ಸಿನಿಮಾ ಸುದ್ದಿ

ನಿರ್ದೇಶಕರು ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಿರುವುದು ಸಂತಸ ನೀಡಿದೆ: ದಿಗಂತ್ 'ಹುಟ್ಟುಹಬ್ಬದ ಶುಭಾಶಯಗಳು'

ನಾಗರಾಜ್ ಬೆತೂರ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಕಾಣುತ್ತಿದೆ.

ನಿರ್ದೇಶಕರು ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಿರುವುದು ಸಂತಸ ನೀಡಿದೆ: ದಿಗಂತ್ 'ಹುಟ್ಟುಹಬ್ಬದ ಶುಭಾಶಯಗಳು'
ಸಿನಿಮಾ ಪೋಸ್ಟರ್
Published On :

ಬೆಂಗಳೂರು: ಮಂಗಳವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸ್ಯಾಂಡಲ್ ವುಡ್ ನಟ ದಿಗಂತ್ ಅವರಿಗೆ ಅಭಿಮಾನಿಗಳು 'ಹುಟ್ಟುಹಬ್ಬದ ಶುಭಾಶಯಗಳು' ಎಂದು ವಿಶ್ ಮಾಡುವುದಕ್ಕೆ ಎರಡು ಕಾರಣಗಳಿದ್ದವು.

ದಿಗಂತ್ ಹುಟ್ಟಿದಹಬ್ಬ ಒಂದು ಕಾರಣವಾದರೆ ಎರಡನೇ ಕಾರಣ ಬಿಡುಗಡೆಗೆ ಸಿದ್ಧವಾಗಿರುವ ದಿಗಂತ್ ಅವರ ಮುಂದಿನ ಸಿನಿಮಾದ ಹೆಸರು ಕೂಡಾ 'ಹುಟ್ಟುಹಬ್ಬದ ಶುಭಾಶಯಗಳು'!

ಕಳೆದ 2 ವರ್ಷಗಳಿಂದ ದಿಂಗತ್ ಈ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತೀ ಬಾರಿ ಈ ಸಿನಿಮಾದ ಪೋಸ್ಟರ್ ಪ್ರಕಟವಾದಾಗಲೂ ಅಭಿಮಾನಿಗಳು ಆ ದಿನ ತಮ್ಮ ಹುಟ್ಟುಹಬ್ಬ ಇರಬೇಕು ಎಂದು ತಿಳಿದು ವಿಶ್ ಮಾಡುತ್ತಿದ್ದರು ಎಂದು ದಿಗಂತ್ ಹೇಳಿಕೊಂಡಿದ್ದಾರೆ. 

'ಹುಟ್ಟುಹಬ್ಬದ ಶುಭಾಶಯಗಳು' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಬರ್ತ್ ಡೇ ಪಾರ್ಟಿಯಲ್ಲಿ ನಡೆಯುವ ಕೊಲೆಯ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ನಾಗರಾಜ್ ಬೆತೂರ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: 192 ಕಿಮೀ ಸೈಕಲ್ ತುಳಿದ ದಿಗಂತ್!

ಇದುವರೆಗಿಂತ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂದು ದಿಗಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಗೆ ನಿರ್ದೇಶಕರು ವಿಭಿನ್ನ ಬಗೆಯ ಪಾತ್ರಗಳನ್ನು ನೀಡುತ್ತಿರುವ ಬಗ್ಗೆ ದಿಗಂತ್ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.