'ವಿಕ್ರಾಂತ್ ರೋಣ'ನಿಗೂ ಮೊದಲು 'ಕೋಟಿಗೊಬ್ಬ-3' ಬಿಡುಗಡೆ: ನಿರ್ಮಾಪಕ ಮಂಜುನಾಥ್ ಗೌಡ
ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಬಿಗ್‌ಬಜೆಟ್ ಚಿತ್ರ ‘ವಿಕ್ರಾಂತ್ ರೋಣ’ ಆಗಸ್ಟ್ 19ರಂದು ತೆರೆಯ ಮೇಲೆ ಬರಲು ಸಜ್ಜಾಗಿದೆ

ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಬಿಗ್‌ಬಜೆಟ್ ಚಿತ್ರ ‘ವಿಕ್ರಾಂತ್ ರೋಣ’ ಆಗಸ್ಟ್ 19ರಂದು ತೆರೆಯ ಮೇಲೆ ಬರಲು ಸಜ್ಜಾಗಿದೆ. ಲಾಕ್‌ಡೌನ್ ಕಾರಣದಿಂದ ಸ್ತಬ್ಧವಾಗಿದ್ದ ಚಿತ್ರರಂಗದ ಚಟುವಟಿಕೆ ಕ್ರಮೇಣವಾಗಿ ಗರಿಗೆದರುತ್ತಿದ್ದು, ಇದೇ ಸಂದರ್ಭದಲ್ಲಿ ‘ವಿಕ್ರಾಂತ್ ರೋಣ’ಗೆ ಅಂತಿಮ ಸ್ಪರ್ಶ ನೀಡುವಲ್ಲಿ ಸುದೀಪ್ ಮಗ್ನರಾಗಿದ್ದಾರೆ.
ಶಾಲಿನಿ ಆರ್ಟ್ಸ್ ಬ್ಯಾನರ್ ನಲ್ಲಿ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ತಯಾರಾಗುತ್ತಿದ್ದು, ಮಂಜುನಾಥ್ ಗೌಡ ನಿರ್ಮಾಪಕರಾಗಿದ್ದಾರೆ. ಶಿವ ಕಾರ್ತಿಕ್ ನಿರ್ದೇಶಿಸಿ ಸೂರಪ್ಪ ಬಾಬು ನಿರ್ಮಿಸಿರುವ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ನಂತರವೇ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮಂಜುನಾಥ್ ಗೌಡ ತಿಳಿಸಿದ್ದಾರೆ.
ಏಪ್ರಿಲ್ 29 ರಂದು ಬಹು ನಿರೀಕ್ಷಿತ ಕೋಟಿಗೊಬ್ಬ -3 ರಿಲೀಸ್ ಆಗಬೇಕಿತ್ತು, ಆದರೆ ಕೋರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತು. ಏಪ್ರಿಲ್ 29 ರಂದು ರಿಲೀಸ್ ಮಾಡಲು ಎಲ್ಲಾ ಸಿದ್ಧತೆ ನಡೆದಿತ್ತು, ಆದರೆ ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಮುಂದೂಡಲಾಗಿದೆ. ಆದರೆ ಕೋಟಿಗೊಬ್ಬ ರಿಲೀಸ್ ನಂತರವೇ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ.
ಕೊರೋನಾ ಪರಿಸ್ಥಿತಿ ಸುಧಾರಿಸಿದರೆ ಮತ್ತು ಥಿಯೇಟರ್ ಗಳಲ್ಲಿ ಶೇಕಡಾ 100 ರಷ್ಟು ಸೀಟಿಗೆ ಅವಕಾಶ ನೀಡಿದರೇ ಕೋಟಿಗೊಬ್ಬ 3 ಅನ್ನು ಬಿಡುಗಡೆ ಮಾಡಲು ಆಗಸ್ಟ್ 19 ರ ಬಿಡುಗಡೆಯ ದಿನಾಂಕವನ್ನು ಸೂರಪ್ಪ ಬಾಬು ಅವರಿಗೆ ನೀಡಲು ನಾನು ಬಯಸುತ್ತೇನೆ. ನಾನು ಇನ್ನೊಂದು ದಿನಾಂಕವನ್ನು ತೆಗೆದುಕೊಳ್ಳುತ್ತೇನೆ ಎಂದು ಮಂಜುನಾಥ್ ಗೌಡ ಹೇಳುತ್ತಾರೆ.
ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಬಗ್ಗೆ ಉತ್ತರಿಸಿದ ಮಂಜುನಾಥ್ ಗೌಡ, ಸದ್ಯ ಚಿತ್ರ ತಂಡ ಕನ್ನಡ ಡಬ್ಬಿಂಗ್ ನಡೆಯುತ್ತಿದ್ದು, ಭಾರತದ ಇತರ ಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿಯೂ ಡಬ್ಬಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ನಿರೂಪ್ ಭಂಡಾರಿ, ನೀತಾ ಅಶೋಕ್, ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ, ಕೋಟಿಗೊಬ್ಬ 3 ಸಿನಿಮಾದಲ್ಲಿ ಮಡೋನಾ ಸೆಬಾಸ್ಟಿಯನ್, ಅಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್ ಹಾಗೂ ಸುಧಾಂಶು ಪಾಂಡೆ ಮುಂತಾದವರು ಅಭಿನಯಿಸಿದ್ದಾರೆ.
ಸುದೀಪ್ ಅಭಿನಯದ ಎರಡು ಸಿನಿಮಾಗಳು ಭಾರೀ ನಿರೀಕ್ಷೆ ಮೂಡಿಸಿದ್ದು, ಕನ್ನಡ ಸಿನಿಮಾ ರಂಗ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆಗೆ ಕಾರಣನವಾಗಲಿದೆ ಎಂದು ಮಂಜುನಾಥ್ ಗೌಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


