ಉಪೇಂದ್ರ ಮುಂದಿನ ಸಿನಿಮಾಗೆ 'ರಾಜಾಹುಲಿ' ನಿರ್ದೇಶಕ ಗುರು ದೇಶಪಾಂಡೆ ಆ್ಯಕ್ಷನ್ ಕಟ್!
ನಟ ಉಪೇಂದ್ರ ಕೋವಿಡ್ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಇದೇ ವೇಳೆ ಗಾಂಧಿ ನಗರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

ನಟ ಉಪೇಂದ್ರ ಕೋವಿಡ್ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಇದೇ ವೇಳೆ ಗಾಂಧಿ ನಗರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಉಪೇಂದ್ರ ಅವರ ಮುಂದಿನ ಕಮರ್ಷಿಯಲ್ ಸಿನಿಮಾವನ್ನು ರಾಜಾಹುಲಿ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉಪೇಂದ್ರ ಅವರ ಜೊತೆ ಈಗಾಗಲೇ ಮೊದಲ ಸುತ್ತಿನ ಮಾತುಕತೆ ಪೂರ್ಣಗೊಂಡಿದ್ದು ಈ ಪ್ರಾಜೆಕ್ಟ್ ನಿರ್ದೇಶಕರ ಜಿ ಸಿನಿಮಾಸ್ ಬ್ಯಾನರ್ ಅಡಿ ತಯಾರಾಗಲಿದೆ ಎಂದು ಮೂಲಗಳು ತಿಳಿಸಿವೆ.
ಲಾಕ್ ಡೌನ್ ನಂತರ ನಟ ಉಪೇಂದ್ರ ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ, ಇದರ ಜೊತೆಗೆ ಬುದ್ದಿವಂತ-2 ಹಾಗೂ ತ್ರಿಶೂಲಂ ಸಿನಿಮಾ ಕಡೆ ಗಮನ ಹರಿಸಲಿದ್ದಾರೆ. ಈ ಎರಡು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ.
ಇದೇ ವೇಳೆ ಉಪೇಂದ್ರ ಕೆ.ಮಾದೇಶ ನಿರ್ದೇಶನ ಲಗಾಮ್ ಸಿನಿಮಾದಲ್ಲಿ ಹಾಗೂ ಶಶಾಂಕ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಈಗಾಗಲೇ ಉಪೇಂದ್ರ ತೆಲುಗಿನ ಘಣಿ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಮಂಜು ಮಾಂಡವ್ಯ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೆಲ್ಲದರ ನಡುವೆಯೇ ಗುರು ದೇಶಪಾಂಡೆ ಸಿನಿಮಾದಲ್ಲಿಯೂ ಉಪ್ಪಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಯಶ್ ನಟನೆಯ ರಾಜಾಹುಲಿ ಸಿನಿಮಾ ನಿರ್ದೇಶಿಸಿ ಗುರು ದೇಶಪಾಂಡೆ ಯಶಸ್ಸು ಕಂಡಿದ್ದರು. ಅದಾದ ನಂತರ ರುದ್ರ ತಾಂಡವ, ಸಂಹಾರ ಹಾಗೂ ಪಡ್ಡೆಹುಲಿ ಸಿನಿಮಾಗಳಂತ ವಿಭಿನ್ನ ಕಥೆಯ ಚಿತ್ರ ನಿರ್ದೇಶಿಸಿದ್ದಾರೆ.
ಜಂಟಲ್ ಮ್ಯಾನ್ ಅವರ ನಿರ್ಮಾಣದ ಮೊದಲ ಸಿನಿಮಾವಾಗಿದೆ. ಈಗ, ಉಪೇಂದ್ರ ಅವರೊಂದಿಗಿನ ಈ ಯೋಜನೆಯು ಮತ್ತೊಂದು ದೊಡ್ಡ ಟಿಕೆಟ್ ಚಿತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


