'ಅರ್ಜುನ್ ಗೌಡ' ಸಿನಿಮಾವನ್ನು 'ಲಾಕಪ್ ಡೆತ್' ಥರ ಮಾಡಬೇಕೆಂದು ನಿರ್ಮಾಪಕ ರಾಮು ಆಶಿಸಿದ್ದರು: ಪ್ರಜ್ವಲ್ ದೇವರಾಜ್
ಚಿಕ್ಕಂದಿನಲ್ಲಿ, ರಾಮು ಅವರ ತೊಡೆಯ ಮೇಲೆ ಕುಳಿತು ಚಿತ್ರೀಕರಣ ವೀಕ್ಷಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡು ಪ್ರಜ್ವಲ್ ಭಾವುಕರಾಗುತ್ತಾರೆ. ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಕಾಣುತ್ತಿದೆ.

ಬೆಂಗಳೂರು: 'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದೊಂದಿಗೆ 2021 ವರ್ಷ ಆರಂಭಿಸಿದ್ದ ನಟ ಪ್ರಜ್ವಲ್ ದೇವರಾಜ್, 'ಅರ್ಜುನ್ ಗೌಡ' ಸಿನಿಮಾದೊಂದಿಗೆ ವರ್ಷವನ್ನು ಅಂತ್ಯಗೊಳಿಸುತ್ತಿದ್ದಾರೆ.
ಇದನ್ನೂ ಓದಿ: 'ಅರ್ಜುನ್ ಗೌಡ' ಸಿನಿಮಾವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರೆದುರು ತರುವ ರಾಮು ಆಸೆಯನ್ನು ನಾನು ಪೂರೈಸುವೆ: ಮಾಲಾಶ್ರೀ
ಅರ್ಜುನ್ ರೆಡ್ಡಿ ಸಿನಿಮಾ ನಿರ್ಮಾಪಕ ರಾಮು ಅವರು ಕಂಡ ಕನಸಾಗಿತ್ತು. ಲಕ್ಕಿ ಶಂಕರ್ ನಿರ್ದೇಶನದಲ್ಲಿ ಮೂಡಿಬಂಡಿರುವ ಅರ್ಜುನ್ ಗೌಡ ಸಿನಿಮಾವನ್ನು ಲಾಕಪ್ ಡೆತ್ ಥರ ಮಾಡಬೇಕು ಎನ್ನುವ ಇಚ್ಛೆಯನ್ನು ಹೊಂದಿದ್ದರು ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ. ರಾಮು ಸಿನಿಮಾ ಪೂರ್ತಿಗೊಳ್ಳುವುದಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ್ದರು.
ಆಕ್ಷನ್ ಸಿನಿಮಾಗಳಿಗೆ ಹೆಸರಾದ ರಾಮು ಅವರ ಸಿನಿಮಾಗಳ ಆಕ್ಷನ್ ಸನ್ನಿವೇಶ ಚಿತ್ರೀಕರಣ ಸಂದರ್ಭದಲ್ಲಿ ತಾವೂ ಹಾಜರಿರುತ್ತಿದ್ದುದನ್ನು ಪ್ರಜ್ವಲ್ ದೇವರಾಜ್ ನೆನಪಿಸಿಕೊಂಡಿದ್ದಾರೆ. ರಾಮು ಅವರ ತೊಡೆಯ ಮೇಲೆ ಕುಳಿತು ಚಿತ್ರೀಕರಣ ವೀಕ್ಷಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡು ಪ್ರಜ್ವಲ್ ಭಾವುಕರಾಗುತ್ತಾರೆ. ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಕಾಣುತ್ತಿದೆ.
ಇದನ್ನೂ ಓದಿ: ಜನವರಿ 14ಕ್ಕೆ ಶರಣ್ ಅಭಿನಯದ 'ಅವತಾರ ಪುರುಷ' ಬಿಡುಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


