ಸಿನಿಮಾ ಸುದ್ದಿ

ಆಗಸ್ಟ್ 3 ರಿಂದ 'ಶಬರಿ ಸೆರ್ಚಿಂಗ್ ಫಾರ್ ರಾವಣ' ಶೂಟಿಂಗ್

ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಶಬರಿ ಸೆರ್ಚಿಂಗ್ ಫಾರ್ ರಾವಣ ಸಿನಿಮಾ ಶೂಟಿಂಗ್ ಆಗಸ್ಟ್ 3 ರಿಂದ ಆರಂಭವಾಗಲಿದೆ.

ಆಗಸ್ಟ್ 3 ರಿಂದ 'ಶಬರಿ ಸೆರ್ಚಿಂಗ್ ಫಾರ್ ರಾವಣ' ಶೂಟಿಂಗ್
ರಚಿತಾ ರಾಮ್
Published On :

ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಶಬರಿ ಸೆರ್ಚಿಂಗ್ ಫಾರ್ ರಾವಣ ಸಿನಿಮಾ ಶೂಟಿಂಗ್ ಆಗಸ್ಟ್ 3 ರಿಂದ ಆರಂಭವಾಗಲಿದೆ.

ಈ ಹಿಂದೆ ಎಡಿಟರ್ ಆಗಿ ಕೆಲಸ ಮಾಡಿದ್ದ ನವೀನ್ ಶೆಟ್ಟಿ  ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ರಿವೇಂಜ್ ಥ್ರಿಲ್ಲರ್ ಕತೆ ಹೊಂದಿದೆ. ಮೊದಲ ಶೆಡ್ಯೂಲ್ ಮೈಸೂರಿನಲ್ಲಿ ಆರಂಭವಾಗಲಿದ್ದು, 15 ದಿನ ನಡೆಯಲಿದೆ.

ಸಿನಿಮಾದಲ್ಲಿ ರಘು ಮುಖರ್ಜಿ, ಅರ್ಚನ ಕೊಟ್ಟಿಗೆ ಮತ್ತು ಬೆಂಕಿಪೊಟ್ಣ ಸಿನಿಮಾ ನಾಯಕ ಪ್ರತಾಪ್ ನಾರಾಯಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣವಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ರಚಿತಾ ರಾಮ್ ಇದರಲ್ಲಿ ಎರಡು ಶೇಡ್ ಗಳಲ್ಲಿ ನಟಿಸಿದ್ದಾರೆ. ಶಬರಿ ಮತ್ತು ರಾವಣನ ಪಾತ್ರವಿದ್ದು ರಚಿತಾ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ ಎಂದು ನವೀನ್ ಶೆಟ್ಟಿ ತಿಳಿಸಿದ್ದಾರೆ. ಶಬರಿಗಾಗಿ ರಚಿತಾ ಮಾರ್ಪಾಡು ಮಾಡಿಕೊಳ್ಳುತ್ತಿದ್ದು ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಮಯ ತೆಗೆದುಕೊಂಡಿದ್ದಾರೆ ಎಂದು ನವೀನ್ ತಿಳಿಸಿದ್ದಾರೆ.

ಶಬರಿ ಸಿನಿಮಾ ಜೊತೆ ರಚಿತಾ, ಪ್ರಜ್ವಲ್ ದೇವರಾಜ್ ಜೊತೆ ವೀರಂ ಮತ್ತು ಅಜಯ್ ರಾವ್ ನಟನೆಯ ಲವ್ ಯೂ ರಚ್ಚು ಸಿನಿಮಾ ನಾಯಕಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.