ಸಿನಿಮಾ ಸುದ್ದಿ

ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ ಮೂಲಕ ಮತ್ತೆ ಒಂದಾದ ಎಪಿ ಅರ್ಜುನ್- ಧ್ರುವ ಸರ್ಜಾ

ಉದಯ್ ಮೆಹ್ತಾ ಪ್ರೊಡಕ್ಷನ್ ಹೌಸ್ ನಲ್ಲಿ ಮುಂದಿನ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಧ್ರುವ ನಟನೆಯ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶಿಸಲಿದ್ದಾರೆ

ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ ಮೂಲಕ ಮತ್ತೆ ಒಂದಾದ ಎಪಿ ಅರ್ಜುನ್- ಧ್ರುವ ಸರ್ಜಾ
ಧ್ರುವ ಸರ್ಜಾ
Published On :

ಉದಯ್ ಮೆಹ್ತಾ  ಪ್ರೊಡಕ್ಷನ್ ಹೌಸ್ ನಲ್ಲಿ ಮುಂದಿನ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಧ್ರುವ ನಟನೆಯ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶಿಸಲಿದ್ದಾರೆ. 2012ರಲ್ಲಿ ಎಪಿ ಅರ್ಜುನ್ ಧ್ರುವ ಸರ್ಜಾ ನಟನೆಯ ಅದ್ಧೂರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ರಾಧಿಕಾ ಪಂಡಿತ್ ನಾಯಕಿಯಾಗಿದ್ದರು.

ಪೊಗರು ನಂತರ ದುಬಾರಿ ಸಿನಿಮಾ ಮಾಡಲು ಧ್ರುವ ಯೋಜಿಸಿದ್ದರು,  ಆದರೆ ಅದು ಟೇಕಾಫ್ ಆಗದ ಕಾರಣ ಎಪಿ ಅರ್ಜನ್ ಸಿನಿಮಾ ಗೆ ಕೈ ಜೋಡಿಸಿದ್ದಾರೆ. ಜುಲೈ 7 ರಂದು ಸಿನಿಮಾ ಮುಹೂರ್ಥ ನಡೆಯಲಿದ್ದು, ಶೀಘ್ರವೇ ಅಧಿಕೃತ ಮಾಹಿತಿ ಹೊರಬೀಳಲಿದೆ.

ಎಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ 2017 ರಲ್ಲಿ ರಿಲೀಸ್ ಆಗಿತ್ತು. ಅದಾದ ನಂತರ ಅದ್ಧೂರಿ ಲವ್ ಸಿನಿಮಾ ಘೋಷಿಸಿದ್ದರು, ಆದರೆ ಕೊರೋನಾ ಸಾಂಕ್ರಾಮಿಕದ ಕಾರಣ ಅದು ವಿಳಂಬವಾಗುತ್ತಿದೆ.

ಇದೊಂದು ಕಮರ್ಷಿಯಲ್ ಸಿನಿಮಾವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಶೂಟಿಂಗ್ ಆರಂಭಿಸಲು ಚಿತ್ರತಂಡ ಯೋಜಿಸುತ್ತಿದ್ದು ಅಗತ್ಯ ಸಿದ್ಧತೆ ನಡೆಸುತ್ತಿದೆ. ಇನ್ನೂ ಕಲಾವಿದರ ಆಯ್ಕೆ ಪೂರ್ಣಗೊಳ್ಳಬೇಕಿದೆ. ಸತ್ಯ ಹೆಗಡೆ ಛಾಯಾಗ್ರಾಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.