ನಟ ಉಪೇಂದ್ರ ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿಸುತ್ತಾರೆ; ಈ ಮಾಹಿತಿಗಳನ್ನು ನೀಡಿ ಅವರನ್ನು ಸಂಪರ್ಕಿಸಿ...
ಕೊರೋನಾ ಲಾಕ್ ಡೌನ್ ನಗರವಾಸಿಗಳಿಗೆ ಹಲವು ಸಮಸ್ಯೆಗಳನ್ನು ತಂದರೆ, ಹಳ್ಳಿವಾಸಿಗಳಿಗೂ ಇನ್ನು ಕೆಲವು ಸಮಸ್ಯೆಗಳನ್ನು ಉಂಟುಮಾಡಿದೆ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದಾಗಿದೆ, ಹಣ್ಣು-ತರಕಾರಿಗಳನ್ನು ಹೇಗೆ ನಗರಗಳಿಗೆ ಸಾಗಣೆ ಮಾಡುವುದು, ಮಾರುಕಟ್ಟೆ ಎಲ್ಲಿದೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ.

ಬೆಂಗಳೂರು: ಕೊರೋನಾ ಲಾಕ್ ಡೌನ್ ನಗರವಾಸಿಗಳಿಗೆ ಹಲವು ಸಮಸ್ಯೆಗಳನ್ನು ತಂದರೆ, ಹಳ್ಳಿವಾಸಿಗಳಿಗೂ ಇನ್ನು ಕೆಲವು ಸಮಸ್ಯೆಗಳನ್ನು ಉಂಟುಮಾಡಿದೆ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದಾಗಿದೆ, ಹಣ್ಣು-ತರಕಾರಿಗಳನ್ನು ಹೇಗೆ ನಗರಗಳಿಗೆ ಸಾಗಣೆ ಮಾಡುವುದು, ಮಾರುಕಟ್ಟೆ ಎಲ್ಲಿದೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ.
ಕೆಲವು ಕಡೆಗಳಲ್ಲಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಯಿಲ್ಲದೆ ನೆಲದಲ್ಲಿ ಚೆಲ್ಲಿದ, ನಾಶಮಾಡಿದ ಉದಾಹರಣೆಗಳು ಸಾಕಷ್ಟಿವೆ.
ಈ ಬಾರಿ ಕೊರೋನಾ ಲಾಕ್ ಡೌನ್ ಸಮಯದ ಆರಂಭದಿಂದಲೂ ನಟ ಉಪೇಂದ್ರ ಅವರು ಸಿನಿಮಾ ವಲಯದ ಕಾರ್ಮಿಕರಿಗೆ, ರೈತರಿಗೆ ಅವರ ಪ್ರಜಾಕೀಯ ತಂಡದ ವತಿಯಿಂದ ಸಹಾಯ ಮಾಡುತ್ತಲೇ ಬಂದಿದ್ದಾರೆ.ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿರುವ ರೈತರಿಂದ ನಮಗೆ ಅವಶ್ಯಕತೆಯಿರುವ ಬೆಳೆಗಳನ್ನು ಸೂಕ್ತ ಬೆಲೆ ನೀಡಿ ಕೊಂಡುಕೊಳ್ಳುತ್ತೇವೆ, ಬೆಳೆ ಯಾವುದು, ಎಷ್ಟು ಕೆಜಿಯಿದೆ, ಬೆಲೆ ಎಷ್ಟು, ಸಾಗಾಟ ವೆಚ್ಚ ಎಷ್ಟು ಎಂದು ತಿಳಿಸಿ, ಎಲ್ಲಾ ಮಾಹಿತಿಗಳನ್ನು ವಾಟ್ಸಾಪ್ ಸಂಖ್ಯೆ 9845763396ಗೆ ಹಂಚಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


