141 ಕೋಟಿ ರೂ. ವಂಚನೆ ಪ್ರಕರಣ: ಪ್ರಸಿದ್ಧ ಕಿರುತೆರೆ ನಟ ಅನುಜ್ ಸಕ್ಸೇನಾ ಅರೆಸ್ಟ್
ಕಿರುತೆರೆ ನಟ ಹಾಗೂ ಎಲ್ಡರ್ ಫಾರ್ಮಾಸ್ಯುಟಿಕಲ್ಸ್ನ ಸಿಒಒ ಅನುಜ್ ಸಕ್ಸೇನಾ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗುರುವಾರ ಅನುಜ್ ಸಕ್ಸೇನಾ ಅವರನ್ನು ಬಂಧಿಸಿದೆ.

ಮುಂಬೈ: ಕಿರುತೆರೆ ನಟ ಹಾಗೂ ಎಲ್ಡರ್ ಫಾರ್ಮಾಸ್ಯುಟಿಕಲ್ಸ್ನ ಸಿಒಒ ಅನುಜ್ ಸಕ್ಸೇನಾ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗುರುವಾರ ಅನುಜ್ ಸಕ್ಸೇನಾ ಅವರನ್ನು ಬಂಧಿಸಿದೆ. ಹೂಡಿಕೆದಾರರಿಗೆ 141 ಕೋಟಿ ವಂಚಿಸಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಸಕ್ಸೇನಾ ಅವರನ್ನು ಬಂಧಿಸಲಾಗಿದೆ.
ಕಂಪನಿಯ ಸಿಒಒ ಆಗಿ ಅವರ ಪಾತ್ರದ ತನಿಖೆಗೆ ಇಒಡಬ್ಲ್ಯೂ ಅನುಜ್ ಸಕ್ಸೇನಾ ಅವರ ವಶಕ್ಕೆ ಮುಂದಾದಾಗ ಅವರು ತಾವೊಬ್ಬ ವೈದ್ಯಕೀಯ ಕಿಟ್ಗಳು ಮತ್ತು ಸ್ಯಾನಿಟೈಸರ್ಗಳನ್ನು ಉತ್ಪಾದಿಸುವ ಸುವ ಕಂಪನಿಯನ್ನು ಹೊಂದಿರುವವನು ಎಂದೂ ತನ್ನನ್ನು ವಶಕ್ಕೆ ಪಡೆಯುವುದು ಸರಿಯಲ್ಲವೆಂದು ವಿರೋಧಿಸಿದರು. ಸಿಒಒ ಆಗಿ ಸಕ್ಸೇನಾ ವಂಚನೆ ಮಾಡಿದ ಆರೋಪದ ಕುರಿತು ತಿಳುವಳಿಕೆ ಹೊಂದಿರಬಹುದು ಎಂಬ ಇಒಡಬ್ಲ್ಯೂ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು.
ಮೋಸ ಮತ್ತು ಕ್ರಿಮಿನಲ್ ಪಿತೂರಿ ಮತ್ತು ಮಹಾರಾಷ್ಟ್ರ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಾಸಿಟರ್ ಆಕ್ಟ್, 1999 ರ ವಿಭಾಗಗಳ ಮೇಲೆ ಸಕ್ಸೇನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2012 ರಲ್ಲಿ ಕಂಪನಿಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದರೆ ಲಾಭದಾಯಕ ಆದಾಯವನ್ನು ಹೊಂದುವ ಭರವಸೆ ನೀಡಿದ್ದ ಸಕ್ಸೇನಾ ಅವರ ವಿರುದ್ಧ ಹೂಡಿಕೆದಾರರು ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


