ಸಿನಿಮಾ ಸುದ್ದಿ

ಮುದ್ದಾದ ಜೋಡಿಗಳ ಕ್ಯೂಟ್ ಲವ್ ಸ್ಟೋರಿ "ನಾನು ನಾನು ಪ್ರೀತಿಸುತ್ತಿರುವೆ"

ನಾನು ನಾನು ಪ್ರೀತಿಸುತ್ತಿರುವೆ... ನಿನ್ನೆ ನಿನ್ನೆ ಪ್ರೀತಿಸುತ್ತಿರುವೆ... ಎಂಬ ಆಲ್ಬಂ ಸಾಂಗ್‌ವೊಂದು ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಸದ್ದು ಮಾಡುತ್ತಿದೆ.

ಮುದ್ದಾದ ಜೋಡಿಗಳ ಕ್ಯೂಟ್ ಲವ್ ಸ್ಟೋರಿ "ನಾನು ನಾನು ಪ್ರೀತಿಸುತ್ತಿರುವೆ"
ನಾನು ನಿನ್ನ ಪ್ರೀತಿಸುವೆ ಚಿತ್ರದ ಪೋಸ್ಟರ್
Published On :

ಬೆಂಗಳೂರು; ನಾನು ನಾನು ಪ್ರೀತಿಸುತ್ತಿರುವೆ... ನಿನ್ನೆ ನಿನ್ನೆ ಪ್ರೀತಿಸುತ್ತಿರುವೆ...ಎಂಬ ಆಲ್ಬಂ ಸಾಂಗ್‌ವೊಂದು ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಸದ್ದು ಮಾಡುತ್ತಿದೆ. 

ಈ ಮೊದಲು ಬಿಡುಗಡೆ ಆಗಿದ್ದ ಟೀಸರ್ ಸಹ ಕುತೂಹಲ ಕೆರಳಿಸಿತ್ತು. 24 ಗಂಟೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಮಂದಿಯನ್ನು ಸೆಳೆದಿತ್ತು. ಶುಕ್ರವಾರ ಸಾಂಗ್ ರಿಲೀಸ್ ಆಗಿದ್ದು, ಸೌಂಡ್ ಜೋರಾಗಿಯೇ ಇದೆ. ಮುದ್ದಾದ ಜೋಡಿಗಳ ನವಿರಾದ ಪ್ರೇಮಕತೆ ಇರುವ ಹಾಡಿಗೆ ಸಾಹಿತ್ಯ, ಸಂಗೀತ, ಹಿನ್ನೆಲೆ ದೃಶ್ಯಕಾವ್ಯ  ಮತ್ತಷ್ಟು ಜೀವ ತುಂಬಿದೆ.  

Story image

ಕಷ್ಣ- ತುಳಸಿ ಸಿನಿಮಾ ಖ್ಯಾತಿಯ ಮೇಘಶ್ರೀ ಈ ಕ್ಯೂಟ್ ಲವ್ ಸ್ಟೋರಿ ಹಾಡಿನ ನಾಯಕಿ. ಬಬ್ಲಿ ಬಬ್ಲಿ ಹುಡುಗಿಯಾಗಿ ಮೇಘ್ರಶ್ರೀ ಕಾಣಿಸಿಕೊಂಡಿದ್ದು, ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ನಾಯಕರಾಗಿ ಮಿಂಚಿದ್ದಾರೆ.

ಮಂಗಳೂರಿನ ಕಡಲ ಕಿನಾರೆಯಲ್ಲಿ ಅರಳಿರುವ ಈ ಪ್ರೇಮಕಾವ್ಯ, ಸಖತ್ ಟ್ರೆಂಡಿ ಆಗಿದೆ. ತನ್ನ ಹುಡುಗಿಯನ್ನು ಒಲಿಸಿಕೊಳ್ಳಲು ನಾಯಕ ಮಾಡುವ ಮುದ್ದಾಟ ಅಷ್ಟೇ ಚೆಂದವಾಗಿದೆ. ಸೌಂದರ್ಯಕ್ಕಿಂತ ಪ್ರೀತಿ ಮುಖ್ಯ ಎಂಬ ಸಂದೇಶ ಸಹ ಹಾಡಿನಲ್ಲಿದೆ.

ನಿರ್ಮಾಪಕಿ ಮಮತಾ ಶ್ರೀ ಗೌಡ

ತನಿಖೆ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಜಿ.ಎಸ್.ಕಲಿಗೌಡ ಸಾಹಿತ್ಯ ಬರೆದಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. ಮುರಳಿ ಮಾಸ್ಟರ್ ಹುಸೇನ್ ನೃತ್ಯ ನಿರ್ದೇಶನ ಮಾಡಿದ್ದು, ಕ್ರಿಸ್ಟೋಫರ್ ಜೈಸನ್ ಸಂಗೀತ ಮನಸ್ಸಿಗೆ ಮುದ ನೀಡುವಂತಿದೆ. ಧನು ಕೃಷ್ಣ ಸಂಕಲನದ ಹೊಣೆ ಹೊತ್ತಿದ್ದಾರೆ. ಶ್ಯಾಮ್ ಸಿಂಧನೂರು ಅವರ ಕ್ಯಾಮರಾ ಮೋಡಿ ಮಾಡಿದೆ.

Story image

ಕನಸುಗಳ ಫ್ಯಾಕ್ಟರಿ
ಡಿಎಂಎಫ್(ಡೈಮೆಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ) ಎಂಬ ಆಡಿಯೋ ಸಂಸ್ಥೆ ಈ ಆಲ್ಬಂ ಸಾಂಗ್‌ನ ನಿರ್ಮಾಪಕರು.  ನಿರ್ಮಾಪಕಿ ಮಮತಾ ಶ್ರೀ  ಇದರ ಹಿಂದಿರುವ ಶಕ್ತಿ. ಹೊಸಬರಿಗೆ ವೇದಿಕೆ ಕಲ್ಪಿಸಬೇಕೆಂಬ ಇವರ ಮೊದಲ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರಯತ್ನದಲ್ಲೇ ಗೆದ್ದಿರುವ ಖುಷಿ  ತಂಡಕ್ಕಿದೆ. ತಿಂಗಳಿಗೊಂದು ಆಲ್ಬಂ ಸಾಂಗ್ ಮಾಡಬೇಕೆಂಬ ಕನಸು ಈಗ ಮತ್ತಷ್ಟು ಗಟ್ಟಿಯಾಗಿದೆ. ಹೊಸ ಸಿನಿಮಾದ ಹಾಡುಗಳ ರೈಟ್ಸ್ ಪಡೆದುಕೊಳ್ಳಲು ಡೈಮಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.