ಬಹುಭಾಷಾ ನಟ ಚಿರಾಗ್ ಜಾನಿ ಸ್ಯಾಂಡಲ್ ವುಡ್ ಗೆ ಪ್ರವೇಶ!
ನಟ ಚಿರಾಗ್ ಜಾನಿ ನಿರ್ದೇಶಕ ಖಾದರ್ ಕುಮಾರ್ ಅವರೊಂದಿಗೆ ಪ್ರಜ್ವಲ್ ದೇವರಾಜ್ ಅವರ ಮುಂಬರುವ ಚಿತ್ರ "ವೀರಂ" ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ನಟ ಚಿರಾಗ್ ಜಾನಿ ನಿರ್ದೇಶಕ ಖಾದರ್ ಕುಮಾರ್ ಅವರೊಂದಿಗೆ ಪ್ರಜ್ವಲ್ ದೇವರಾಜ್ ಅವರ ಮುಂಬರುವ ಚಿತ್ರ "ವೀರಂ" ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ಚಿತ್ರದಲ್ಲಿ ವಿಲನ್ ಆಗಿ ನಟಿಸಲಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಗುಜರಾತಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿರುವ ಚಿರಾಗ್ ನವ ಉದ್ಯಮಕ್ಕೆ ವೇಶಿಸಲು ಉತ್ಸುಕರಾಗಿದ್ದಾರೆ.
ನಾನು ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ವಿಶೇಷವಾಗಿ ಕೆಜಿಎಫ್ ನ ಮೂಲಕ ಕನ್ನಡ ಉದ್ಯಮವು ವಿವಿಧ ಇಂಡಸ್ಟ್ರಿಗಳಲ್ಲಿ ಗಮನ ಸೆಳೆದಿದೆ, ಮತ್ತು ಎರಡನೆಯದಾಗಿ "ವೀರಂ" ಕಥೆ ಮತ್ತು ಸ್ಟಾರ್ ಪಾತ್ರವರ್ಗ ನನ್ನ ಗಮನ ಸೆಳೆದಿದೆ. ನಾನು ಹಾಗೂ ಶ್ರೀನಗರ ಕಿಟ್ಟಿ ಮತ್ತು ದೀಪಕ್ ಖಳನಾಯಕನ ಪಾತ್ರಗಳನ್ನು ಮಾಡುತ್ತಿದ್ದೇವೆ. ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಚಿರಾಗ್ ಹೇಳುತ್ತಾರೆ.
ಪ್ರಸ್ತುತ ರಾಮ್ ಅಭಿನಯದ ನಿರ್ದೇಶಕ ಲಿಂಗುಸಾಮಿ ಸಿನಿಮಾ ಚಿತ್ರೀಕರಣದಲ್ಲಿದ್ದ ಈ ನಟ ಜುಲೈ 21 ರಂದು "ವೀರಂ" ಸೆಟ್‌ಗಳಿಗೆ ಸೇರಲಿದ್ದಾರೆ.
"ನಾನು ಹೆಚ್ಚಾಗಿ ಆಕ್ಷನ್ ಮತ್ತು ಎಮೋಷನ್ ಆಧಾರಿತ ಕಥೆಗಳಿಗೆ ಒಲವು ತೋರುತ್ತಿದ್ದೇನೆ ಮತ್ತು ಪ್ರಮುಖ ನಾಯಕ, ಪ್ರಜ್ವಲ್ ಮತ್ತು ಪಾತ್ರವರ್ಗ ಸೇರಿದಂತೆ ಇತರ ಕೆಲವು ಅಂಶಗಳನ್ನು ನೋಡಿದಾಗ ಈ ಸಿನಿಮಾದಲ್ಲಿ ನಟಿಸಲು ನನಗೆ ಕುತೂಹಲವಾಗಿತ್ತು" ಎಂದರು.
‘ಬ್ಲಾಕ್‌ಬಸ್ಟರ್ ಖಳನಾಯಕ’ ಎಂದು ಟ್ಯಾಗ್ ಆಗಿರುವ ನಟ ಕನ್ನಡದಲ್ಲಿ ಕೂಡ ಈ ಟ್ಯಾಗ್ ಅನ್ನು ಮುಂದೆ ಒಯ್ಯುವ ಭರವಸೆ ಹೊಂದಿದ್ದಾರೆ.
"ನಾನು ಮೂಲತಃ ಗುಜರಾತಿ ಚಲನಚಿತ್ರಗಳಲ್ಲಿ ನಾಯಕನಾಗಿ ನಟಿಸಿದೆ. ಆದರೆ ನಾನು ಇನ್ನೊಂದು ಇಂಡಸ್ಟ್ರಿಗೆ ವೇಶಿಸಲು ನಿರ್ಧರಿಸಿದಾಗ, ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಒಳ್ಳೆಯದು ಎಂದು ನಾನು ಭಾವಿಸಿದೆ, ಏಕೆಂದರೆ ಇದು ಆಸಕ್ತಿದಾಯಕ ಕ್ಷೇತ್ರವಾಗಿದೆ.ನನ್ನ ಬಹುಮುಖತೆಯನ್ನು ಸಾಬೀತುಪಡಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.
ಶಶಿಧರ್ ಸ್ಟುಡಿಯೋಸ್ ನಿರ್ಮಾಣದಡಿಯಲ್ಲಿ ಕೆ.ಎಂ.ಶಶೀಧರ್ ಅವರು "ವೀರಂ" ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈಗ 14 ದಿನಗಳ ಚಿತ್ರೀಕರಣ ಬಾಕಿ ಇದೆ.ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಛಾಯಾಗ್ರಹಣ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


