ಸಿನಿಮಾ ಸುದ್ದಿ

ಸಂಜಯ್ ದತ್ ಹುಟ್ಟುಹಬ್ಬ: ಕೆಜಿಎಫ್: ಚಾಪ್ಟರ್ 2 ತಂಡದಿಂದ ವಿಲನ್ 'ಅಧೀರ'ನ ವಿಶೇಷ ಪೋಸ್ಟರ್ ಬಿಡುಗಡೆ

ಸಂಜಯ್ ದತ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್2 ಚಿತ್ರದಲ್ಲಿ ವಿಲನ್ ಅಧೀರ ಪಾತ್ರದ ಹೊಸ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಸಂಜಯ್ ದತ್ ಹುಟ್ಟುಹಬ್ಬ: ಕೆಜಿಎಫ್: ಚಾಪ್ಟರ್ 2 ತಂಡದಿಂದ ವಿಲನ್ 'ಅಧೀರ'ನ ವಿಶೇಷ ಪೋಸ್ಟರ್ ಬಿಡುಗಡೆ
ಸಂಜಯ್ ದತ್ ಪಾತ್ರದ ವಿಶೇಷ ಪೋಸ್ಟರ್
Published On :

ಸಂಜಯ್ ದತ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್2 ಚಿತ್ರದಲ್ಲಿ ವಿಲನ್ ಅಧೀರ ಪಾತ್ರದ ಹೊಸ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿರುವ ಕೆಜಿಎಫ್ -ಚಾಪ್ಟರ್ 2 ಈ ವರ್ಷದ ಅತಿ ನಿರೀಕ್ಷಿತ ಚಿತ್ರವಾಗಿದ್ದು ಇಂದು ಸಂಜಯ್ ದತ್ ಅವರ ಹುಟ್ಟುಹಬ್ಬ ಪ್ರಯುಕ್ತ ಚಿತ್ರದಲ್ಲಿ ಅವರ ಅಧೀರ ಪಾತ್ರದ ಹೊಸ ಪೋಸ್ಟರ್ ನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಿದೆ.

ಹೊಸ ಪೋಸ್ಟರ್ ನಲ್ಲಿ ಸಂಜಯ್ ದತ್ ಕೈಯಲ್ಲಿ ಕತ್ತಿ ಹಿಡಿದುಕೊಂಡು ಗಾಢ, ತೀವ್ರವಾದ ಮತ್ತು ಖಡಕ್ ಫೋಸ್ ನೀಡಿದ್ದು ಆಕ್ಷನ್ ಆಧಾರಿತ ಚಿತ್ರದಲ್ಲಿ ಅವರ ಫೋಟೋ ನೋಡಿದ ಅಭಿಮಾನಿಗಳು ಪುಳಕಗೊಂಡಿದ್ದಾರೆ. ನಟನ ನೋಟದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿ ಮುಂದಿನ ಸಿನೆಮಾಕ್ಕೆ ಶುಭ ಕೋರಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-ಚಾಪ್ಟರ್ 2 ಈಗಾಗಲೇ ಬ್ಲಾಕ್ ಬಸ್ಟರ್ ಚಿತ್ರವೆನಿಸಿದೆ. ಆಡಿಯೋ ಹಕ್ಕುಗಳು ಲಹರಿ ಮ್ಯೂಸಿಕ್ ಗೆ ಮಾರಾಟವಾಗಿದೆ. ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟೆಂಡನ್ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.