ಸಿನಿಮಾ ಸುದ್ದಿ

'ಕನ್ನಡತಿ' ಧಾರಾವಾಹಿಗೆ ರಮೋಲಾ ಗುಡ್ ಬೈ!: ಸಾನಿಯಾ ಪಾತ್ರಕ್ಕೆ ಮತ್ತೊಬ್ಬ ನಟಿ

ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ, ಭುವನೇಶ್ವರಿಗೆ ಕೆಟ್ಟದು ಮಾಡುತ್ತ, ರತ್ನಮಾಲಾ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಸದಾ ಯೋಜನೆ ಹಾಕುವ ಪಾತ್ರದಲ್ಲಿ ನಟಿಸುತ್ತಿದ್ದ ರಮೋಲಾ ಸೀರಿಯಲ್ ಗೆ ಗುಡ್ ಬೈ ಹೇಳಿದ್ದಾರೆ.

'ಕನ್ನಡತಿ' ಧಾರಾವಾಹಿಗೆ ರಮೋಲಾ ಗುಡ್ ಬೈ!: ಸಾನಿಯಾ ಪಾತ್ರಕ್ಕೆ ಮತ್ತೊಬ್ಬ ನಟಿ
ರಮೋಲಾ
Published On :

ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ, ಭುವನೇಶ್ವರಿಗೆ ಕೆಟ್ಟದು ಮಾಡುತ್ತ, ರತ್ನಮಾಲಾ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಸದಾ ಯೋಜನೆ ಹಾಕುವ ಪಾತ್ರದಲ್ಲಿ ನಟಿ ರಮೋಲಾ ಅಭಿನಯಿಸಿದ್ದರು. ಕನ್ನಡತಿ ಧಾರಾವಾಹಿಯಲ್ಲಿ ಪಕ್ಕಾ ನೆಗೆಟಿವ್ ಶೇಡ್ ಆದ ಸಾನಿಯಾ ಪಾತ್ರವನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಆದರೆ ಈಗ ಈ ಪಾತ್ರದಿಂದ ನಟಿ ರಮೋಲಾ ಅವರು ಹೊರನಡೆದಿದ್ದಾರೆ.

‘ಕನ್ನಡತಿ’ ಧಾರಾವಾಹಿ ಪ್ರಸಾರ ಪ್ರಾರಂಭಿಸಿ ಕೆಲವು ವರ್ಷ ಕಳೆದಿದೆ. ಈ ಧಾರಾವಾಹಿಯಲ್ಲಿ ಆರಂಭದಿಂದಲೂ ಸಾನಿಯಾ ಪಾತ್ರವನ್ನು ರಮೋಲಾ ನಿರ್ವಹಿಸುತ್ತಿದ್ದರು. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್​ ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಈಗ ರಮೋಲಾ ಧಾರಾವಾಹಿ ತಂಡ ತೊರೆದಿದ್ದಾರೆ.

ರಮೋಲಾ ‘ಕನ್ನಡತಿ’ಯಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ. ಅವರ ನಟನೆ ಅನೇಕರಿಗೆ ಇಷ್ಟವಾಗಿತ್ತು. ಅವರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಿದ್ದರು. ಈಗ ಈ ಸ್ಥಾನವನ್ನು ‘ಹೂ ಮಳೆ’ ಖ್ಯಾತಿಯ ಆರೋಹಿ ನೈನಾ ತುಂಬಿದ್ದಾರೆ. ಬೇರೆ ಭಾಷೆಯಿಂದ ಆಫರ್​ ಬಂದ ಕಾರಣ ಸಾನಿಯಾ ಈ ಧಾರಾವಾಹಿ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.