ಸಿನಿಮಾ ಸುದ್ದಿ

ನಾವು ಭಾರತೀಯರು ಕಾರಣವಿಲ್ಲದೆ ವಾದ ಮಾಡುತ್ತೇವೆ: ಪ್ರಕಾಶ್ ರಾಜ್

ಖಡಕ್ ಡೈಲಾಗ್ ಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವ ನಟ ಪ್ರಕಾಶ್ ರಾಜ್, ಎಂದಿಗೂ ತನ್ನ ಮನಸ್ಸಿನ ವಿರುದ್ಧವಾಗಿ ಮಾತನಾಡಿಲ್ಲ.

ನಾವು ಭಾರತೀಯರು ಕಾರಣವಿಲ್ಲದೆ ವಾದ ಮಾಡುತ್ತೇವೆ: ಪ್ರಕಾಶ್ ರಾಜ್
ಪ್ರಕಾಶ್ ರಾಜ್
Published On :

ಬೆಂಗಳೂರು: ಖಡಕ್ ಡೈಲಾಗ್ ಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವ ನಟ ಪ್ರಕಾಶ್ ರಾಜ್, ಎಂದಿಗೂ ತನ್ನ ಮನಸ್ಸಿನ ವಿರುದ್ಧವಾಗಿ ಮಾತನಾಡಿಲ್ಲ. 

ಇದೀಗ ತೆಲುಗು ಚಿತ್ರರಂಗದ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಚುನಾವಣೆಗೆ ಸ್ಪರ್ಧಿಸಲು ಪ್ರಕಾಶ್ ರಾಜ್ ಮುಂದಾಗಿದ್ದಾರೆ. 26 ಜನರ ತಮ್ಮದೇ ಒಂದು ತಂಡವನ್ನು ಮಾಡಿಕೊಂಡು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು ನಟ ಪ್ರಕಾಶ್ ರಾಜ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ಈ ವೇಳೆ ಪ್ರಕಾಶ್ ರಾಜ್, ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಕ್ಕೆ ಪ್ರಾಮುಖ್ಯತೆ ಇರಬೇಕು, ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಖ್ಯಾತನಾಮರು ವಹಿಸುವ ಪಾತ್ರ ಮತ್ತು ಬದಲಾವಣೆಯ ಅವಶ್ಯಕತೆಯ ಬಗ್ಗೆ ಅವರು ಮಾತನಾಡುತ್ತಾರೆ. 

ಪ್ರಜಾಪ್ರಭುತ್ವದಲ್ಲಿ ನೆಲೆಸಿರುವ ಜನರು ಅಭಿಪ್ರಾಯವನ್ನು ಹೊಂದಿರುವುದು ಎಷ್ಟು ಮುಖ್ಯ? ಅಥವಾ ಯಾವುದೇ ಅಭಿಪ್ರಾಯವನ್ನು ಹೊಂದಿರದಿರುವುದು ಸರಿಯೇ? 
ಜನರು ಅಭಿಪ್ರಾಯವನ್ನು ಹೊಂದಿರುವುದು ಬಹಳ ಮುಖ್ಯ. ನೀವು ಯಾವ ಕಡೆ ಇದ್ದರೂ, ವ್ಯತ್ಯಾಸಗಳಿರಬಹುದು, ಆದರೆ ಪ್ರತಿಯೊಬ್ಬರಿಗೂ ಅಭಿಪ್ರಾಯ ಇರಬೇಕು. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಪ್ರಶ್ನಿಸಲು. ಅದು ಇಲ್ಲದಿದ್ದರೆ ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟುವುದಿಲ್ಲ. ಅದು ನಮಗೆ ತುಂಬಾ ಭಾರವಾಗುತ್ತದೆ. ಅಲ್ಲದೆ ನಿಮಗೆ ಬೇಕಾದುದನ್ನು ನೀವು ಗುರುತಿಸಿಕೊಳ್ಳಬೇಕು. ನಾವು ಮಾತನಾಡಿದರೆ ಮಾತ್ರ, ನೀವು ಸರಿ ಅಥವಾ ತಪ್ಪು ಎಂದು ತಿಳಿಯುತ್ತದೆ. ನೀವು ವಾದ ಮಾಡುವುದನ್ನು ಕಲಿಯಬೇಕು. ಇಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು ಆದರೆ ತಟಸ್ಥವಾಗಿರುವುದರಲ್ಲಿ ಯಾವುದೇ ಅರ್ಥವಿಲ್ಲ.

ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಸೆಲೆಬ್ರಿಟಿಗಳ ಪಾತ್ರವೇನು?                                                               ಒಬ್ಬ ಸೆಲೆಬ್ರಿಟಿ ಹೇಡಿಯಾಗಿದ್ದರೆ, ಸಮಾಜವೂ ಹಾಗೇ ಆಗುತ್ತದೆ. ಒಬ್ಬ ಸೆಲೆಬ್ರಿಟಿಗೆ ಸಮಾಜದಲ್ಲಿ ವೇದಿಕೆ ಬೇಗ ಸಿಗುತ್ತದೆ. ಜನರ ಕಾರಣದಿಂದಾಗಿ ಅವರಿಗೆ ಧ್ವನಿ ಬಲಗೊಳ್ಳುತ್ತದೆ. ಧ್ವನಿ ಹೆಚ್ಚಿಸಲು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ನ್ಯಾಯೋಚಿತವಲ್ಲ. ಅಭಿಪ್ರಾಯವನ್ನು ರೂಪಿಸಲು ಬಂದಾಗ, ನೀವು ಪ್ರಭಾವಶಾಲಿಯಾಗುತ್ತೀರಿ. ಆದ್ದರಿಂದ, ಅದನ್ನು ಮಾಡಿ!

ಮಾತನಾಡಲು ನಿಮ್ಮನ್ನು ಏನು ಪ್ರೇರೇಪಿಸುತ್ತದೆ?                                                                                            ನಾವು ತೆರಿಗೆ ಕಟ್ಟುತ್ತೇವೆ. ನಿಮ್ಮ ಮನೆಯಿಂದ ಹೊರಬಂದ ನಿಮಿಷದಲ್ಲಿ ನೀವು ರಾಜಕೀಯದಲ್ಲಿದ್ದೀರಿ. ರಸ್ತೆಗಳು, ನೀರು, ಸಾಮರಸ್ಯ ನಿಮ್ಮ ರಾಜಕೀಯ. ಇದನ್ನೆಲ್ಲಾ ನಾವು ಪ್ರಶ್ನಿಸಬೇಕಾಗಿದೆ. ನೀವು ಶಾಂತವಾಗಿರಲು ಸಾಧ್ಯವಿಲ್ಲ ಎಂದರು. ನನ್ನ ನಟನೆಗಿಂತ ನನ್ನೊಳಗಿರುವವನಿಂದ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದರು. 

ನಾವು ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿದ್ದೇವೆ?                                                                                        ನಾವೇ ತುಂಬಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತೇವೆ. ನಮ್ಮ ನಡುವೆ ಯಾವುದೇ ವೈಜ್ಞಾನಿಕ ಮನೋಭಾವವಿಲ್ಲ, ಅಥವಾ ನಮ್ಮ ಸಮಾಜವು ತಲೆಮಾರುಗಳಿಂದ ಈ ಅಂಶದಲ್ಲಿ ವಿಕಸನಗೊಂಡಿಲ್ಲ. ಅಲ್ಲಿಯೇ ಸಮಸ್ಯೆ ಇದೆ. ಸರ್ಕಾರ ಮತ್ತು ಅದರ ನಾಯಕರ ಬಗ್ಗೆ ದೂರು ನೀಡುವುದು ಬೇರೆ ವಿಷಯ. ಮೊದಲು ನಾವು ನಮ್ಮನ್ನು ನೋಡಿಕೊಳ್ಳಬೇಕು. ನಾವು ಎಷ್ಟು ಜವಾಬ್ದಾರರಾಗಿರುತ್ತೇವೆ? ತಾಳ್ಮೆಯ ಸಂಸ್ಕೃತಿ, ಕೇಳುವ ಸಂಸ್ಕೃತಿ, ಅನುಸರಿಸುವ ಸಂಸ್ಕೃತಿ ಕಾಣೆಯಾಗಿದೆ. ಸಾಂಕ್ರಾಮಿಕ ರೋಗದಲ್ಲಿ ವೈದ್ಯರಾಗಬೇಕೆಂದು ಎಲ್ಲರೂ ಬಯಸುತ್ತಾರೆ. ನಾವು ಭಾರತೀಯರು ಕಾರಣವಿಲ್ಲದೆ ವಾದ ಮಾಡುತ್ತೇವೆ. ಆದರೆ ಮಾನವಕುಲವಾಗಿ ವಿಫಲರಾಗಿದ್ದೇವೆ. ಕೊರೋನಾ ಕೇವಲ ವೈರಸ್, ಆದರೆ ಇದು ನಮ್ಮ ಜೀವನವನ್ನು ನಾವು ನಿರ್ಮಿಸಿರುವ ಸ್ತಂಭಗಳನ್ನು ಪ್ರಶ್ನಿಸಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.