಂತ್ ಎಂ ರಾವ್ ಅವರ ಕವಲು ದಾರಿಯಲ್ಲಿ ನಟಿಸಿದ್ದ ರೋಶಿನಿ ಪ್ರಕಾಶ್ ಕನ್ನಡದ ಹಲವು ಸಿನಿಮಾಗಳಲ್ಲಿ ಆಫರ್ ಪಡೆದುಕೊಂಡಿದ್ದಾರೆ.
ಪ್ರದೀಪ್ ವರ್ಮಾ ಅವರ ಮುರ್ಫಿ ಮತ್ತು ನಾಗೇಂದ್ರ ಪ್ರಸಾದ್ ಚೊಚ್ಚಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಓ ಮೈ ಕಾದಲುವೆ ಎಂಬ ತಮಿಳು ಸಿನಿಮಾ ರಿಮೇಕ್ ಆಗಿದೆ.ಇದಕ್ಕೆ ಲವ್ ಮಾಕ್ಟೇಲ್ ಹೀರೋ ಕೃಷ್ಣ ನಾಯಕ.
ಈ ಸಿನಿಮಾದಲ್ಲಿ ಸಂಗೀತ ಶೃಂಗೇರಿ ಕೂಡ ನಟಿಸಿದ್ದು ಚಿತ್ರದ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಸಿನಿಮಾಗಳ ಮೊದಲ ಭಾಗದ ಶೂಟಿಂಗ್ ಈಗಾಗಲೇ ಮುಗಿದಿದೆ.
ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ರೋಷಿನಿ ಪ್ರಕಾಶ್ ನಟಿಸಿದ್ದಾರೆ. ತೆಲುಗು ವೆಬ್ ಸಿರೀಸ್ 11 ಅವರ್ಸ್ ನಲ್ಲಿ ನಟಿಸಿದ್ದರು. ಕ್ರೈಮ್ ಥ್ರಿಲ್ಲರ್ ಆಗಿರುವ 11 ಅವರ್ ವೆಬ್ ಸಿರೀಸ್ ಅನ್ನು ಪ್ರವೀಣ್ ಸತ್ತಾರು ನಿರ್ದೇಶಿಸಿದ್ದರು.
ಒಟಿಟಿಲ್ಲಿ ಬಿಡುಗಡೆಯಾದ 47 ದಿನಗಳು ಮತ್ತು 11 ಅವರ್ಸ್ ನನ್ನ ನಟನೆಯ ಕೊನೆಯ ವೆಬ್ ಸಿರೀಸ್ ಆಗಿತ್ತು. ನನ್ನ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ, ಪ್ರತಿಯೊಂದು ಭಾಷೆಯಲ್ಲಿಯೂ ಕಥೆಯ ಆಯ್ಕೆ ವೇಳೆ ತುಂಬಾ ಜಾಗರೂಕತೆ ವಹಿಸುತ್ತಾರಂತೆ ರೋಶಿನಿ ಪ್ರಕಾಶ್.
ಕವಲು ದಾರಿ ಸಿನಿಮಾ ನಂತರ ನನಗೆ ಹಲವು ಅವಕಾಶಗಳು ಒದಗಿ ಬಂದವು, ಆದರೆ ಕಥೆ ನನಗೆ ಒಗ್ಗುವುದಿಲ್ಲ ಎಂಬ ಕಾರಣಕ್ಕೆ ನಾನು ನಿರಾಕರಿಸಿದೆ.
ತನ್ನ ಸೃಜನಶೀಲತೆಯನ್ನು ಅನ್ವೇಷಿಸಲು ರೋಶಿನಿ ಲಾಕ್ ಡೌನ್ ಅನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಟಿಯಾಗಿ ಬದಲಾಗಿರುವ ಮಾಡೆಲ್ ರೋಶಿನಿ ಭರತನಾಟ್ಯದಲ್ಲಿ ಡಿಪ್ಲಮಾ ಮಾಡಿದ್ದಾರೆ. ಇದೀಗ ಬರವಣಿಗೆ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ಪರೀಕ್ಷಿಸುತ್ತಿದ್ದಾರೆ.
ಸದ್ಯ ಮೈಸೂರಿನಲ್ಲಿರುವ ರೋಷಿನಿ ತನ್ನ ಸ್ನೇಹಿತರೊಂದಿಗೆ ಸೇರಿ ಕಥೆ ಬರೆಯುತ್ತಿದ್ದಾರೆ. ಕೆನಡಾದ ನಿರ್ದೇಶಕ ರಜನಿ ಮೈಸೂರು ಚಾಮರಾಜ್ ಅವರೊಂದಿಗೆ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದೇನೆ. ಅವರು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಿಂದ ಚಲನಚಿತ್ರ ನಿರ್ಮಾಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಅವರ ಕಿರುಚಿತ್ರಗಳಿಗಾಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಥೆ ಬರೆಯುವುದರ ಜೊತೆಗೆ, ಅದೇ ಕಥೆಯಲ್ಲಿ ನಟಿಸುತ್ತೇನೆ ಎಂದು ಹೇಳಿರುವ ರೋಶಿನಿ ಪ್ರಕಾಶ್ ಉಳಿದ ಪಾತ್ರಗಳ ಕಲಾವಿದರನ್ನು ನಂತರ ಆರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


