ಡಬ್ಬಿಂಗ್ ಹಂತದಲ್ಲಿ 'ರತ್ನನ್ ಪ್ರಪಂಚ'!
ಡಾಲಿ ಧನಂಜಯ್ ಅಭಿನಯದ ರೋಹಿತ್ ಪಡಕಿ ನಿರ್ದೇಶನದ ರತ್ನನ್ ಪ್ರಪಂಚ ಸಿನಿಮಾ ಡಬ್ಬಿಂಗ್ ಹಂತ ತಲುಪಿದೆ.

ಡಾಲಿ ಧನಂಜಯ್ ಅಭಿನಯದ ರೋಹಿತ್ ಪಡಕಿ ನಿರ್ದೇಶನದ ರತ್ನನ್ ಪ್ರಪಂಚ ಸಿನಿಮಾ ಡಬ್ಬಿಂಗ್ ಹಂತ ತಲುಪಿದೆ.
ರಾಜ್ಯ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್ಡೌನ್ ನಿಯಮಗಳು ಸಡಿಗೊಳ್ಳುತ್ತಿದ್ದು, ಈ ನಡುವಲ್ಲೇ ಚಿತ್ರರಂಗ ಕೂಡ ನಿಧಾನಗತಿಯಲ್ಲಿ ತನ್ನ ಕಾರ್ಯಗಳನ್ನು ಆರಂಭಿಸಲು ಮುಂದಾಗಿದೆ.
ಚಿತ್ರಕ್ಕಾಗಿ ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ನಟ ಧನಂಜಯ್ ಅವರು ಡಬ್ಬಿಂಗ್ ಕೆಲಸಗಳನ್ನು ಆರಂಭಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಹಿರಿಯ ನಟಿ ಉಮಾಶ್ರೀ ಹಾಗೂ ಇತರೆ ಕಲಾವಿದರೂ ಕೂಡ ಚಿತ್ರತಂಡ ಸೇರಲಿದ್ದಾರೆಂದು ಕಾರ್ತಿಕ್ ಗೌಡ ಅವರೊಂದಿಗೆ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿರುವ ಯೋಗಿ ಜಿ ರಾಜ್ ಅವರು ಹೇಳಿದ್ದಾರೆ.
ರತ್ನನ್ ಪರಪಂಚ ಚಿತ್ರದ ಚಿತ್ರೀಕರಣ ಈಗಾಗಲೇ ಕೊನೆಯ ಹಂತ ತಲುಪಿದ್ದು, 10 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಅನುಮತಿಗಾಗಿ ಚಿತ್ರತಂಡ ಕಾದು ಕುಳಿತಿದ್ದು, ಒಂದು ವೇಳೆ ಅನುಮತಿ ಸಿಗದೇ ಹೋದಲ್ಲಿ ಹೈದರಾಬಾದ್ ನಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.
ರೋಹಿತ್ ಪಡಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರತ್ನನ್ ಪ್ರಪಂಚ ಚಿತ್ರದಲ್ಲಿ ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆಜಿರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಶ್ರೀಶಾ ಕುಡವಳ್ಳಿ ಛಾಯಾಗ್ರಹಣ ಮತ್ತು ಬಿ ಅಜನೀಶ್ ಲೋಕನಾಥ್ ಸಂಗೀತವಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


