ಸಿನಿಮಾ ಸುದ್ದಿ

'777 ಚಾರ್ಲಿ' ಮಲಯಾಳಂ ಆವೃತ್ತಿಗೆ ವಿನೀತ್ ಶ್ರೀನಿವಾಸನ್ ಹಿನ್ನೆಲೆ ಧ್ವನಿ!

ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಸಿನಿಮಾ ಟೀಸರ್ ಜೂನ್ 6ರಂದು ರಿಲೀಸ್ ಆಗಲಿದ್ದು, ಐದು ಭಾಷೆಗಳಲ್ಲಿ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ.

'777 ಚಾರ್ಲಿ' ಮಲಯಾಳಂ ಆವೃತ್ತಿಗೆ ವಿನೀತ್ ಶ್ರೀನಿವಾಸನ್ ಹಿನ್ನೆಲೆ ಧ್ವನಿ!
ವಿನೀತ್ ಶ್ರೀನಿವಾಸನ್
Published On :

ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಸಿನಿಮಾ ಟೀಸರ್ ಜೂನ್ 6ರಂದು ರಿಲೀಸ್ ಆಗಲಿದ್ದು, ಐದು ಭಾಷೆಗಳಲ್ಲಿ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ.

ನಿರ್ದೇಶಕರು 2 ನಿಮಿಷದ ಹಾಡಿನ ಟೀಸರ್ ಅನ್ನು ಕತ್ತರಿಸಿರುವುದು ಅಸಾಮಾನ್ಯ ಎನ್ನಲಾಗುತ್ತಿದೆ. ಲ್ಯಾಬ್ರಡಾರ್ ನಾಯಿಯೊಂದರ ಕುರಿತ ಜೀವನದ ಕಥೆ ಇದಾಗಿದೆ. ರಕ್ಷಿತ್ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಪರಮಾವ್ ಸ್ಟುಡಿಯೋ ಬ್ಯಾನರ್ ನಲ್ಲಿ ಜಿಎಸ್ ಗುಪ್ತಾ ,ಸಿನಿಮಾ ನಿರ್ಮಾಣ ಮಾಡಿದ್ದಾರೆ. ನೋಬಿನ್ ಪೌಲ್ ಸಿನಿಮಾಗೆ ಸಂಗೀತ ನೀಡಿದ್ದಾರೆ.

ವಿವಿಧ ಭಾಷೆಗಳಲ್ಲಿ ಸಿನಿಮಾ ಟೀಸರ್ ರಿಲೀಸ್ ಆಗಲಿದ್ದು, ಮಲಯಾಳಂ ಭಾಷೆಯ ಟೀಸರ್ ಗೆ ಪ್ರಸಿದ್ದ ಹಿನ್ನೆಲೆಗಾಯಕ ನಟ ಹಾಗೂ ನಿರ್ದೇಶಕ ವಿನೀತ್ ಶ್ರೀನಿವಾಸನ್ ಧ್ವನಿ ನೀಡಿದ್ದಾರೆ.

ಟೀಸರ್ ನೋಡಿದ ವಿನೀತ್ ಗೆ ಸಿನಿಮಾದ ಕಥಾವಸ್ತು ತುಂಬಾ ಹಿಡಿಸಿದೆಯಂತೆ. ಹೀಗಾಗಿ ಪ್ರಾಜೆಕ್ಟ್ ನ ಭಾಗವಾಗಲು ಬಯಸಿದ್ದಾರೆ. ಟೀಸರ್‌ನಲ್ಲಿ ಹೊರಬರಲಿರುವ ಹಾಡಿನ ಹೊರತಾಗಿಯೂ, ಅವರು ಚಿತ್ರಕ್ಕಾಗಿ ಒಂದು ಹಾಡನ್ನೂ ಹಾಡಿದ್ದಾರೆ ಎಂದು ಕಿರಣರಾಜ್ ಹೇಳುತ್ತಾರೆ, ಕನ್ನಡ ಮತ್ತು ಹಿಂದಿ ಆವೃತ್ತಿಗಳನ್ನು ಶುಭಮ್ ರಾಯ್ ಹಾಡಿದ್ದು,  ಕಾರ್ತಿಕ್ ತಮಿಳು ಮತ್ತು ತೆಲುಗು ಭಾಷೆಗೆ ಧ್ವನಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.